ಪ್ರತಿಭಟನಾಕಾರರು ರೈತರೇ ಅಲ್ಲದಿದ್ದರೆ ಸರ್ಕಾರ ಯಾಕೆ ಅವರ ಜತೆ ಮಾತುಕತೆ ನಡೆಸುತ್ತಿದೆ: ಚಿದಂಬರಂ

| Updated By: guruganesh bhat

Updated on: Dec 14, 2020 | 11:23 AM

ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ಖಾಲಿಸ್ತಾನಿಗಳು, ಚೀನಾ ಮತ್ತು ಪಾಕಿಸ್ತಾನದ ಏಜೆಂಟ್​​ಗಳು, ಮಾವೋವಾದಿಗಳು, ಟುಕ್ಡೇ ಟುಕ್ಡೇ ಗ್ಯಾಂಗ್ ಎಂದು ಸಚಿವರು ಹೇಳುತ್ತಿದ್ದಾರೆ. ಹೀಗಿರುವಾಗ ಸಾವಿರಾರು ಪ್ರತಿಭಟನಕಾರರಲ್ಲಿ ಯಾರೊಬ್ಬರೂ ರೈತರಲ್ಲ. ಅವರು ರೈತರೇ ಅಲ್ಲದಿದ್ದರೆ ಸರ್ಕಾರ ಅವರೊಂದಿಗೆ ಯಾಕೆ ಮಾತುಕತೆ ನಡೆಸುತ್ತಿದೆ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ.

ಪ್ರತಿಭಟನಾಕಾರರು ರೈತರೇ ಅಲ್ಲದಿದ್ದರೆ ಸರ್ಕಾರ ಯಾಕೆ ಅವರ ಜತೆ ಮಾತುಕತೆ ನಡೆಸುತ್ತಿದೆ: ಚಿದಂಬರಂ
ಪಿ. ಚಿದಂಬರಂ (ಸಂಗ್ರಹ ಚಿತ್ರ)
Follow us on

ನವದೆಹಲಿ: ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ಖಾಲಿಸ್ತಾನಿಗಳು, ಚೀನಾ ಮತ್ತು ಪಾಕಿಸ್ತಾನದ ಏಜೆಂಟ್​​ಗಳು, ಮಾವೋವಾದಿಗಳು, ಟುಕ್ಡೇ ಟುಕ್ಡೇ ಗ್ಯಾಂಗ್ ಎಂದು ಸಚಿವರು ಹೇಳುತ್ತಿದ್ದಾರೆ. ಹೀಗಿರುವಾಗ ಸಾವಿರಾರು ಪ್ರತಿಭಟನಕಾರರಲ್ಲಿ ಯಾರೊಬ್ಬರೂ ರೈತರಲ್ಲ. ಅವರು ರೈತರೇ ಅಲ್ಲದಿದ್ದರೆ ಸರ್ಕಾರ ಅವರೊಂದಿಗೆ ಯಾಕೆ ಮಾತುಕತೆ ನಡೆಸುತ್ತಿದೆ ಎಂದು ಕಾಂಗ್ರೆಸ್​ನ ಹಿರಿಯ ನಾಯಕ ಪಿ.ಚಿದಂಬರಂ ಟ್ವೀಟ್​ನಲ್ಲಿ ಪ್ರಶ್ನಿಸಿದ್ದಾರೆ.

ಕೇಂದ್ರ ಮತ್ತು ರೈತರ ನಡುವೆ ಹಲವಾರು ಸುತ್ತಿನ ಮಾತುಕತೆ ನಡೆದಿದ್ದರೂ ಇಲ್ಲಿಯವರೆಗೆ ಯಾವುದೇ ರೀತಿಯ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.

ಕೃಷಿ ಕಾನೂನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ದೆಹಲಿ ಚಲೋ ಚಳವಳಿ ನಡೆಸುತ್ತಿದ್ದಾರೆ. ರೈತರು ಮತ್ತು ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ, ಸಮಸ್ಯೆ ಪರಿಹಾರವಾಗಿಲ್ಲ.

 

Delhi Chalo: ದೆಹಲಿ-ಜೈಪುರ ಹೆದ್ದಾರಿ ತಡೆಗೆ ರೈತರ ಸಿದ್ಧತೆ; ಪಂಜಾಬ್-ಹರ್ಯಾಣ ಗಡಿಯಲ್ಲಿ ಖಾಲಿಸ್ತಾನಿ ಕರಿನೆರಳು

Published On - 7:12 pm, Sun, 13 December 20