ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರದ ಸಾಲಿವಾಡದಲ್ಲಿ ಕುಡಿದ ಅಮಲಿನಲ್ಲಿ ಶಾಲೆಯ ಪ್ರಾಂಶುಪಾಲರು ಮಹಿಳಾ ಶಿಕ್ಷಕಿಯೊಬ್ಬರಿಗೆ ಸಿಗರೇಟ್ ಸೇದಲು ಮತ್ತು ಮದ್ಯ ಸೇವಿಸಲು ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಲಿವಾಡದ ಕಾನ್ವೆಂಟ್ ಶಾಲೆಯ ಪ್ರಾಂಶುಪಾಲ ಕ್ಷಿತಿಜ್ ಜಾಕೋಬ್ ಶಿಕ್ಷಕಿಯನ್ನು ಕೆಲಸದ ಬಗ್ಗೆ ಚರ್ಚಿಸುವ ನೆಪದಲ್ಲಿ ದುಮ್ನಾ ರಸ್ತೆಗೆ ಕರೆದೊಯ್ದು ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಾಂಶುಪಾಲರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಖಮಾರಿಯಾ ಪೊಲೀಸ್ ಠಾಣೆ ಪ್ರಾಂಶುಪಾಲ ಕ್ಷಿತಿಜ್ ಜಾಕೋಬ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದೆ. ಪೊಲೀಸರು ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ವಕ್ಫ್ ಹಿಂಸೆಗೆ ಇನ್ನೆಷ್ಟು ಬಲಿ ಬೇಕು ಸಿದ್ದರಾಮಯ್ಯನವರೇ? ಪ್ರಲ್ಹಾದ್ ಜೋಶಿ
ಶಿಕ್ಷಕಿಯ ಹೇಳಿಕೆಯಂತೆ, ಪ್ರಿನ್ಸಿಪಾಲ್ ಆಕೆಗೆ ಮದ್ಯ ಮತ್ತು ಸಿಗರೇಟ್ ಸೇವಿಸುವಂತೆ ಒತ್ತಾಯಿಸಿದರು. ಆಕೆ ವಿರೋಧಿಸಿದಾಗ ಮಾನಸಿಕ ಮತ್ತು ದೈಹಿಕ ಕಿರುಕುಳವನ್ನು ನೀಡಿದರು. ಕೆಲಸದ ಬಗ್ಗೆ ಚರ್ಚಿಸುವ ನೆಪದಲ್ಲಿ ಪ್ರಾಂಶುಪಾಲರು ಆಕೆಯನ್ನು ದುಮ್ನಾ ರಸ್ತೆಗೆ ಕರೆದೊಯ್ದು ಮದ್ಯಪಾನ ಮತ್ತು ಧೂಮಪಾನ ಮಾಡುವಂತೆ ಒತ್ತಡ ಹೇರಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ. ಆಕೆ ಅದಕ್ಕೆ ನಿರಾಕರಿಸಿದ ನಂತರ ಮರುದಿನ ಇಡೀ ಶಾಲೆಯ ಮುಂದೆ ಆಕೆಯನ್ನು ಅವಮಾನಿಸಿ, ಮಂಡಿಯೂರುವಂತೆ ಮಾಡಿ ಮಾನಸಿಕ ಕಿರುಕುಳ ನೀಡಲಾಯಿತು.
ಇದನ್ನೂ ಓದಿ: ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ; ಗುಪ್ತಾಂಗಕ್ಕೆ ಕೋಲು, ಮೆಣಸಿನ ಪುಡಿ ತುರುಕಿ ಚಿತ್ರಹಿಂಸೆ
ಪ್ರಾಂಶುಪಾಲರು ಆಗಾಗ ತನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ಕೂಡ ಶಿಕ್ಷಕಿ ಹೇಳಿದ್ದಾರೆ. ಆಗಾಗ ಆಕೆಯನ್ನು ತನ್ನ ಕಛೇರಿಗೆ ಕರೆಸಿಕೊಂಡು ಅನುಚಿತವಾಗಿ ವರ್ತಿಸುತ್ತಿದ್ದರು ಎಂದಿದ್ದಾರೆ. ಅಲ್ಲದೆ, ಆಕೆಯನ್ನು ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ತನಗೆ ಉದ್ಯೋಗದ ಅವಶ್ಯಕತೆ ಇದ್ದುದರಿಂದ ಉದ್ಯೋಗ ಕಳೆದುಕೊಳ್ಳುವ ಭಯದಿಂದ ಎರಡು ವರ್ಷಗಳಿಂದ ಇದನ್ನು ಸಹಿಸಿಕೊಂಡಿದ್ದೆ ಎಂದು ಆಕೆ ಹೇಳಿದ್ದಾರೆ.
ಆ ಆರೋಪ ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಆದರೆ, ಪ್ರಾಂಶುಪಾಲ ಕ್ಷಿತಿಜ್ ಜೇಕಬ್ ಆರೋಪದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ