ಚೆನ್ನೈ: ದಿವಂಗತ ಜಯಲಲಿತಾ ಅವರ ನಿವಾಸ ವೇದ ನಿಲಯಂ ಅನ್ನು ಸ್ಮಾರಕವನ್ನಾಗಿ ಬದಲಾಯಿಸುವ ಬಗ್ಗೆ ಅಂತಿಮ ತೀರ್ಪು ಬರುವವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎನ್. ಸೇಷಸಾಯಿ ತಮಿಳುನಾಡು ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ.
ಜಯಲಲಿತಾ ಮೃತಪಟ್ಟ ನಂತರ ಅವರ ಮನೆ ವೇದ ನಿಯಯಂ ಅನ್ನು ಸ್ಮಾರಕವನ್ನಾಗಿ ಮಾಡಲು ತಮಿಳುನಾಡು ಸರ್ಕಾರ ಮುಂದಾಗಿತ್ತು. ಇದಕ್ಕಾಗಿ ಸರ್ಕಾರ 67.9 ಕೋಟಿ ರೂಪಾಯಿ ವೆಚ್ಚ ಮಾಡಲು ಮುಂದಾಗಿತ್ತು. ಆದರೆ, ಸರ್ಕಾರದ ಈ ನಿರ್ಧಾರವನ್ನು ಜಯಲಲಿತಾ ಸೋದರಳಿಯ ದೀಪಕ್ ಹಾಗೂ ಸೋದರ ಸೊಸೆ ಜೆ. ದೀಪಾ ವಿರೋಧಿಸಿದ್ದರು. ಅಲ್ಲದೆ, ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಇವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಸದ್ಯ, ಈ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿದೆ. ಆದರೆ, ಸಂಕ್ರಾಂತಿ ಹಬ್ಬದ ಮರುದಿನವೇ ಈ ಸ್ಮಾರಕ ಉದ್ಘಾಟನೆಗೆ ಸರ್ಕಾರ ನಿರ್ಧರಿಸಿದೆ ಎನ್ನುವ ಸುದ್ದಿ ಬಿತ್ತರವಾಗಿತ್ತು. ಈ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಜನವರಿ 27ರಂದು ನಾವು ಕೊನೆಯ ವಿಚಾರಣೆ ನಡೆಸುತ್ತೇವೆ. ಹೀಗಾಗಿ, ಅಲ್ಲಿಯವರೆಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಬಾರದು ಎಂದಿದೆ.
ಈ ವರ್ಷ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಇದನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಮನೆಯನ್ನು ಸ್ಮಾರಕ ಮಾಡಲು ಆತುರ ತೋರುತ್ತಿದೆ ಎನ್ನಲಾಗುತ್ತಿದೆ.
ತಲೈವಿ ಸಿನಿಮಾ: ಜಯಲಲಿತಾ ಆಪ್ತೆ ಶಶಿಕಲಾ ಗೆಟಪ್ನಲ್ಲಿ ನಟಿ ಪೂರ್ಣ ದರ್ಶನ!