ಅನಿಲ್ ಅಂಬಾನಿ ಒಡೆತನದ ಕಂಪನಿಗಳ ಖಾತೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿ: ಎಸ್​ಬಿಐಗೆ ದೆಹಲಿ ಹೈಕೋರ್ಟ್ ನಿರ್ದೇಶನ

ವಂಚನೆಯ ಖಾತೆಗಳು ಎಂದುವ ಬ್ಯಾಂಕ್ ಗಳು ಘೋಷಿಸಿರುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂತ್ ಹೊರಡಿಸಿದ 2016ರ ಸುತ್ತೋಲೆಯನ್ನು ಪ್ರಶ್ನಿಸಿ ರಿಲಯನ್ಸ್​ನ ಮೂರು ಕಂಪನಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು.

ಅನಿಲ್ ಅಂಬಾನಿ ಒಡೆತನದ ಕಂಪನಿಗಳ ಖಾತೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿ: ಎಸ್​ಬಿಐಗೆ ದೆಹಲಿ ಹೈಕೋರ್ಟ್ ನಿರ್ದೇಶನ
ಅನಿಲ್ ಅಂಬಾನಿ
Rashmi Kallakatta

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 06, 2021 | 4:26 PM

ನವದೆಹಲಿ: ಅನಿಲ್ ಅಂಬಾನಿ ಅವರ ಆರ್ ಕಾಂ, ರಿಲಯನ್ಸ್ ಟೆಲಿಕಾಂ ಮತ್ತು ರಿಲಯನ್ಸ್ ಇನ್​​ಫ್ರಾಟೆಲ್ ಕಂಪನಿಯ ಬ್ಯಾಂಕ್ ಖಾತೆಗಳನ್ನು ವಂಚನೆಯ ಖಾತೆ ಪಟ್ಟಿಗೆ ಸೇರಿಸಿರುವ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈ ಖಾತೆಗಳನ್ನು ಯಥಾಸ್ಥಿತಿಯಲ್ಲಿಡುವಂತೆ ಎಸ್​ಬಿಐಗೆ ಹೇಳಿದೆ.

ವಂಚನೆಯ ಖಾತೆಗಳು ಎಂದು ಬ್ಯಾಂಕ್​ಗಳು ಘೋಷಿಸಿರುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ 2016ರ ಸುತ್ತೋಲೆಯನ್ನು ಪ್ರಶ್ನಿಸಿ ರಿಲಯನ್ಸ್​ನ ಮೂರು ಕಂಪನಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು .

ನೈಸರ್ಗಿಕ ನ್ಯಾಯದ ನಿಯಮ ಪ್ರಕಾರ ಖಾತೆದಾರರಿಗೆ ಯಾವುದೇ ಪೂರ್ವ ಸೂಚನೆ ಅಥವಾ ಸಂವಹನವನ್ನು ನೀಡದೆ ಖಾತೆಯನ್ನು ವಂಚನೆ ಎಂದು ಘೋಷಿಸಲು ಸುತ್ತೋಲೆ ಬ್ಯಾಂಕುಗಳಿಗೆ ಅವಕಾಶ ನೀಡುತ್ತದೆ ಎಂದು ಅರ್ಜಿಯಲ್ಲಿ ಹೇಳಿದೆ.

2019ರಿಂದ ಸುತ್ತೋಲೆಯ ವಿರುದ್ಧ ಇದೇ ರೀತಿಯ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ ಮತ್ತು ಆ ವಿಷಯಗಳಲ್ಲಿ ಅರ್ಜಿದಾರರನ್ನು ಹೈಕೋರ್ಟ್ ಕಾಪಾಡಿದೆ ಎಂದು ರಿಲಯನ್ಸ್ ಪರ ವಾದಿಸಿದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಇದೇ ರೀತಿಯ ವಿಷಯಗಳಲ್ಲಿ ಈ ಹಿಂದೆ ಹೈಕೋರ್ಟ್ ಹೊರಡಿಸಿದ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು, ಮೂರು ಕಂಪನಿಗಳ ಖಾತೆಗಳಿಗೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯ ದಿನಾಂಕದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ನ್ಯಾಯಮೂರ್ತಿ ಪ್ರತೀಕ್ ಜಲನ್ ನಿರ್ದೇಶನ ನೀಡಿದ್ದಾರೆ.

ಆರ್‌ಬಿಐ ಮತ್ತು ಮೂರು ಕಂಪನಿಗಳು ಸೇರಿದಂತೆ ಪ್ರತಿವಾದಿಗಳು ಜನವರಿ 11 ರೊಳಗೆ ಅರ್ಜಿಗೆ ತಮ್ಮ ಉತ್ತರಗಳನ್ನು ಸಲ್ಲಿಸಬಹುದು, ಜನವರಿ 13 ರಂದು ವಿಚಾರಣೆ ನಡೆಯಲಿದೆ ಎಂದು ನ್ಯಾಯಾಲಯ ಹೇಳಿದೆ.

ಹಿಂದಿನ ನಿರ್ದೇಶಕರು ಮತ್ತು ಮೂರು ಕಂಪನಿಗಳ ಖಾತೆಗಳನ್ನು ವಂಚನೆ ಖಾತೆಗಳೆಂದು ಘೋಷಿಸುವ ಆಕ್ಷೇಪಾರ್ಹ ಕ್ರಮದಿಂದ ಸ್ವತಂತ್ರವಾಗಿ ಮೂರು ನಿರ್ದೇಶಕರ ವಿರುದ್ಧ ತನಿಖೆ ಅಥವಾ ದೂರು ದಾಖಲಿಸುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಎಸ್‌ಬಿಐ ಮತ್ತು ಆರ್‌ಬಿಐಗೆ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

ಅನಿಲ್​ ಅಂಬಾನಿಯ RCom ಸಮೂಹವು ಬ್ಯಾಂಕುಗಳಿಗೆ ಕಟ್ಟಬೇಕಿದೆ 49 ಸಾವಿರ ಕೋಟಿ ರೂ ಸಾಲ! ಆದ್ರೆ..

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada