ಇಂಡಿಗೋ ವಿಮಾನದಲ್ಲಿ ಕುಡುಕ ಯುವತಿಯಿಂದ ಅಸಭ್ಯ ವರ್ತನೆ: ಕೋಲ್ಕತ್ತಾ ಪೊಲೀಸರಿಗೆ ಹಸ್ತಾಂತರ

|

Updated on: May 12, 2023 | 9:37 AM

ಭಾರತೀಯ ಕಾನೂನಿನ ಪ್ರಕಾರ, ಸೂರ್ಯಾಸ್ತದ ನಂತರ ಪೊಲೀಸರು ಮಹಿಳೆಯನ್ನು ಬಂಧಿಸುವಂತಿಲ್ಲ, ಆದ್ದರಿಂದ ಸಿಐಎಸ್ಎಫ್ ಸಿಬ್ಬಂದಿ ಸೂರ್ಯೋದಯದವರೆಗೆ ಕಾಯಬೇಕಾಯಿತು.

ಇಂಡಿಗೋ ವಿಮಾನದಲ್ಲಿ ಕುಡುಕ ಯುವತಿಯಿಂದ ಅಸಭ್ಯ ವರ್ತನೆ: ಕೋಲ್ಕತ್ತಾ ಪೊಲೀಸರಿಗೆ ಹಸ್ತಾಂತರ
ಇಂಡಿಗೋ ವಿಮಾನದಲ್ಲಿ ಕುಡುಕ ಯುವತಿಯಿಂದ ಅಸಭ್ಯ ವರ್ತನೆ
Follow us on

ವಿಮಾನದಲ್ಲಿ ಪ್ರಯಾಣಿಕರು ಅಸಭ್ಯವಾಗಿ, ಅನುಚಿತವಾಗಿ (misbehave) ವರ್ತಿಸುವ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿವೆ. ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಸೇರಿದಂತೆ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಇಂತಹ ಹಲವಾರು ಘಟನೆಗಳು ವರದಿಯಾಗಿವೆ. ಆದರೆ ಈಗ ಆ ಪಟ್ಟಿಗೆ ಇಂಡಿಗೋ ಕೂಡ ಸೇರುತ್ತಿದೆ. ಈ ವೇಳೆ ಯುವತಿಯೊಬ್ಬಳು (woman) ಫ್ಲೈಟ್ ನಲ್ಲಿ ( indigo flight) ಸಮಸ್ಯೆ ಸೃಷ್ಟಿಸಿದ್ದಾಳೆ. ವಿಮಾನದಲ್ಲಿ ಪಾನಮತ್ತ ವಿಮಾಣ ನಿಲ್ದಾಣ ಕಾಯುವ ಸಿಐಎಸ್ಎಫ್ ಸಿಬ್ಬಂದಿ ಅವರನ್ನು ಕೋಲ್ಕತ್ತಾ ಪೊಲೀಸರಿಗೆ ಹಸ್ತಾಂತರಿಸಿದೆ. ನವದೆಹಲಿ-ಕೋಲ್ಕತ್ತಾ ನಡುವೆ (new delhi, kolkata) ಸಂಚರಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದೆ.

ಕುಡಿದ ಮತ್ತಿನಲ್ಲಿದ್ದ ಯುವತಿಯು ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾಳೆ. ಈ ಘಟನೆಯ ನಂತರ ಸಿಐಎಸ್‌ಎಫ್ ಸಿಬ್ಬಂದಿ ಮಹಿಳೆಯನ್ನು ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಗುರುವಾರ ಬೆಳಗ್ಗೆ ಸಿಐಎಸ್‌ಎಫ್ ಸಿಬ್ಬಂದಿ ಮಹಿಳೆಯನ್ನು ಕೋಲ್ಕತ್ತಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಮಾನದಲ್ಲಿ ಪಾನಮತ್ತರಾಗಿದ್ದ ಮಹಿಳೆ ಪರಂಜಿತ್ ಕೌರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇಂಡಿಗೋದ ನವದೆಹಲಿ-ಕೋಲ್ಕತ್ತಾ ವಿಮಾನದಲ್ಲಿ ಪರಂಜಿತ್ ಕೋಲ್ಕತ್ತಾಗೆ ಹೋಗುತ್ತಿದ್ದರು. ವಿಮಾನ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಮದ್ಯದ ಅಮಲಿನಲ್ಲಿದ್ದ ಮಹಿಳೆಯೊಬ್ಬರು ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಮಹಿಳೆ ಹಾರಾಟಕ್ಕೆ ಅಡ್ಡಿಪಡಿಸುತ್ತಿರುವುದನ್ನು ಅರಿತ ಕ್ಯಾಬಿನ್ ಸಿಬ್ಬಂದಿ ಘಟನೆಯ ಬಗ್ಗೆ ಏರ್‌ಲೈನ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಮಾನಯಾನ ಅಧಿಕಾರಿಗಳು ತಕ್ಷಣವೇ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾದ ಸಿಐಎಸ್ಎಫ್ ಸಿಬ್ಬಂದಿಯನ್ನು ಸಂಪರ್ಕಿಸಿದರು. ಮಧ್ಯಾಹ್ನ 1.10ಕ್ಕೆ ವಿಮಾನ ಲ್ಯಾಂಡ್ ಆದ ಬಳಿಕ ಏರ್ ಲೈನ್ ಸಿಬ್ಬಂದಿ ಆಕೆಯನ್ನು ಸಿಐಎಸ್ಎಫ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಗುರುವಾರ ಬೆಳಗಿನ ಜಾವದವರೆಗೆ ಸಿಐಎಸ್‌ಎಫ್‌ ಆಕೆಯನ್ನು ವಿಮಾನ ನಿಲ್ದಾಣದ ಆವರಣದಲ್ಲಿ ಬಂಧಿಸಿ, ಕೊನೆಗೆ ಗುರುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಬಿಧಾನನಗರ ಸಿಟಿ ಪೊಲೀಸ್‌ ಅಧೀನದಲ್ಲಿರುವ ಏರ್‌ಪೋರ್ಟ್‌ ಪೊಲೀಸ್‌ ಠಾಣೆಗೆ ಹಸ್ತಾಂತರಿಸಿದೆ. ಭಾರತೀಯ ಕಾನೂನಿನ ಪ್ರಕಾರ, ಸೂರ್ಯಾಸ್ತದ ನಂತರ ಪೊಲೀಸರು ಮಹಿಳೆಯನ್ನು ಬಂಧಿಸುವಂತಿಲ್ಲ, ಆದ್ದರಿಂದ ಸಿಐಎಸ್ಎಫ್ ಸಿಬ್ಬಂದಿ ಸೂರ್ಯೋದಯದವರೆಗೆ ಕಾಯಬೇಕಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:36 am, Fri, 12 May 23