AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಶುಭಾಶಯ ಹೇಳುತ್ತಲೇ ಟೆಕ್ ಮಹೀಂದ್ರಾ ಮಾಜಿ ಉದ್ಯೋಗಿ ಮೇಲೆ ಗುಂಡಿನ ಮಳೆಗೈದ ವ್ಯಕ್ತಿ

ದೀಪಾವಳಿ ಅಂದ್ರೆ ಬೆಳಕಿನ ಹಬ್ಬ, ಸಂಭ್ರಮದ ಹಬ್ಬ. ಆದರೆ ಹರಿಯಾಣದ ಫರಿದಾಬಾದ್‌ನಲ್ಲಿ ಇದೇ ಹಬ್ಬದ ಸಂಭ್ರಮದ ನಡುವೆ ಭೀಕರ ಘಟನೆ ನಡೆದಿದೆ. ಪಾರ್ಕಿಂಗ್ ವಿಚಾರಕ್ಕೆ ಶುರುವಾದ ನೆರೆಮನೆಯವರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸಿಂಗಾಪುರದಿಂದ ಕುಟುಂಬದ ಮದುವೆಗೆ ಬಂದಿದ್ದ ಮಾಜಿ ಟೆಕ್ ಮಹೀಂದ್ರಾ ಅಧಿಕಾರಿ ಪರಮಜೀತ್ ಧಂಖರ್ ಅವರನ್ನು ಅವರ ನೆರೆಮನೆಯವನೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ದೀಪಾವಳಿ ಶುಭಾಶಯ ಹೇಳುತ್ತಲೇ ಟೆಕ್ ಮಹೀಂದ್ರಾ ಮಾಜಿ ಉದ್ಯೋಗಿ ಮೇಲೆ ಗುಂಡಿನ ಮಳೆಗೈದ ವ್ಯಕ್ತಿ
ಗುಂಡಿನ ದಾಳಿ
ನಯನಾ ರಾಜೀವ್
|

Updated on:Nov 12, 2026 | 12:01 PM

Share

ಫರಿದಾಬಾದ್, ನವೆಂಬರ್ 12: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಕ್ಕದಮನೆಯವರೊಂದಿಗಿನ ಸಣ್ಣ ಜಗಳ ಒಂದು ಸಾವಿಗೆ ಕಾರಣವಾಗಿರುವ ಘಟನೆ ಫರೀದಾಬಾದ್​ನಲ್ಲಿ ನಡೆದಿದೆ. ಹರಿಯಾಣದ ಫರೀದಾಬಾದ್​ನಲ್ಲಿ ಟೆಕ್ ಮಹೀಂದ್ರಾದ ಮಾಜಿ ಉದ್ಯೋಗಿ ಪರಮಜೀತ್ ಧಂಕರ್ ಅವರನ್ನು ಅದೇ ಕಟ್ಟಡದಲ್ಲಿ ವಾಸವಾಗಿದ್ದ ವ್ಯಕ್ತಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ.

ನವೆಂಬರ್ 6ರಂದು ಧಂತೇರಸ್ ಹಬ್ಬದ ದಿನ ಸಂಜೆ ಫರೀದಾಬಾದ್​ನ ಸೆಕ್ಟರ್ 21ಸಿಯಲ್ಲಿ ಈ ಘಟನೆ ನಡೆದಿದೆ. ಮೃತ ಪರಮಜೀತ್ ಧಂಕರ್ ಸಿಂಗಾಪುರದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಸಂಬಂಧಿಕರ ಮನೆಯ ಮದುವೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದರು. ಅವರು ವಾಸವಿದ್ದ ಕಟ್ಟಡದ ಮೂರನೇ ಮಹಡಿಯಲ್ಲಿ ಆರೋಪಿ ಮೋನು ಶರ್ಮಾ ಕೂಡ ವಾಸವಿದ್ದ.

ಸಣ್ಣ ಜಗಳಕ್ಕೆ ಬಂದೂಕಿನಿಂದ ಉತ್ತರ ಪಾರ್ಕಿಂಗ್ ಸೇರಿದಂತೆ ಹಲವು ಸಣ್ಣಪುಟ್ಟ ವಿಚಾರಗಳಿಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ನವೆಂಬರ್ 6ರಂದು ಇದೇ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ವೇಳೆ ಮೋನು ಶರ್ಮಾ, ಮಾತನಾಡುವ ನೆಪದಲ್ಲಿ ಪರಮಜೀತ್ ಅವರನ್ನು ಮನೆಯ ಹೊರಗೆ ಕರೆದಿದ್ದಾನೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿ ಪರಮಜೀತ್ ಅವರನ್ನು ಪ್ರಶ್ನಿಸುತ್ತಾ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ. ಪರಮಜೀತ್ ಅವರಿಗೆ ವಿಚಾರವೇನು ಎಂಬುದು ಅರ್ಥವಾಗದೆ, ಕೈಮುಗಿದು ವಿವರಣೆ ಕೇಳುತ್ತಿರುವುದೂ ಸೆರೆಯಾಗಿದೆ. ಆದರೆ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಐದು ಸೆಕೆಂಡ್‌ಗಳಲ್ಲಿ ಹಲವು ಸುತ್ತು ಗುಂಡು ವಾದ ನಡೆಯುತ್ತಿದ್ದಂತೆಯೇ ಮೋನು ಶರ್ಮಾ ತನ್ನ ಜೇಬಿನಿಂದ ಪಿಸ್ತೂಲ್ ತೆಗೆದು ಪರಮಜೀತ್ ಮೇಲೆ ಗುಂಡು ಹಾರಿಸಲು ಆರಂಭಿಸಿದ್ದಾನೆ. ಕೆಲವೇ ಸೆಕೆಂಡ್‌ಗಳಲ್ಲಿ ಹಲವು ಸುತ್ತು ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಪರಮಜೀತ್ ಕಟ್ಟಡದ ಹೊರಗೆ ಓಡಿದ್ದಾರೆ. ಆದರೂ ಆರೋಪಿ ಅವರನ್ನು ಬೆನ್ನಟ್ಟಿದ್ದಾನೆ.

ತೀವ್ರವಾಗಿ ಗಾಯಗೊಂಡಿದ್ದ ಪರಮಜೀತ್, ಆರೋಪಿಯನ್ನು ತಡೆಯಲು ಆತನ ಅಂಗಿಯ ಕಾಲರ್ ಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮತ್ತೆ ಕೈಕೈ ಮಿಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆಯ ವೇಳೆ ಕಟ್ಟಡದಿಂದ ಮಹಿಳೆಯೊಬ್ಬರು ಹೊರಗೆ ಓಡಿ ಬಂದು ಸಹಾಯಕ್ಕಾಗಿ ಕೂಗಿರುವುದು ಕೂಡ ಸಿಸಿಟಿವಿಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಪೋಲೆಂಡ್‌ನಲ್ಲಿ ಭೀಕರ ಗುಂಡಿನ ದಾಳಿಗೆ ಐವರು ಬಲಿ; ದಾಳಿಕೋರನನ್ನು ಗುಂಡಿಟ್ಟು ಕೊಂದ ಪೊಲೀಸರು!

‘ದೀಪಾವಳಿ ಶುಭಾಶಯಗಳು, ಎಲ್ಲರನ್ನೂ ಮುಗಿಸುತ್ತೇನೆ’ ಇಷ್ಟಾದರೂ ಆರೋಪಿ ಸುಮ್ಮನಾಗಿಲ್ಲ. ತನ್ನ ಪಿಸ್ತೂಲ್‌ಗೆ ಮತ್ತೆ ಗುಂಡು ತುಂಬಿಕೊಂಡು ಬಂದು ಪರಮಜೀತ್ ಮೇಲೆ ಮತ್ತಷ್ಟು ಗುಂಡು ಹಾರಿಸಿದ್ದಾನೆ. ಈ ವೇಳೆ, “ದೀಪಾವಳಿ ಶುಭಾಶಯಗಳು, ಎಲ್ಲರನ್ನೂ ಮುಗಿಸುತ್ತೇನೆ” ಎಂದು ಕೂಗಿರುವುದು ದೃಶ್ಯಾವಳಿಯಲ್ಲಿ ಕೇಳಿಬಂದಿದೆ. ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಪರಮಜೀತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿ ಮೋನು ಶರ್ಮಾನನ್ನು ಬಂಧಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಅಪರಾಧ ವಿಭಾಗದ ತಂಡಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿತ್ತು ಎಂದು ಸೂರಜ್‌ಕುಂಡ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಪ್ರಹ್ಲಾದ್ ಕುಮಾರ್ ತಿಳಿಸಿದ್ದಾರೆ.

ಪಾರ್ಕಿಂಗ್ ಸೇರಿದಂತೆ ಸಣ್ಣಪುಟ್ಟ ವಿಚಾರಗಳಿಂದ ಆರಂಭವಾದ ಪಕ್ಕದ ಮನೆಯವರೊಂದಿಗಿನ ವೈಷಮ್ಯ ಇಷ್ಟೊಂದು ಭೀಕರ ಘಟನೆಗೆ ಕಾರಣವಾಗಿದೆ. ಕುಟುಂಬದ ಮದುವೆ ಸಮಾರಂಭದಲ್ಲಿ ಭಾಗವಹಿಸಲು ವಿದೇಶದಿಂದ ಬಂದಿದ್ದ ವ್ಯಕ್ತಿಯೊಬ್ಬರು ತಮ್ಮದೇ ನಿವಾಸದ ಮುಂದೆ ಪ್ರಾಣ ಕಳೆದುಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:00 pm, Thu, 12 November 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಸ್ಟಿಂಗ್ ಪ್ರಕರಣ: ವಿಡಿಯೋ ಮಾಡಿದ್ದೇ ಗೊತ್ತಿಲ್ಲವೆಂದ ಕೃಪಾ ಆಳ್ವ!
ಸ್ಟಿಂಗ್ ಪ್ರಕರಣ: ವಿಡಿಯೋ ಮಾಡಿದ್ದೇ ಗೊತ್ತಿಲ್ಲವೆಂದ ಕೃಪಾ ಆಳ್ವ!
ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ
ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ
ಡಿ.2ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ
ಡಿ.2ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ
ಕರಾವಳಿ ಬಳಿಕ ಉತ್ತರ ಕರ್ನಾಟಕದತ್ತ ಮುಖ ಮಾಡಿದ ಪ್ರಮೋದ್ ಶೆಟ್ಟಿ
ಕರಾವಳಿ ಬಳಿಕ ಉತ್ತರ ಕರ್ನಾಟಕದತ್ತ ಮುಖ ಮಾಡಿದ ಪ್ರಮೋದ್ ಶೆಟ್ಟಿ
ಪ್ರಧಾನಿ ಮೋದಿ ಬೆಂಗಳೂರು ಭೇಟಿಯ ಸಂಪೂರ್ಣ ವೇಳಾಪಟ್ಟಿ
ಪ್ರಧಾನಿ ಮೋದಿ ಬೆಂಗಳೂರು ಭೇಟಿಯ ಸಂಪೂರ್ಣ ವೇಳಾಪಟ್ಟಿ
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ದೂರ ಆಗಿಲ್ಲ: ಸ್ಪಷ್ಟನೆ ನೀಡಿದ ನಟ
ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ದೂರ ಆಗಿಲ್ಲ: ಸ್ಪಷ್ಟನೆ ನೀಡಿದ ನಟ
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್