ಸಮಾಜ ಒಡೆಯೋ ಬಿಜೆಪಿ ಯತ್ನ ವಿಫಲವಾಗಿದೆ-ಸೋನಿಯಾ ಗಾಂಧಿ
ಜಾರ್ಖಂಡ್ನಲ್ಲಿ ಸಿಕ್ಕ ಬಹುಮತದ ಮೂಲಕ ಧರ್ಮದ ಆಧಾರದಲ್ಲಿ ಸಮಾಜವನ್ನ ಒಡೆಯೋ ಬಿಜೆಪಿ ಪ್ರಯತ್ನವನ್ನ ಜನರು ಸೋಲಿಸಿದ್ದಾರೆ ಅಂತ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನಮತ ಇದೆ ಎಂದಿದ್ದಾರೆ. ‘ಆಂಧ್ರದಲ್ಲಿ ಎನ್ಆರ್ಸಿ ಜಾರಿಯಾಗಲ್ಲ’ ರಾಷ್ಟ್ರೀಯ ಪೌರತ್ವ ನೋಂದಣಿ ಅಥವಾ ಎನ್ಆರ್ಸಿ ಬಗ್ಗೆ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಆಂಧ್ರಪ್ರದೇಶದಲ್ಲಿ ಇದು ಜಾರಿಯಾಗಲ್ಲ ಅಂತ ಸಿಎಂ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಪಶ್ಚಿಮ […]
ಜಾರ್ಖಂಡ್ನಲ್ಲಿ ಸಿಕ್ಕ ಬಹುಮತದ ಮೂಲಕ ಧರ್ಮದ ಆಧಾರದಲ್ಲಿ ಸಮಾಜವನ್ನ ಒಡೆಯೋ ಬಿಜೆಪಿ ಪ್ರಯತ್ನವನ್ನ ಜನರು ಸೋಲಿಸಿದ್ದಾರೆ ಅಂತ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನಮತ ಇದೆ ಎಂದಿದ್ದಾರೆ.
‘ಆಂಧ್ರದಲ್ಲಿ ಎನ್ಆರ್ಸಿ ಜಾರಿಯಾಗಲ್ಲ’ ರಾಷ್ಟ್ರೀಯ ಪೌರತ್ವ ನೋಂದಣಿ ಅಥವಾ ಎನ್ಆರ್ಸಿ ಬಗ್ಗೆ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಆಂಧ್ರಪ್ರದೇಶದಲ್ಲಿ ಇದು ಜಾರಿಯಾಗಲ್ಲ ಅಂತ ಸಿಎಂ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಎನ್ಆರ್ಸಿ ಬಗ್ಗೆ ವಿರೋಧ ವ್ಯಕ್ತವಾದ ಬೆನ್ನಲ್ಲೆ ಈ ಹೇಳಿಕೆ ನೀಡಿದ್ದಾರೆ.
‘ಸಾರ್ವಜನಿಕ ಆಸ್ತಿ ಹಾಳು ಮಾಡುವ ಹಕ್ಕಿಲ್ಲ’ ಪ್ರತಿಭಟನೆ ವೇಳೆ ಯಾರೂ ಕೂಡ ಹಿಂಸಾಚಾರಕ್ಕೆ ತಿರುಗಬಾರದು ಅಂತ ಬಾಲಿವುಡ್ ನಟಿ ಕಂಗನಾ ರನಾವತ್ ಹೇಳಿದ್ದಾರೆ. ದೇಶದಲ್ಲಿ 3ರಿಂದ 4 ಪರ್ಸೆಂಟ್ನಷ್ಟು ಜನ ಮಾತ್ರ ತೆರಿಗೆ ಕಟ್ಟುತ್ತಾರೆ. ಉಳಿದವರು ಅವರ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ಸಾರ್ವಜನಿಕ ಆಸ್ತಿಯನ್ನ ಹಾಳು ಮಾಡಲು ಅವರಿಗೆ ಹಕ್ಕಿಲ್ಲ ಎಂದಿದ್ದಾರೆ.