ಕುಮಾರಿ ಆಂಟಿಯಂತೆ! ನೆಟ್‌ಫ್ಲಿಕ್ಸ್​​ನಲ್ಲಿ ಆಂಟಿ ಜೀವನ ಕಥೆ ಸಾಕ್ಷ್ಯಚಿತ್ರವಾಗಿ ಬರುತ್ತದಾ? ಅಸಲಿ ಕಥೆಯೇನು?

|

Updated on: Feb 06, 2024 | 1:34 PM

Kumari Aunty Trending: ಬೀದಿ ಆಹಾರದ ಅಂಗಡಿ ನಡೆಸುತ್ತಿರುವ ಕುಮಾರಿ ಆಂಟಿ ಕುರಿತಾದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. OTT ದೈತ್ಯ ನೆಟ್‌ಫ್ಲಿಕ್ಸ್ ಮೂರು ಸಂಚಿಕೆಗಳೊಂದಿಗೆ 'ಫೇಮ್' ಎಂಬ ಶೀರ್ಷಿಕೆಯಡಿ ಸಾಕ್ಷ್ಯಚಿತ್ರವನ್ನು ಯೋಜಿಸುತ್ತಿದೆಯಂತೆ. ಸದ್ಯ ಈ ಸುದ್ದಿಯೂ ನೆಟ್​​​ಲೋಕದಲ್ಲಿ ವೈರಲ್ ಆಗಿದೆ. ಅಸಲಿ ಕಥೆಯೇನು?

ಕುಮಾರಿ ಆಂಟಿಯಂತೆ! ನೆಟ್‌ಫ್ಲಿಕ್ಸ್​​ನಲ್ಲಿ ಆಂಟಿ ಜೀವನ ಕಥೆ ಸಾಕ್ಷ್ಯಚಿತ್ರವಾಗಿ ಬರುತ್ತದಾ? ಅಸಲಿ ಕಥೆಯೇನು?
ನೆಟ್‌ಫ್ಲಿಕ್ಸ್​​ನಲ್ಲಿ ಆಂಟಿ ಜೀವನ ಕಥೆ ಸಾಕ್ಷ್ಯಚಿತ್ರವಾಗಿ ಬರುತ್ತದಾ?
Follow us on

ಈಗಿನ ಅಂತರ್ಜಾಲ ಯುಗದಲ್ಲಿ ಸೋಶಿಯಲ್ ಮೀಡಿಯಾ ಆಳುತ್ತಿದೆ.. ಯಾರು, ಯಾಕೆ ಪ್ರಸಿದ್ಧರಾಗುತ್ತಿದ್ದಾರೆ ಯಾವುದೂ ಇಲ್ಲಿ ತಿಳಿಯವಲ್ದು. ಸಣ್ಣ ಪುಟ್ಟ ಡೈಲಾಗ್ಸ್ ಹೇಳಿ.. ಇಲ್ಲವೇ ಡ್ಯಾನ್ಸ್ ಸ್ಟೆಪ್ ಹಾಕಿ.. ಅದರ ವಿಡಿಯೋ ಮಾಡಿ.. ಇಂಟರ್‌ನೆಟ್‌ಗೆ ಹಾಕಿದರೆ ಸಾಕು ಅದು ವೈರಲ್ಲೋ ವೈರಲ್ ಆದೀತು.. ಅದು ತರ್ಕಕ್ಕೆ ನಿಲುಕದ್ದು ಎಂಬಂತಾಗಿದೆ. ಇವುಗಳ ಮಧ್ಯೆ ಕೆಲವೊಂದು ಪ್ರಾಮಾಣಿಕ ಪೋಸ್ಟ್​​​ಗಳೂ ಸುಳಿದಾಡುತ್ತವೆ. ಆಮೇಲೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್.. ಆಮೇಲೆ ಇನ್‌ಸ್ಟಂಟ್ ಮೀಡಿಯಾ ಕವರೇಜ್.. ಮುಂದೆ ಸಿನಿಮಾ ತಾರಾ ಪ್ರಚಾರವೂ ಆಗಬಹದು.. ಅದೆಲ್ಲ ಒತ್ತಟ್ಟಿಗೆ ಕಟ್ ಮಾಡಿದರೆ.. ಸೂಪರ್ ಫ್ಯಾನ್ ರಾತ್ರೋರಾತ್ರಿ ಬರುತ್ತಿದೆ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ‘ಕುಮಾರಿ ಆಂಟಿ’ ವೈರಲ್ ಆಗಿದೆ.

ಆಂಧ್ರಪ್ರದೇಶದ ಗುಡಿವಾಡ ನಿವಾಸಿಯಾಗಿರುವ ಈ ಮಹಿಳೆ ಕಳೆದ 13 ವರ್ಷಗಳಿಂದ ಮಾದಾಪುರದ ದುರ್ಗನಚೆರುವು ಬಳಿ ಬೀದಿ ಆಹಾರದ ಅಂಗಡಿ ನಡೆಸುತ್ತಿದ್ದಾರೆ. ಕಡಿಮೆ ಬೆಲೆಗೆ ರುಚಿಕರವಾದ ಆಹಾರವನ್ನು ಒದಗಿಸುವ ಮೂಲಕ ಇದು ಸ್ಥಳೀಯವಾಗಿ ಬಹಳ ಪ್ರಸಿದ್ಧವಾಯಿತು. ಈಗ ಆಕೆಗೆ ಸಂಬಂಧಿಸಿದ ವಿಡಿಯೋವೊಂದು… ಅದರಲ್ಲಿನ ಒಂದು ಚಿಕ್ಕ ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಯಿತು… ಇದರಿಂದ ಕುಮಾರಿ ಆಂಟಿಯ ಸ್ಟಾಲ್ ಗೆ ತುಂಬಾ ಜನ ಹೋಗತೊಡಗಿದರು. ಜನಸಂದಣಿ ಹೆಚ್ಚಾದ ಕಾರಣ, ಸಂಚಾರದಲ್ಲಿ ವ್ಯತ್ಯಯ ಉಂಟಾದ ಕಾರಣ, ಹೈದರಾಬಾದ್ ಟ್ರಾಫಿಕ್ ಪೊಲೀಸರು ಕುಮಾರಿ ಆಂಟಿ ಸ್ಟಾಲ್ ಅನ್ನು ಅಲ್ಲಿಂದ ತೆಗೆದುಹಾಕಲು ಆದೇಶಿಸಿದರು.

ಈಗ ಕುಮಾರಿ ಆಂಟಿ ಕಥೆಗೆ ಟ್ವಿಸ್ಟ್ ಸಿಕ್ಕಿದೆ.. ಎಲ್ಲರೂ ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ಬೆಂಬಲಿಸುವ ಮೂಲಕ ಅದನ್ನು ಮತ್ತಷ್ಟು ಖ್ಯಾತರನ್ನಾಗಿಸಿದ್ದಾರೆ. ವಿಷಯ ತೆಲಂಗಾಣ ಸಿಎಂ ರೇವಂತ್ ರೆಡ್ಡಿವರೆಗೂ ಹೋಗಿತ್ತು. ತಾವು ಅಲ್ಲಿಯೇ ವ್ಯಾಪಾರ ಮಾಡಬಹುದು. ಸದ್ಯದಲ್ಲೇ ಖುದ್ದು ತಾನು ಆ ಸ್ಟಾಲ್​​ಗೆ ಭೇಟಿ ನೀಡುವುದಾಗಿಯೂ ರೇವಂತ್ ರೆಡ್ಡಿ ಸ್ಪಷ್ಟಪಡಿಸಿದ್ದರು. ಅದರ ಬೆನ್ನಲ್ಲೇ.. ಕುಮಾರಿ ಆಂಟಿ ರಾಜ್ಯದಲ್ಲಿ ಮತ್ತಷ್ಟು ಹಾಟ್ ಟಾಪಿಕ್ ಆಗಿದ್ದಾರೆ.

ಈ ಹಿನ್ನೆಲೆಯಲ್ಲಿ ಆಕೆಯ ಕುರಿತಾದ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. OTT ದೈತ್ಯ ನೆಟ್‌ಫ್ಲಿಕ್ಸ್ ಮೂರು ಸಂಚಿಕೆಗಳೊಂದಿಗೆ ‘ಫೇಮ್’ ಎಂಬ ಶೀರ್ಷಿಕೆಯಡಿ ಸಾಕ್ಷ್ಯಚಿತ್ರವನ್ನು ಯೋಜಿಸುತ್ತಿದೆ ಎಂಬುದು ಅದರ ಸಾರಾಂಶ. ಸದ್ಯ ಈ ಸುದ್ದಿಯೂ ನೆಟ್​​​ಲೋಕದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನೆಟಿಜನ್‌ಗಳು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದಾಗ್ಯೂ, ಈ ಹೇಳಿಕೆ ಬಗ್ಗೆ ಮತ್ತೊಂದು ಟ್ವಿಟ್ಟರ್​​ ಪುಟದಲ್ಲಿ ‘ನೆಟ್‌ಫ್ಲಿಕ್ಸ್ ಅಂತಹ ಯಾವುದೇ ರೀತಿಯ ಸಾಕ್ಷ್ಯಚಿತ್ರ ತಯಾರಿ ಬಗ್ಗೆ ಯೋಜಿಸುತ್ತಿಲ್ಲ‘ ಎಂದು ಬಹಿರಂಗಪಡಿಸಿದೆ. ಇದು ಕೇವಲ ಮೋಜಿಗಾಗಿ ರಚಿಸಲಾದ ಮೀಮ್ ಎಂದೂ ಸ್ಪಷ್ಟಪಡಿಸಿದೆ.

Published On - 1:34 pm, Tue, 6 February 24