ನೀನಾ, ನಾನಾ ನೋಡೇ ಬಿಡೋಣ, ಕುಸ್ತಿಪಟುಗಳ ಜತೆ ಅಖಾಡಕ್ಕಿಳಿದ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಕುಸ್ತಿಪಟು(Wrestler)ಗಳ ಜತೆ ಅಖಾಡಕ್ಕಿಳಿದಿರುವ ವಿಡಿಯೋ ಹಾಗೂ ಫೋಟೊಗಳು ವೈರಲ್ ಆಗುತ್ತಿದೆ. ಹರ್ಯಾಣದ ಕುಸ್ತಿಪಟುಗಳು ಮತ್ತು ಭಾರತೀಯ ಕುಸ್ತಿ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ನಡುವಿನ ಕಾದಾಟ ಮುಂದುವರೆದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಕುಸ್ತಿಪಟು(Wrestler)ಗಳ ಜತೆ ಅಖಾಡಕ್ಕಿಳಿದಿರುವ ವಿಡಿಯೋ ಹಾಗೂ ಫೋಟೊಗಳು ವೈರಲ್ ಆಗುತ್ತಿವೆ. ಹರ್ಯಾಣದ ಕುಸ್ತಿಪಟುಗಳು ಮತ್ತು ಭಾರತೀಯ ಕುಸ್ತಿ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ನಡುವಿನ ಕಾದಾಟ ಮುಂದುವರೆದಿದೆ.
ಈ ಮಧ್ಯೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಬೆಳಗ್ಗೆ ಹರ್ಯಾಣದ ಜಜ್ಜರ್ ಜಿಲ್ಲೆಯ ಛಾರಾ ಗ್ರಾಮಕ್ಕೆ ಹಠಾತ್ತನೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಕುಸ್ತಿಪಟುಗಳೊಂದಿಗೆ ಅಖಾಡಕ್ಕಿಳಿದು ಕೆಲ ಸಮಯ ಅವರೊಂದಿಗೆ ಕಳೆದಿದ್ದಾರೆ. ಛಾರಾ ಗ್ರಾಮವು ಕುಸ್ತಿಪಟು ದೀಪಕ್ ಪುನಿಯಾ ಅವರ ಗ್ರಾಮವಾಗಿದೆ. ಈ ಸಂದರ್ಭದಲ್ಲಿ, ರಾಹುಲ್ ಗಾಂಧಿ ಜೊತೆಗೆ ಬಜರಂಗ್ ಪುನಿಯಾ ಮತ್ತು ಬೇರಿ ಶಾಸಕ ರಘುಬೀರ್ ಕಡಿಯನ್ ಕೂಡ ಉಪಸ್ಥಿತರಿದ್ದರು.
ಅಖಾಡಕ್ಕೆ ಆಗಮಿಸಿದ ರಾಹುಲ್‌ಗೆ ಕುಸ್ತಿಪಟುಗಳು ಅದ್ಧೂರಿ ಸ್ವಾಗತ ನೀಡಿದರು. ಈ ವೇಳೆ ರಾಹುಲ್ ಗಾಂಧಿ ಕುಸ್ತಿಪಟುಗಳೊಂದಿಗೆ ಸಂವಾದ ನಡೆಸಿ ಅವರ ಆಟದ ಬಗ್ಗೆ ಮಾಹಿತಿ ಪಡೆದರು. ಕಾಂಗ್ರೆಸ್ ನಾಯಕರು ಚಳಿಗಾಲದಲ್ಲಿ ಕುಸ್ತಿಪಟುಗಳೊಂದಿಗೆ ರಾಗಿ ರೊಟ್ಟಿಯನ್ನು ಸಹ ತಿಂದರು.
ಮತ್ತಷ್ಟು ಓದಿ: WFI ಅಮಾನತು, ಪ್ರತಿಭಟನೆ ನಡುವೆ ಕುಸ್ತಿಪಟುಗಳನ್ನು ಭೇಟಿಯಾದ ರಾಹುಲ್ ಗಾಂಧಿ
ಕುಸ್ತಿ ಕೋಚ್ ವೀರೇಂದ್ರ ಆರ್ಯ ಮಾತನಾಡಿ, ಅಖಾಡದಲ್ಲಿ ಎಲ್ಲರೂ ಅಭ್ಯಾಸ ನಡೆಸುತ್ತಿದ್ದರು, ಇದ್ದಕ್ಕಿದ್ದಂತೆ ರಾಹುಲ್ ಗಾಂಧಿ ಬೆಳಿಗ್ಗೆಯೇ ಅಲ್ಲಿಗೆ ಬಂದರು. ರಾಹುಲ್ ವ್ಯಾಯಾಮ ಮಾಡಿ ಕ್ರೀಡೆಯ ಬಗ್ಗೆಯೂ ಮಾತನಾಡಿದ್ದಾರೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರು ಕುಸ್ತಿಪಟುಗಳೊಂದಿಗಿನ ಭೇಟಿಯ ಕೆಲವು ಚಿತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ರಾಹುಲ್ ಅವರು ಆಟಗಾರರ ಬಗ್ಗೆ ಸುದೀರ್ಘ ಪೋಸ್ಟ್ ಅನ್ನು ಸಹ ಬರೆದಿದ್ದಾರೆ.
ಅದರಲ್ಲಿ ಅವರು ವರ್ಷಗಳ ಕಠಿಣ ಪರಿಶ್ರಮ ಮತ್ತು ರಕ್ತ ಮತ್ತು ಬೆವರಿನ ನಂತರ ಆಟಗಾರನು ದೇಶಕ್ಕಾಗಿ ಪದಕಗಳನ್ನು ತರುತ್ತಾನೆ ಎಂದು ಹೇಳಿದ್ದಾರೆ.
वर्षों की जीतोड़ मेहनत, धैर्य एवं अप्रतिम अनुशासन के साथ अपने खून और पसीने से मिट्टी को सींच कर एक खिलाड़ी अपने देश के लिए मेडल लाता है।
आज झज्जर के छारा गांव में भाई विरेंद्र आर्य के अखाड़े पहुंच कर ओलंपिक पदक विजेता बजरंग पूनिया समेत अन्य पहलवान भाइयों के साथ चर्चा की।
सवाल… pic.twitter.com/IeGOebvRl6
— Rahul Gandhi (@RahulGandhi) December 27, 2023
ಭಾರತದ ಹೆಣ್ಣುಮಕ್ಕಳು ತಮ್ಮ ಅಖಾಡದಲ್ಲಿ ಹೋರಾಟವನ್ನು ಬಿಟ್ಟು ತಮ್ಮ ಹಕ್ಕುಗಳು ಮತ್ತು ನ್ಯಾಯಕ್ಕಾಗಿ ಬೀದಿಗಳಲ್ಲಿ ಹೋರಾಡಬೇಕಾದರೆ, ಅವರ ಮಕ್ಕಳನ್ನು ಈ ಮಾರ್ಗವನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸುವವರು ಯಾರು?. ಮಹಿಳಾ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರು ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ ಎಂಬುದು ಗಮನಾರ್ಹ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:33 pm, Wed, 27 December 23