ಮುಂಬೈನಲ್ಲಿ ನಡೆಯುತ್ತಿದ್ದ ಇಂಡಿಯಾ ಮೈತ್ರಿಕೂಟದ ಸಭೆಗೆ ಬಂದ ಕಪಿಲ್ ಸಿಬಲ್; ನಾಯಕರಿಗೆ ಕಸಿವಿಸಿ

|

Updated on: Sep 01, 2023 | 6:40 PM

Kapil Sibal: ಸಾಮಾಜಿಕ ಮಾಧ್ಯಮ Xನಲ್ಲಿ ಪಿಟಿಐ ಸುದ್ದಿಸಂಸ್ಥೆ ಅಪ್ಲೋಡ್ ಮಾಡಿದ 20-ಸೆಕೆಂಡ್ ವಿಡಿಯೊದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಲೆ ಅವರು ಸಿಬಲ್ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿರುವುದನ್ನು ತೋರಿಸಿದೆ. ಠಾಕ್ರೆ ಮತ್ತು ಶಿವಸೇನಾ UBT ಟ್ರಬಲ್‌ಶೂಟರ್ ಸಂಜಯ್ ರಾವತ್ ಅವರು ವೇಣುಗೋಪಾಲ್ ಜತೆ ಮಾತನಾಡುತ್ತಿರುವುದನ್ನು ವಿಡಿಯೊ ತೋರಿಸುತ್ತದೆ

ಮುಂಬೈನಲ್ಲಿ ನಡೆಯುತ್ತಿದ್ದ ಇಂಡಿಯಾ ಮೈತ್ರಿಕೂಟದ ಸಭೆಗೆ ಬಂದ ಕಪಿಲ್ ಸಿಬಲ್; ನಾಯಕರಿಗೆ ಕಸಿವಿಸಿ
ಕಪಿಲ್ ಸಿಬಲ್
Follow us on

ಮುಂಬೈ ಸೆಪ್ಟೆಂಬರ್ 01: ಮುಂಬೈನಲ್ಲಿ ವಿಪಕ್ಷಗಳ ಮೈತ್ರಿಕೂಟ ಇಂಡಿಯಾದ (INDIA Bloc Meeting) ಸಭೆ ನಡೆಯುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ಕಪಿಲ್ ಸಿಬಲ್ (Kapil Sibal) ಅಲ್ಲಿಗೆ ಅನಿರೀಕ್ಷಿತ ಭೇಟಿ ನೀಡಿದ್ದು, ನಾಯಕರಿಗೆ ಕಸಿವಿಸಿಯುಂಟಾಗಿದೆ. ಕಳೆದ ವರ್ಷ ಪಕ್ಷವನ್ನು ತೊರೆದಿದ್ದ ಸಿಬಲ್, ಅಧಿಕೃತ ಆಹ್ವಾನಿತರಲ್ಲ. ಆದರೆ ಸಭೆಯಲ್ಲಿ ಅವರ ಉಪಸ್ಥಿತಿಯು ಮಾಜಿ ಸಹೋದ್ಯೋಗಿಗಳನ್ನು ಅಸಮಾಧಾನಗೊಳಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ಹಿರಿಯ ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ (KC Venugopal) ಅವರು ವಿರೋಧ ಪಕ್ಷದ ನಾಯಕರ ಫೋಟೋ ತೆಗೆಯುವ ಮೊದಲ ಮಹಾರಾಷ್ಟ್ರದ ಮಾಜಿ ಸಚಿವ ಉದ್ಧವ್ ಠಾಕ್ರೆ ಅವರಿಗೆ ಶ ಸಿಬಲ್ ಅವರ ಉಪಸ್ಥಿತಿಯ ಬಗ್ಗೆ ದೂರು ನೀಡಿದ್ದಾರೆ. ಠಾಕ್ರೆಯವರ ಶಿವಸೇನಾ (ಯುಬಿಟಿ) ಮುಂಬೈನಲ್ಲಿ ಇಂಡಿಯಾ ಸಭೆಯನ್ನು ಆಯೋಜಿಸಿದೆ.


ಏತನ್ಮಧ್ಯೆ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಮುಂದಿನ ವರ್ಷದ ಚುನಾವಣೆಗೆ ಮುಂಚಿತವಾಗಿ ಎಲ್ಲಾ ವಿರೋಧ ರಾಜಕಾರಣಿಗಳನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿರುವ ಸಭೆಯಲ್ಲಿ ಸಿಬಲ್ ಅವರ ಉಪಸ್ಥಿತಿಯನ್ನು ಒಪ್ಪಿಕೊಳ್ಳುವಂತೆ ವೇಣುಗೋಪಾಲ್ ಮನವೊಲಿಸಿದರು. ಅದೇ ವೇಳ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಸಿಬಲ್ ಉಪಸ್ಥಿತಿ ಬಗ್ಗ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

ಅಂತಿಮವಾಗಿ, ಈಗ ಸ್ವತಂತ್ರ ರಾಜ್ಯಸಭಾ ಸಂಸದರಾಗಿರುವ ಶ ಸಿಬಲ್ ಅವರನ್ನು ಸಹ ಫೋಟೊಗೆ ನಿಲ್ಲಿಸಲಾಗಿದೆ.

ಸಾಮಾಜಿಕ ಮಾಧ್ಯಮ Xನಲ್ಲಿ ಪಿಟಿಐ ಸುದ್ದಿಸಂಸ್ಥೆ ಅಪ್ಲೋಡ್ ಮಾಡಿದ 20-ಸೆಕೆಂಡ್ ವಿಡಿಯೊದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಲೆ ಅವರು ಸಿಬಲ್ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿರುವುದನ್ನು ತೋರಿಸಿದೆ. ಠಾಕ್ರೆ ಮತ್ತು ಶಿವಸೇನಾ UBT ಟ್ರಬಲ್‌ಶೂಟರ್ ಸಂಜಯ್ ರಾವತ್ ಅವರು ವೇಣುಗೋಪಾಲ್ ಜತೆ ಮಾತನಾಡುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ರಾವುತ್ ಸಂಭಾಷಣೆಯಲ್ಲಿ ಮಗ್ನರಾಗಿರುವುದು ಕಾಣಿಸುತ್ತದೆ.

ಸಭೆಯ ಇತರ ದೃಶ್ಯಗಳಲ್ಲಿ, ಸಿಬಲ್ ಅವರು ಪಂಜಾಬ್ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಭಗವಂತ್ ಮಾನ್ ಅವರೊಂದಿಗೆ ಮಾತನಾಡುತ್ತಿರುವುದೂ ಕಾಣಿಸುತ್ತದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುತ್ತೇವೆ: ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ನಿರ್ಣಯ

ಕಾಂಗ್ರೆಸ್ ಪಕ್ಷ ತೊರೆದಿದ್ದ ಸಿಬಲ್

ಮಾಜಿ ಕೇಂದ್ರ ಸಚಿವರಾಗಿದ್ದ ಸಿಬಲ್ ಅವರು ಕಳೆದ ವರ್ಷ ಮೇ 16 ರಂದು ಕಾಂಗ್ರೆಸ್ ತೊರೆದರು. ಪಕ್ಷದ ಚಿಂತನ್ ಶಿವಿರ್ ನಲ್ಲಿ ಚುನಾವಣಾ ಸೋಲುಗಳು ಮತ್ತು ಆಂತರಿಕ ಬಿಕ್ಕಟ್ಟುಗಳ ಬಗ್ಗೆ ಚರ್ಚೆ ನಡೆದ ಮರುದಿನವೇ ಅವರು ಪಕ್ಷ ತೊರೆದಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ