Bharat Nyay Yatra: ಜನವರಿ 14 ರಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಭಾರತ ನ್ಯಾಯ ಯಾತ್ರೆ’
ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಭಾರತ ನ್ಯಾಯ ಯಾತ್ರೆ(Bharat Nyay Yatra) ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಸಿದ್ಧತೆ ನಡೆಸಿದ್ದಾರೆ. ಭಾರತ್ ಜೋಡೋ ಯಾತ್ರೆ ಮಾದರಿಯಲ್ಲೇ ಈ ಭಾರತ ನ್ಯಾಯ ಯಾತ್ರೆ ಕೂಡ ನಡೆಯಲಿದೆ. ಜನವರಿ 14 ರಂದು ಯಾತ್ರೆ ಶುರುವಾಗಲಿದೆ. ಮಣಿಪುರದಿಂದ ಮುಂಬೈವರೆಗೆ ಭಾರತ ನ್ಯಾಯ ಯಾತ್ರೆ ನಡೆಯಲಿದೆ.

ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಭಾರತ ನ್ಯಾಯ ಯಾತ್ರೆ(Bharat Nyay Yatra) ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಸಿದ್ಧತೆ ನಡೆಸಿದ್ದಾರೆ. ಭಾರತ್ ಜೋಡೋ ಯಾತ್ರೆ ಮಾದರಿಯಲ್ಲೇ ಈ ಭಾರತ ನ್ಯಾಯ ಯಾತ್ರೆ ಕೂಡ ನಡೆಯಲಿದೆ. ಜನವರಿ 14 ರಂದು ಯಾತ್ರೆ ಶುರುವಾಗಲಿದೆ. ಮಣಿಪುರದಿಂದ ಮುಂಬೈವರೆಗೆ ಭಾರತ ನ್ಯಾಯ ಯಾತ್ರೆ ನಡೆಯಲಿದೆ.
ವರದಿಗಳ ಪ್ರಕಾರ, ಪಕ್ಷದ ಹೈಕಮಾಂಡ್ ಹೊರತುಪಡಿಸಿ, ಎಲ್ಲಾ ರಾಜ್ಯ ಕಾಂಗ್ರೆಸ್ ನಾಯಕರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪಕ್ಷದ ಕಾರ್ಯಕ್ರಮಕ್ಕೆ ಸಂಬಂಧಿಸಿದ ವರದಿಗಳ ಪ್ರಕಾರ, ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಮಾದರಿಯಲ್ಲಿ ಹೊಸ ಜನಸಂಪರ್ಕ ಕಸರತ್ತನ್ನು ಮಾಡುತ್ತಿದ್ದಾರೆ. ಈಶಾನ್ಯ ಭಾರತದ ರಾಜ್ಯವಾದ ಮಣಿಪುರದಿಂದ ಜನವರಿ 14 ರಂದು ಪ್ರಾರಂಭವಾಗುವ ಪಾದಯಾತ್ರೆಯು 30 ತಿಂಗಳವರೆಗೆ ಇರುತ್ತದೆ.
ಮತ್ತಷ್ಟು ಓದಿ: ರಾಮನಗರ: ಭಾರತ್ ಜೋಡೋ ಯಾತ್ರೆಗೆ 1 ವರ್ಷ; ನೆನಪಿಗಾಗಿ ರಾಮನಗರ ಸೇರಿ ಹಲವು ಜಿಲ್ಲೆಗಳಲ್ಲಿ ಜರುಗಿದ ಪಾದಯಾತ್ರೆ
ಮಾರ್ಚ್ 20 ರಂದು ಮುಂಬೈನಲ್ಲಿ ಯಾತ್ರೆ ಅಂತ್ಯಗೊಳ್ಳಲಿದೆ. 6,200 ಕಿ.ಮೀ ರಾಹುಲ್ ಗಾಂಧಿ ಯಾತ್ರೆ ಸಾಗಲಿದೆ. 14 ರಾಜ್ಯಗಳ 85 ಜಿಲ್ಲೆಗಳಲ್ಲಿ ಸಂಚಾರ ನಡೆಯಲಿದೆ.
14 ರಾಜ್ಯ 85 ಜಿಲ್ಲೆಗಳು ಕಾಂಗ್ರೆಸ್‌ನ ಈ ಭಾರತ ನ್ಯಾಯ ಯಾತ್ರೆ 14 ರಾಜ್ಯಗಳು ಮತ್ತು 85 ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಇದು ಅಸ್ಸಾಂ, ನಾಗಾಲ್ಯಾಂಡ್, ಮೇಘಾಲಯ, ಬಿಹಾರ, ಜಾರ್ಖಂಡ್, ಬಂಗಾಳ, ಛತ್ತೀಸ್‌ಗಢ, ಮಧ್ಯಪ್ರದೇಶ, ಯುಪಿ, ರಾಜಸ್ಥಾನ, ಗುಜರಾತ್ ಮತ್ತು ಮೂಲಕ ಮುಂಬೈ ತಲುಪಲಿದೆ. ಬಸ್ ಮೂಲಕ ಯಾತ್ರೆ ನಡೆಸಲಿದ್ದು, ಕೆಲವೆಡೆ ಕಾಲ್ನಡಿಗೆಯಲ್ಲಿಯೂ ಯಾತ್ರೆ ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಭಾರತ ನ್ಯಾಯ ಯಾತ್ರೆ’ಗೆ ಚಾಲನೆ ನೀಡಲಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಈ ಯಾತ್ರೆಯನ್ನು ಮಣಿಪುರದಿಂದ ಆರಂಭಿಸುವ ಉದ್ದೇಶ ಮಣಿಪುರ ದೇಶದ ಪ್ರಮುಖ ಭಾಗವಾಗಿದೆ.
ಇದು ರಾಜಕೀಯ ಯಾತ್ರೆಯಲ್ಲ, ಇದು ಸಂಕಷ್ಟದಲ್ಲಿರುವ ಸಾಮಾನ್ಯ ಜನರಿಗಾಗಿ ಎಂದು ಹೇಳಿದ್ದಾರೆ. ಭಾರತವನ್ನು ಒಗ್ಗೂಡಿಸಲು ‘ಭಾರತ್ ಜೋಡೋ ಯಾತ್ರೆ’ ಆಗಿದ್ದು, ಈಗ ‘ಭಾರತ್ ನ್ಯಾಯ ಯಾತ್ರೆ’ ನಡೆಯಲಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಅವರು ಮೂರು ವಿಷಯಗಳನ್ನು ಪ್ರಸ್ತಾಪಿಸಿದ್ದರು – ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ಸರ್ವಾಧಿಕಾರ. ಆದರೆ ಭಾರತ ನ್ಯಾಯ ಯಾತ್ರೆಯ ವಿಷಯವೆಂದರೆ ಆರ್ಥಿಕ ನ್ಯಾಯ, ಸಾಮಾಜಿಕ ನ್ಯಾಯ ಮತ್ತು ರಾಜಕೀಯ ನ್ಯಾಯ.
ಕಳೆದ ವರ್ಷ ಸೆಪ್ಟೆಂಬರ್ 7 ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಕಾಂಗ್ರೆಸ್ ಆರಂಭಿಸಿತ್ತು. ರಾಹುಲ್ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4000 ಕಿಲೋಮೀಟರ್ ಪಾದಯಾತ್ರೆ ಕೈಗೊಂಡಿದ್ದರು.
12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹಾದುಹೋಗಿದೆ. ಈ ಪ್ರಯಾಣದ ವೇಳೆ ರಾಹುಲ್ ಗಾಂಧಿ ಅವರು 4081 ಕಿಲೋಮೀಟರ್‌ಗೂ ಹೆಚ್ಚು ದೂರ ಕ್ರಮಿಸಿದ್ದರು. ಒಟ್ಟು 145 ದಿನಗಳ ಕಾಲ ರಾಹುಲ್ ಗಾಂಧಿ ಬೀದಿಯಲ್ಲಿಯೇ ಇದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:15 am, Wed, 27 December 23