ತಿರುವನಂತಪುರಂ: ಕೇರಳ ಪ್ರವಾಸದಲ್ಲಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ 2ನೇ ಬಾರಿಗೆ ಪ್ರತಿಭಟನೆ ನಡೆಸಿದ್ದಾರೆ. ಬಿಎಸ್ವೈ ಕಣ್ಣೂರಿನಲ್ಲಿ ದೇವಸ್ಥಾನಕ್ಕೆ ತೆರಳುವ ವೇಳೆ ಸಿಎಎ ಮತ್ತು ಮಂಗಳೂರಿನಲ್ಲಿ ಪೊಲೀಸರ ಫೈರಿಂಗ್ ವಿರೋಧಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಬ್ಯಾಕ್ ಗೋಬ್ಯಾಕ್ ಎಂದು ಘೋಷಣೆ ಕೂಗಿ ಸಿಎಂ ಬಿಎಸ್ವೈಗೆ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.
ಕಣ್ಣೂರಿನಲ್ಲಿ ಕಾರು ಅಡ್ಡಗಟ್ಟಿ ಸಿಎಂ ಬಿಎಸ್ವೈ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಸಿಪಿಐ(ಎಂ)ಯೂತ್ ವಿಂಗ್ನ ಗುಂಪಿನವರು ಈ ಕೃತ್ಯ ನಡೆಸಿದ್ದಾರೆ. ಕಾರು ಚಾಲಕನ ಚಾಣಾಕ್ಷತನದಿಂದ ಯಡಿಯೂರಪ್ಪ ಬಚಾವ್ ಆಗಿದ್ದಾರೆ. ಇಲ್ಲವಾದಲ್ಲಿ ಹೆಚ್ಚಿನ ರೀತಿಯಲ್ಲಿ ಅನಾಹುತ ಉಂಟಾಗುತ್ತಿತ್ತು. ಆದರೆ ಈವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟ್ವಿಟ್ಟರ್ನಲ್ಲಿ ಕೇರಳ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
CPI(M)s youth wing, unleashes a cowardly attack on K'taka CM Shri @BSYBJP . It was the driver's evasive action that helped the CM escape from further brutality.
State police didn't take any precautions even after getting security threats in advance.@Tejasvi_Surya @amitmalviya pic.twitter.com/drWFJ0PzTX— BJP KERALAM (@BJP4Keralam) December 24, 2019
ಇಂದೇ ಮಂಗಳೂರಿಗೆ ಆಗಮಿಸಲಿರುವ ಬಿಎಸ್ವೈ:
ಕಣ್ಣೂರಿನಲ್ಲಿ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇರಳ ಪ್ರವಾಸ ಮೊಟಕುಗೊಳಿಸಿ ಇಂದೇ ಕಣ್ಣೂರಿನಿಂದ ಮಂಗಳೂರಿಗೆ ಸಿಎಂ ಬಿಎಸ್ವೈ ವಾಪಸ್ ಬರಲಿದ್ದಾರೆ. ಪೂರ್ವನಿಗದಿತ ವೇಳಾಪಟ್ಟಿ ಪ್ರಕಾರ ನಾಳೆ ಮಂಗಳೂರಿಗೆ ಹಿಂದಿರುಗಬೇಕಿತ್ತು. ಆದ್ರೆ ಕೇರಳದಲ್ಲಿ ವ್ಯಾಪಕವಾದ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ರಾತ್ರಿಯೇ ಮಂಗಳೂರಿಗೆ ಹಿಂದಿರುಗಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.
Published On - 3:28 pm, Tue, 24 December 19