ನಿಯಂತ್ರಣ ತಪ್ಪಿ ಕಂದಕ್ಕೆ ಉರುಳಿದ ಕಾರು, ಐವರು ಸಾವು

ಹಿಮಾಚಲ ಪ್ರದೇಶದ ಸೋಲನ್‌ನ ಕಂದಘಾಟ್‌ನಲ್ಲಿ ನಿಯಂತ್ರಣ ತಪ್ಪಿದ ಕಾರು ಸುಮಾರು 300 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದು ಭಾರಿ ದುರಂತ ಸಂಭವಿಸಿದೆ. ಶಿಮ್ಲಾಕ್ಕೆ ಭೇಟಿ ನೀಡಲು ಬರುತ್ತಿದ್ದ ಹರಿಯಾಣದ ಐವರು ಪ್ರವಾಸಿಗರು ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಬಟ್ಟೆ ಗೋದಾಮಿಗೆ ಬೆಂಕಿ, 3 ಸಾವು: ದೆಹಲಿಯ ಕಿರಾರಿ ಪ್ರದೇಶದ ಬಟ್ಟೆ ಗೋದಾಮಿನಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಅಗ್ನಿ ದುರಂತದಿಂದ ಗೋದಾಮಿನಲ್ಲಿದ್ದ ಮೂವರ ಸಾವನ್ನಪ್ಪಿದ್ದು, 10 ಜನ ಗಾಯಗೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ರೈಲ್ವೆ ನಿಲ್ದಾಣದಲ್ಲೊಂದು ಪಾರ್ಕ್: […]

ನಿಯಂತ್ರಣ ತಪ್ಪಿ ಕಂದಕ್ಕೆ ಉರುಳಿದ ಕಾರು, ಐವರು ಸಾವು
Follow us
ಸಾಧು ಶ್ರೀನಾಥ್​
|

Updated on:Dec 23, 2019 | 12:35 PM

ಹಿಮಾಚಲ ಪ್ರದೇಶದ ಸೋಲನ್‌ನ ಕಂದಘಾಟ್‌ನಲ್ಲಿ ನಿಯಂತ್ರಣ ತಪ್ಪಿದ ಕಾರು ಸುಮಾರು 300 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದು ಭಾರಿ ದುರಂತ ಸಂಭವಿಸಿದೆ. ಶಿಮ್ಲಾಕ್ಕೆ ಭೇಟಿ ನೀಡಲು ಬರುತ್ತಿದ್ದ ಹರಿಯಾಣದ ಐವರು ಪ್ರವಾಸಿಗರು ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಬಟ್ಟೆ ಗೋದಾಮಿಗೆ ಬೆಂಕಿ, 3 ಸಾವು: ದೆಹಲಿಯ ಕಿರಾರಿ ಪ್ರದೇಶದ ಬಟ್ಟೆ ಗೋದಾಮಿನಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಅಗ್ನಿ ದುರಂತದಿಂದ ಗೋದಾಮಿನಲ್ಲಿದ್ದ ಮೂವರ ಸಾವನ್ನಪ್ಪಿದ್ದು, 10 ಜನ ಗಾಯಗೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ರೈಲ್ವೆ ನಿಲ್ದಾಣದಲ್ಲೊಂದು ಪಾರ್ಕ್: ನಾಸಿಕ್ ರೈಲ್ವೆ ನಿಲ್ದಾಣದಲ್ಲಿ ಗಿಡಗಳ ಪಾಟ್​ಗಳನ್ನು ಇಡೋ ಮೂಲಕ ಆಕ್ಸಿಜನ್ ಪಾರ್ಲರ್ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಪ್ರಯಾಣಿಕರಿಗೆ ವಿಶೇಷ ಅನುಭವವಾಗ್ತಿದ್ದು, ವಿವಿಧ ಬಗೆಯ ಗಿಡಗಳು ಎಲ್ಲರ ಗಮನ ಸೆಳೀತಿದೆ. ಜೊತೆಗೆ ಪರಿಸರ ಜಾಗೃತಿ ಕೂಡ ಜನರಲ್ಲಿ ಮೂಡಿಸಲಾಗಿದೆ.

ಹೋರಿ ದಾಳಿ, 10 ಮಂದಿಗೆ ಗಾಯ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಶಿವರಾಮಪುರಂನಲ್ಲಿ ಮೈಲಾರ ಹಬ್ಬದ ಪ್ರಯುಕ್ತ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭೀಕರ ಅವಘಡ ಸಂಭವಿಸಿದೆ. ಪೊಲೀಸರ ಅನುಮತಿಯನ್ನ ಪಡೆಯದೆ ಸ್ಪರ್ಧೆ ಆಯೋಜನೆ ಮಾಡಿರುವ ಆರೋಪ ಕೇಳಿಬಂದಿದ್ದು, ಹೋರಿ ಹಿಡಿಯೋ ವೇಳೆ 10ಕ್ಕೂ ಹೆಚ್ಚು ಯುವಕರು ಗಾಯಗೊಂಡಿದ್ದಾರೆ.

ಹೊಸ ಸಂಸತ್ ಕಟ್ಟಡಕ್ಕೆ ಸಿದ್ಧತೆ! ಸುಮಾರು 90 ವರ್ಷಗಳಷ್ಟು ಇತಿಹಾಸವಿರುವ ಸಂಸತ್ ಭವನದ ಬದಲಾಗಿ ಮತ್ತೊಂದು ಪಾರ್ಲಿಮೆಂಟ್ ಬಿಲ್ಡಿಂಗ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕೆ ಆಕ್ಷೇಪಣೆ ಮತ್ತು ಸಲಹೆ ಸಲ್ಲಿಕೆಗೆ ಸುಮಾರು 30 ದಿನಗಳ ಕಾಲಾವಕಾಶವನ್ನೂ ನೀಡಲಾಗಿದ್ದು, ಈಗಿರುವ ಪಾರ್ಲಿಮೆಂಟ್ ಕಟ್ಟಡದ ಎದುರಲ್ಲೇ ನೂತನ ಕಟ್ಟಡ ತಲೆ ಎತ್ತಲಿದೆ.

Published On - 12:18 pm, Mon, 23 December 19