Uttar Pradesh: ಆಸ್ಪತ್ರೆಯ ಲಿಫ್ಟ್ನಲ್ಲಿ ಸಿಲುಕಿಕೊಂಡ 12 ರೋಗಿಗಳು, 20 ನಿಮಿಷಗಳ ಬಳಿಕ ರಕ್ಷಣೆ
ಆಸ್ಪತ್ರೆಯ ಲಿಫ್ಟ್ನಲ್ಲಿ 12 ಮಂದಿ ರೋಗಿ ಸಿಲುಕಿಕೊಂಡಿದ್ದು 20 ನಿಮಿಷಗಳ ಬಳಿಕ ರಕ್ಷಣೆ ಮಾಡಿರುವ ಘಟನೆ ಉತ್ತರ ಪ್ರದೇಶ(Uttar Pradesh)ದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆಯ ಲಿಫ್ಟ್ನಲ್ಲಿ 12 ಮಂದಿ ರೋಗಿ ಸಿಲುಕಿಕೊಂಡಿದ್ದು 20 ನಿಮಿಷಗಳ ಬಳಿಕ ರಕ್ಷಣೆ ಮಾಡಿರುವ ಘಟನೆ ಉತ್ತರ ಪ್ರದೇಶ(Uttar Pradesh)ದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಯ ಎರಡನೇ ಮಹಡಿಗೆ ಹೋಗಲು ಕೆಲವು ರೋಗಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ಲಿಫ್ಟ್ ಏರಿದ್ದರು. ಲಿಫ್ಟ್ ಮೇಲಕ್ಕೆ ಹೋಗುತ್ತಿದ್ದಾಗ, ಅದು ಮಧ್ಯದಲ್ಲಿ ನಿಂತಿತ್ತು.
ಗಾಬರಿಗೊಂಡ ಜನರು ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದರು, ಅವರ ಕೂಗು ಹೊರಗಡೆಯೂ ಕೇಳಿತ್ತು. ತಕ್ಷಣವೇ ಲಿಫ್ಟ್ನ್ನು ಸರಿಪಡಿಸುವ ಕಾರ್ಯ ಕೈಗೊಳ್ಳಲಾಯಿತು. ಘಟನೆಯ ಸಮಯದಲ್ಲಿ ಎಲಿವೇಟರ್‌ಗಳ ಕಾರ್ಯನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿ ಅಲ್ಲಿರಲಿಲ್ಲ, ನಂತರ, ಅವರನ್ನು ಕರೆಸಿ ಕೀಯಿಂದ ಲಿಫ್ಟ್ ತೆರೆದು ಜನರನ್ನು ರಕ್ಷಿಸಲಾಯಿತು.
ಮತ್ತಷ್ಟು ಓದಿ: ಬೆಂಗಳೂರು ಮಳೆಗೆ ಯುವತಿ ಬಲಿ: ಸೇಂಟ್ ಮಾರ್ಥಾಸ್ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಇನ್ಫೋಸಿಸ್ ಉದ್ಯೋಗಿ ದುರಂತ ಅಂತ್ಯ
ಆದಾಗ್ಯೂ, ಲಿಫ್ಟ್ ಅಟೆಂಡೆಂಟ್ ಪಾತ್ರದ ಬಗ್ಗೆ ಪ್ರತಿಕ್ರಿಯಿಸಲು ಆಸ್ಪತ್ರೆ ಆಡಳಿತ ಮಂಡಳಿ ನಿರಾಕರಿಸಿತು. ಆಸ್ಪತ್ರೆಯ ಲಿಫ್ಟ್ ಉತ್ತಮವಾಗಿ ನಿರ್ವಹಿಸಲಾಗುತ್ತಿದೆ ಎಂದರು.
ಒಪ್ಪಂದವಿರುವ ಕಾರಣ ಕಾಲ ಕಾಲಕ್ಕೆ ಲಿಫ್ಟ್ನ ತಪಾಸಣೆ ನಡೆಯುತ್ತಿದೆ. ಲಿಫ್ಟ್ನಲ್ಲಿ ಓರ್ವ ಲಿಫ್ಟ್ ಅಟೆಂಡೆಂಟ್ ಇದ್ದೇ ಇರುತ್ತಾರೆ. ಆದರೆ ವಿಡಿಯೋ ನೋಡಿದಾಗ ಲಿಫ್ಟ್ನಲ್ಲಿ 10-12 ಮಂದಿ ಇದ್ದುದ್ದು ಕಂಡುಬಂದಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ