Emergency Landing: ದುಬೈಗೆ ಹೊರಟಿದ್ದ ಫೆಡೆಕ್ಸ್ ವಿಮಾನಕ್ಕೆ ಹಕ್ಕಿ ಡಿಕ್ಕಿ, ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ

|

Updated on: Apr 01, 2023 | 3:00 PM

ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ಫೆಡೆಕ್ಸ್ ವಿಮಾನವೊಂದು ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಪಕ್ಷಿಗೆ ಡಿಕ್ಕಿ ಹೊಡೆದಿದೆ.

Emergency Landing: ದುಬೈಗೆ ಹೊರಟಿದ್ದ ಫೆಡೆಕ್ಸ್ ವಿಮಾನಕ್ಕೆ ಹಕ್ಕಿ ಡಿಕ್ಕಿ, ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ
FedEx flight
Follow us on

ದೆಹಲಿ: ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ಫೆಡೆಕ್ಸ್ ವಿಮಾನವೊಂದು ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಪಕ್ಷಿಗೆ ಡಿಕ್ಕಿ ಹೊಡೆದಿದೆ. ಇದೀಗ ದೆಹಲಿ ವಿಮಾನ ನಿಲ್ದಾಣದಲ್ಲಿ ಫೆಡೆಕ್ಸ್ ವಿಮಾನ ತುರ್ತು ಭೂಸ್ಪರ್ಶ (Emergency Landing) ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ 10.46ಕ್ಕೆ ಎಫ್‌ಎಕ್ಸ್ 5279 ಫ್ಲೈಟ್ ಟೇಕ್ ಆಫ್ ಆದ ಕೂಡಲೇ ಹಕ್ಕಿಯೊಂದು ಡಿಕ್ಕಿ ಹೊಡೆದ ನಂತರ ಸಂಪೂರ್ಣ ತುರ್ತು ಲ್ಯಾಂಡಿಂಗ್ ಘೋಷಿಸಲಾಯಿತು.

ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಮಧ್ಯಾಹ್ನ 1.44ಕ್ಕೆ ಮತ್ತೆ ಟೇಕಾಫ್ ಆಗಿತ್ತು. ದುಬೈಗೆ ಹೋಗುವ ವಿಮಾನವನ್ನು ಫೆಡೆಕ್ಸ್ ಕಂಪನಿ ನಿರ್ವಹಿಸುತ್ತಿತ್ತು. ದುಬೈಗೆ ವಿಮಾನದ ನಿಗದಿತ ಆಗಮನವು ಮಧ್ಯಾಹ್ನ 3.29 ಕ್ಕೆ. ಹಕ್ಕಿಗಳ ಅಪಘಾತಗಳು ಸಾಮಾನ್ಯವಾಗಿದ್ದರೂ, ಕೆಟ್ಟ ಹವಾಮಾನದ ಕಾರಣ ಕಳೆದ ಕೆಲವು ದಿನಗಳಲ್ಲಿ ದೆಹಲಿ ವಿಮಾನ ನಿಲ್ದಾಣದಿಂದ ಹಲವಾರು ಪ್ರಯಾಣಿಕರ ವಿಮಾನಗಳನ್ನು ತಿರುಗಿಸಲಾಯಿತು. ಗುರುವಾರ, ಹವಾಮಾನ ವೈಪರೀತ್ಯದಿಂದಾಗಿ ದೆಹಲಿ ವಿಮಾನ ನಿಲ್ದಾಣದಿಂದ ಸುಮಾರು 22 ವಿಮಾನಗಳನ್ನು ತಿರುಗಿಸಲಾಗಿದೆ.

Published On - 2:41 pm, Sat, 1 April 23