Agniveer Reservation: ದೇಶದ ಗಡಿ ಕಾಯುವ ಅಗ್ನಿವೀರರಿಗೆ ರೈಲ್ವೆ ಉದ್ಯೋಗದಲ್ಲಿ ಮೀಸಲಾತಿ
ದೇಶದ ಗಡಿ ಕಾಯುವ ಅಗ್ನಿವೀರ(Agniveer)ರಿಗೆ ಭಾರತೀಯ ರೈಲ್ವೆಯು ಭರ್ಜರಿ ಉಡುಗೊರೆ ನೀಡಿದೆ, ರೈಲ್ವೆ ಇಲಾಖೆ ಉದ್ಯೋಗದಲ್ಲಿ ಅಗ್ನಿವೀರರಿಗೆ ಶೇ.15ರಷ್ಟು ಮೀಸಲಿಡುವುದಾಗಿ ತಿಳಿಸಿದೆ.
ದೇಶದ ಗಡಿ ಕಾಯುವ ಅಗ್ನಿವೀರ(Agniveer)ರಿಗೆ ಭಾರತೀಯ ರೈಲ್ವೆಯು ಭರ್ಜರಿ ಉಡುಗೊರೆ ನೀಡಿದೆ, ರೈಲ್ವೆ ಇಲಾಖೆ ಉದ್ಯೋಗದಲ್ಲಿ ಅಗ್ನಿವೀರರಿಗೆ ಶೇ.15ರಷ್ಟು ಮೀಸಲಿಡುವುದಾಗಿ ತಿಳಿಸಿದೆ. ರೈಲ್ವೆ ಇಲಾಖೆಯ ಲೆವೆಲ್ 1 ಹುದ್ದೆಗಳಲ್ಲಿ ಶೇ.10ರಷ್ಟು ಮೀಸಲಿರಿಸಲಾಗುತ್ತದೆ, ಲೆವೆಲ್ 2, ಗೆಜೆಟೆಡ್ ಅಲ್ಲದ ಹುದ್ದೆಗಳಲ್ಲಿ ಶೇ.5ರಷ್ಟು ಮೀಸಲಿಡಲಾಗುತ್ತದೆ, ಒಟ್ಟು ಶೇ. 15 ಮೀಸಲಾತಿ ಕಲ್ಪಿಸಲು ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ.
ವಿವಿಧ ಇಲಾಖೆಗಳಲ್ಲಿನ ನಾನ್ ಗೆಜೆಟೆಡ್ ಹುದ್ದೆಗಳ ಭರ್ತಿಗೆ ನಡೆಯುವ ನೇರ ನೇಮಕಾತಿಯಲ್ಲಿ ರೈಲ್ವೆಯು ಅಗ್ನಿವೀರರಿಗೆ ಶೇ.15ರಷ್ಟು ಮೀಸಲಾತಿ ನೀಡಲಿದೆ. ಅಗ್ನಿವೀರರಿಗಾಗಿ ರೈಲ್ವೆಯ ಭದ್ರತಾ ಪಡೆಗಳಲ್ಲಿ ಕೂಡ ಮೀಸಲಾತಿ ನೀತಿಯನ್ನು ಜಾರಿಗೆ ತರಲಾಗುತ್ತದೆ, ಮೊದಲ ಬ್ಯಾಚ್ನ ಅಗ್ನಿವೀರರಿಗೆ ವಯೋಮಿತಿಯಲ್ಲಿ 5 ವರ್ಷ ಹಾಗೂ ನಂತರದ ಬ್ಯಾಚ್ಗಳ ಅಗ್ನಿವೀರರಿಗೆ 3 ವರ್ಷಗಳಷ್ಟು ಸಡಿಲಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮತ್ತಷ್ಟು ಓದಿ: Agniveer Scheme: ಅಗ್ನಿವೀರ್ ಯೋಜನೆಯಡಿ ಭಾರತೀಯ ನೌಕಾಪಡೆಗೆ ಮೊದಲ ಬಾರಿಗೆ 341 ಮಹಿಳೆಯರ ನೇಮಕ
ಕಳೆದ ವರ್ಷ ಕೇಂದ್ರವು ಪ್ರಾರಂಭಿಸಿದ ‘ಅಗ್ನಿಪಥ್’ ನೇಮಕಾತಿ ಯೋಜನೆಯಡಿ, ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಕೇವಲ 25 ಪ್ರತಿಶತದಷ್ಟು ಅಗ್ನಿವೀರ್‌ಗಳನ್ನು ಮಾತ್ರ ಪಡೆಯಲಾಗುತ್ತದೆ ಮತ್ತು ಉಳಿದವರು ನಿವೃತ್ತರಾಗುತ್ತಾರೆ ಎಂಬುದು ಗಮನಾರ್ಹ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:55 am, Fri, 12 May 23