Supreme Court: ಮರಣದಂಡನೆ ಅಪರಾಧಿಗಳ ಕ್ಷಮಾದಾನ ಅರ್ಜಿಗಳ ನಿರ್ಧಾರವನ್ನು ವಿಳಂಬ ಮಾಡಬೇಡಿ: ರಾಜ್ಯಗಳಿಗೆ ಸುಪ್ರೀಂ ಸೂಚನೆ

|

Updated on: Apr 15, 2023 | 11:59 AM

ಮರಣದಂಡನೆ ಅಪರಾಧಿಗಳು ಸಲ್ಲಿಸಿದ ಕ್ಷಮಾದಾನ ಅರ್ಜಿಗಳ ನಿರ್ಧಾರಗಳನ್ನು ವಿಳಂಬ ಮಾಡಬೇಡಿ ಎಂದು ಸುಪ್ರೀಂ ಕೋರ್ಟ್ ರಾಜ್ಯಗಳು ಮತ್ತು ಇತರ ಸೂಕ್ತ ಅಧಿಕಾರಿಗಳಿಗೆ ಹೇಳಿದೆ.

Supreme Court: ಮರಣದಂಡನೆ ಅಪರಾಧಿಗಳ ಕ್ಷಮಾದಾನ ಅರ್ಜಿಗಳ ನಿರ್ಧಾರವನ್ನು ವಿಳಂಬ ಮಾಡಬೇಡಿ: ರಾಜ್ಯಗಳಿಗೆ ಸುಪ್ರೀಂ ಸೂಚನೆ
ಸುಪ್ರೀಂ ಕೋರ್ಟ್​ (ಸಂಗ್ರಹ ಚಿತ್ರ)
Follow us on

ದೆಹಲಿ: ಸುಪ್ರೀಂ ಕೋರ್ಟ್ (Supreme Court) ಎಲ್ಲ ರಾಜ್ಯಗಳಿಗೆ ಹಾಗೂ ಅಧಿಕಾರಿಗಳಿಗೆ ಮಹತ್ವದ ಸೂಚನೆಯನ್ನು ನೀಡಿದೆ. ಮರಣದಂಡನೆ ಅಪರಾಧಿಗಳು ಸಲ್ಲಿಸಿದ ಕ್ಷಮಾದಾನ ಅರ್ಜಿಗಳ ನಿರ್ಧಾರಗಳನ್ನು ವಿಳಂಬ ಮಾಡಬೇಡಿ ಎಂದು ಸುಪ್ರೀಂ ಕೋರ್ಟ್ ರಾಜ್ಯಗಳು ಮತ್ತು ಇತರ ಸೂಕ್ತ ಅಧಿಕಾರಿಗಳಿಗೆ ಹೇಳಿದೆ, ಇದು ಅಪರಾಧಿಗಳಿಗೆ ನೀಡುವ ಕಠಿಣ ಶಿಕ್ಷೆಯಾಗಿರುವುದರಿಂದ, ಈ ಬಗ್ಗೆ ತಕ್ಷಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವೆಂದರೆ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸುವಾಗ ಅಪರಾಧಿಗೆ ಕಾನೂನಿನ ಕ್ರಮದ ಬಗ್ಗೆ ಅನುಮಾನ ಬರಬಹುದು ಎಂದು ಹೇಳಿದೆ. ಸುಪ್ರೀಂ ಈ ಬಗ್ಗೆ ಒಂದು ಉದಾಹರಣೆಯನ್ನು ಕೂಡ ನೀಡಿದೆ. ಕಳೆದ ವರ್ಷ ಜನವರಿಯಲ್ಲಿ ಬಾಂಬೆ ಹೈಕೋರ್ಟ್ ರೇಣುಕಾ ಶಿಂಧೆ ಅಲಿಯಾಸ್ ರೇಣುಕಾ ಬಾಯಿಯ ಮರಣದಂಡನೆ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸುವಾಗ ನ್ಯಾಯಾಲಯವು ಈ ಅವಲೋಕನಗಳನ್ನು ಮಾಡಿತು. 1990 ಮತ್ತು 1996ರ ನಡುವೆ ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿ ರೇಣುಕಾ ಶಿಂಧೆ 13 ಮಕ್ಕಳನ್ನು ಅಪಹರಿಸಿ ಅವರಲ್ಲಿ ಒಂಬತ್ತು ಮಕ್ಕಳನ್ನು ಕೊಂದಿದ್ದರು, ಇದಕ್ಕಾಗಿ ಆಕೆಗೆ 2001ರಲ್ಲಿ ವಿಚಾರಣಾ ನ್ಯಾಯಾಲಯ, 2004ರಲ್ಲಿ ಹೈಕೋರ್ಟ್ ಮತ್ತು 2006ರಲ್ಲಿ ಸುಪ್ರೀಂ ಕೋರ್ಟ್ ಮರಣದಂಡನೆ ವಿಧಿಸಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳು ರೇಣುಕಾ ಅವರ ಸಹೋದರಿಗೆ ಶಿಕ್ಷೆ ವಿಧಿಸಿದ್ದವು. ಸೀಮಾ ಮತ್ತು ಆಕೆಯ ತಾಯಿ ವಿಚಾರಣೆ ವೇಳೆ ಸಾವನ್ನಪ್ಪಿದ್ದಾರೆ.

ಜನವರಿ 2022ರ ಬಾಂಬೆ ಹೈಕೋರ್ಟ್ ನಿರ್ಧಾರವು ಬದಲಾವಣೆ ಮಾಡಿ ರೇಣುಕಾ ಮತ್ತು ಸೀಮಾಗೆ ಗಲ್ಲು ಶಿಕ್ಷೆಯನ್ನು ನೀಡಿತ್ತು. ಇವರು ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳಾ ಅಪರಾಧಿಗಳು ಎಂದು ಹೇಳಲಾಗಿತ್ತು. ರೇಣುಕಾ ಸುಮಾರು 7 ವರ್ಷ, 10 ತಿಂಗಳ ನಂತರ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದರು, ಆದರೆ ಈ ಅರ್ಜಿಯನ್ನು ಮಹಾರಾಷ್ಟ್ರ ರಾಜ್ಯಪಾಲರು 2008ರಲ್ಲಿ ತಿರಸ್ಕರಿಸಿದರು. 2020ರಲ್ಲಿ ಮಧ್ಯಪ್ರದೇಶದ ಜಗದೀಶ್ ವಿರುದ್ಧದ ತೀರ್ಪು ನೀಡುವಾಗ 5 ವರ್ಷ ತಡವಾಗಿತ್ತು, ಈ ಕಾರಣಕ್ಕೆ ಸುಪ್ರೀಂ ಕೋರ್ಟ್‌ ಇಂತಹ ಪ್ರಕರಣಗಳಲ್ಲಿ ಅಥವಾ ಆದೇಶಗಳಲ್ಲಿ ಹೆಚ್ಚು ವಿಳಂಬವಾಗಿದೆ ಎಂಬ ಕಾರಣಕ್ಕೆ ಮಹಿಳಾ ಅಪರಾಧಿ ರೇಣುಕಾ ಅವರ ಜೀವಾವಧಿಯನ್ನು ಮರಣದಂಡನೆಗೆ ಪರಿವರ್ತಿಸುವಲ್ಲಿ ಉಚ್ಚ ನ್ಯಾಯಾಲಯದ ಕೂಡ ದೊಡ್ಡ ಪಾತ್ರವನ್ನು ವಹಿಸಬೇಕು ಎಂದು ಹೇಳಿತ್ತು.

ಜನವರಿ 18, 2022ರ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಎಂಆರ್ ಷಾ ಮತ್ತು ಸಿಟಿ ರವಿಕುಮಾರ್ ಅವರ ಪೀಠವು ಕ್ಷಮಾದಾನ ಅರ್ಜಿಗಳ ಬಗ್ಗೆ ವ್ಯವಹರಿಸುವ ಎಲ್ಲಾ ರಾಜ್ಯಗಳು ಮತ್ತು ಸೂಕ್ತ ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಿತು. ಮರಣದಂಡನೆ ಶಿಕ್ಷೆಯ ವಿರುದ್ಧದ ಕ್ಷಮಾದಾನ ಅರ್ಜಿಗಳನ್ನು ಶೀಘ್ರವಾಗಿ ನಿರ್ಧರಿಸಲು ಅಥವಾ ಅರ್ಜಿಗಳನ್ನು ವಿಚಾರಣೆ ಮಾಡಲು ವಿಳಂಬವಾದರೆ ಅದು ಆರೋಪಿಗಳಿಗೆ ಯಾವುದೇ ಪ್ರಯೋಜನ ಇಲ್ಲ, ಇದು ಅವರ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡುಬಹುದು.

ಇದನ್ನೂ ಓದಿ; Supreme Court : ಕೇಂದ್ರ ಸಚಿವರ ಕಾರಿನ ಮೇಲೆ ದಾಳಿ ಪ್ರಕರಣ, ಸಿಬಿಐ ತನಿಖೆಗೆ ನಿರ್ದೇಶಿಸಿದ ಕಲ್ಕತ್ತಾ ಹೈಕೋರ್ಟ್ ಆದೇಶ ರದ್ದುಗೊಳಿಸಿದ ಸುಪ್ರೀಂ

2008ರಲ್ಲಿ ರೇಣುಕಾ ಅವರ ಕ್ಷಮಾದಾನ ಅರ್ಜಿಯನ್ನು ಮಹಾರಾಷ್ಟ್ರದ ರಾಜ್ಯಪಾಲರು ತಿರಸ್ಕರಿಸಿದ ನಂತರ, ರೇಣುಕಾ ಅವರು ರಾಷ್ಟ್ರಪತಿಗಳ ಮುಂದೆ ಮತ್ತೊಂದು ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದರು, ಆದರೆ ರಾಷ್ಟ್ರಪತಿ ಕೂಡ ಈ ಬಗ್ಗೆ 2014ರಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿರಲಿಲ್ಲ. ಕ್ಷಮಾದಾನ ಅರ್ಜಿ ವಿಚಾರಣೆ ವಿಳಂಬವಾದರೆ ಮರಣದಂಡನೆಯ ಉದ್ದೇಶ ನಿರಾಶೆಗೊಳ್ಳುತ್ತದೆ ಎಂದು ಪೀಠ ಹೇಳಿದೆ.

ರಾಜ್ಯ ಸರ್ಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಕ್ಷಮಾದಾನ ಅರ್ಜಿಗಳನ್ನು ಶೀಘ್ರವಾಗಿ ನಿರ್ಧರಿಸಿ ವಿಲೇವಾರಿ ಮಾಡುವಂತೆ ನೋಡಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು, ಇದರಿಂದ ಆರೋಪಿ ಕೂಡ ತನ್ನ ಭವಿಷ್ಯ ಮತ್ತು ನ್ಯಾಯವನ್ನು ಸಹ ತಿಳಿದುಕೊಳ್ಳಬಹುದು ಎಂದು ಸುಪ್ರೀಂ ಹೇಳಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ತನ್ನ ಆದೇಶದ ಪ್ರತಿಯನ್ನು ನೀಡುವಂತೆ ಸುಪ್ರೀಂ ನಿರ್ದೇಶನ ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:41 am, Sat, 15 April 23