ಸಾಮಾನ್ಯ ಸಂಸದನಷ್ಟೇ, ರಾಹುಲ್​ ಗಾಂಧಿಯನ್ನೇಕೆ ಹೈಲೈಟ್​ ಮಾಡ್ತೀರಾ? : ದಿಗ್ವಿಜಯ ಸಿಂಗ್ ಸಹೋದರ

|

Updated on: Jan 01, 2024 | 2:47 PM

ರಾಹುಲ್​ ಗಾಂಧಿ(Rahul Gandhi)  ಸಾಮಾನ್ಯ ಸಂಸದನಷ್ಟೇ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಸಹೋದರ ಲಕ್ಷ್ಮಣ್​ ಸಿಂಗ್ ಹೇಳಿದ್ದಾರೆ. ಗುನಾದ ಕಾಂಗ್ರೆಸ್​ ಕಚೇರಿಯಲ್ಲಿ ಮಾತನಾಡಿದ ಸಿಂಗ್, ರಾಹುಲ್ ಗಾಂಧಿ ಸಂಸದ, ಕಾಂಗ್ರೆಸ್​ ಕಾರ್ಯಕರ್ತ, ಪಕ್ಷದ ಅಧ್ಯಕ್ಷರಲ್ಲ ಅದನ್ನು ಬಿಟ್ಟರೆ ರಾಹುಲ್ ಬೇರೆ ಏನೂ ಅಲ್ಲ ಎಂದಿದ್ದಾರೆ.

ಸಾಮಾನ್ಯ ಸಂಸದನಷ್ಟೇ, ರಾಹುಲ್​ ಗಾಂಧಿಯನ್ನೇಕೆ ಹೈಲೈಟ್​ ಮಾಡ್ತೀರಾ? : ದಿಗ್ವಿಜಯ ಸಿಂಗ್ ಸಹೋದರ
ರಾಹುಲ್ ಗಾಂಧಿ
Follow us on

ರಾಹುಲ್​ ಗಾಂಧಿ(Rahul Gandhi)  ಸಾಮಾನ್ಯ ಸಂಸದನಷ್ಟೇ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಸಹೋದರ ಲಕ್ಷ್ಮಣ್​ ಸಿಂಗ್ ಹೇಳಿದ್ದಾರೆ. ಗುನಾದ ಕಾಂಗ್ರೆಸ್​ ಕಚೇರಿಯಲ್ಲಿ ಮಾತನಾಡಿದ ಸಿಂಗ್, ರಾಹುಲ್ ಗಾಂಧಿ ಸಂಸದ, ಕಾಂಗ್ರೆಸ್​ ಕಾರ್ಯಕರ್ತ, ಪಕ್ಷದ ಅಧ್ಯಕ್ಷರಲ್ಲ ಅದನ್ನು ಬಿಟ್ಟರೆ ರಾಹುಲ್ ಬೇರೆ ಏನೂ ಅಲ್ಲ ಎಂದಿದ್ದಾರೆ.

ರಾಹುಲ್ ಗಾಂಧಿ ಒಬ್ಬ ಸಾಮಾನ್ಯ ಪಕ್ಷದ ಕಾರ್ಯಕರ್ತ ಮತ್ತು ಸಂಸದ, ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬಾರದು ಎಂದು ಕಾಂಗ್ರೆಸ್ ಮಾಜಿ ಸಂಸದ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.

ಯಾರೂ ಹುಟ್ಟಿನಿಂದ ದೊಡ್ಡವರೆನಿಸಿಕೊಳ್ಳುವುದಿಲ್ಲ, ಅವರ ಕಾರ್ಯದಿಂದಲೇ ದೊಡ್ಡವರಾಗುತ್ತಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮಣ್ ಸಿಂಗ್ ಅವರು ಗುನಾದ ಚಚೌರಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಬಿಜೆಪಿಯ ಪ್ರಿಯಾಂಕಾ ಪೆಂಚಿ ಅವರಿಂದ 61 ಸಾವಿರಕ್ಕೂ ಅಧಿಕ ಮತಗಳಿಂದ ಪರಾಭವಗೊಂಡಿದ್ದರು.

ಮತ್ತಷ್ಟು ಓದಿ: ನೀನಾ, ನಾನಾ ನೋಡೇ ಬಿಡೋಣ, ಕುಸ್ತಿಪಟುಗಳ ಜತೆ ಅಖಾಡಕ್ಕಿಳಿದ ರಾಹುಲ್ ಗಾಂಧಿ

ಬಿಜೆಪಿ ನಾಯಕ ಶೆಹ್ನಾಸ್​ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಎಲ್ಲಿಯವರೆಗೆ ಕುಟುಂಬ ರಾಜಕಾರಣವನ್ನು ಮುಂದುವರೆಸಬೇಕು ಎಂಬುದರ ಬಗ್ಗೆ ಕಾಂಗ್ರೆಸ್​ ಚಿಂತಿಸುವ ಅಗತ್ಯವಿದೆ ಎಂದು ಹೇಳಿದ್ದರು.

ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಜನವರಿ 14 ರಿಂದ ಮಾರ್ಚ್ 20 ರವರೆಗೆ ಮಣಿಪುರದಿಂದ ಮುಂಬೈಗೆ (ಪೂರ್ವದಿಂದ ಪಶ್ಚಿಮಕ್ಕೆ) ಭಾರತ ನ್ಯಾಯ ಯಾತ್ರೆಯನ್ನು ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಘೋಷಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ