ಚಿತ್ತೂರಿನಲ್ಲಿ ಜಲ್ಲಿಕಟ್ಟು ಸಂಭ್ರಮ, 10ಕ್ಕೂ ಹೆಚ್ಚು ಯುವಕರಿಗೆ ಗಾಯ
ಹೈದರಾಬಾದ್: ವಿವಿಧ ಕಡೆಗಳಿಂದ ಬಂದಿರುವ ಕೊಬ್ಬು ತುಂಬಿದ ಹೋರಿಗಳು. ಸುತ್ತಲು ಸೇರಿರುವ ಜನ ಸಾಗರ.. ಜನರ ಮಧ್ಯೆ ಹುಚ್ಚೆದ್ದು ಓಡುತ್ತಿರುವ ಕಟ್ಟುಮಸ್ತಾದ ಎತ್ತುಗಳು. ಮತ್ತೇರಿದಂತೆ ಓಡುತ್ತಿರುವ ಹೋರಿಗಳನ್ನ ಹಿಡಿಯೋಕೆ ಎದ್ನೋ ಬಿದ್ನೋ ಅಂತ ಓಡುತ್ತಿರುವ ಯುವ ಪಡೆ. ಹೋರಿಗಳ ಓಟ ಕಂಡು ಕೇಕೆ, ಸಿಳ್ಳೇ ಹಾಕುತ್ತಿರುವ ಪ್ರೇಕ್ಷಕರು. ಆಂಧ್ರಪ್ರದೇಶದ ಚಿತ್ತೂರ ಜಿಲ್ಲೆಯ ಶಿವರಾಮಪುರಂನಲ್ಲಿ ಮೈಲಾರ ಹಬ್ಬದ ಪ್ರಯುಕ್ತ ನಡೆದ ಜಲ್ಲಿಕಟ್ಟು ಸ್ಪರ್ಧೆಯ ಝಲಕ್ ಇದು.ಈ ಸ್ಪರ್ಧೆಯಲ್ಲಿ ರಾಜ್ಯ ವಿವಿಧೆಡೆಗಳಿಂದ ಬಂದ ಕಟ್ಟುಮಸ್ತಾದ ಹೋರಿಗಳು ಭಾಗಿಯಾಗಿದ್ವು. ಅಖಾಡದಲ್ಲಿ ಹಲಗೆ […]
ಹೈದರಾಬಾದ್: ವಿವಿಧ ಕಡೆಗಳಿಂದ ಬಂದಿರುವ ಕೊಬ್ಬು ತುಂಬಿದ ಹೋರಿಗಳು. ಸುತ್ತಲು ಸೇರಿರುವ ಜನ ಸಾಗರ.. ಜನರ ಮಧ್ಯೆ ಹುಚ್ಚೆದ್ದು ಓಡುತ್ತಿರುವ ಕಟ್ಟುಮಸ್ತಾದ ಎತ್ತುಗಳು. ಮತ್ತೇರಿದಂತೆ ಓಡುತ್ತಿರುವ ಹೋರಿಗಳನ್ನ ಹಿಡಿಯೋಕೆ ಎದ್ನೋ ಬಿದ್ನೋ ಅಂತ ಓಡುತ್ತಿರುವ ಯುವ ಪಡೆ. ಹೋರಿಗಳ ಓಟ ಕಂಡು ಕೇಕೆ, ಸಿಳ್ಳೇ ಹಾಕುತ್ತಿರುವ ಪ್ರೇಕ್ಷಕರು.
ಆಂಧ್ರಪ್ರದೇಶದ ಚಿತ್ತೂರ ಜಿಲ್ಲೆಯ ಶಿವರಾಮಪುರಂನಲ್ಲಿ ಮೈಲಾರ ಹಬ್ಬದ ಪ್ರಯುಕ್ತ ನಡೆದ ಜಲ್ಲಿಕಟ್ಟು ಸ್ಪರ್ಧೆಯ ಝಲಕ್ ಇದು.ಈ ಸ್ಪರ್ಧೆಯಲ್ಲಿ ರಾಜ್ಯ ವಿವಿಧೆಡೆಗಳಿಂದ ಬಂದ ಕಟ್ಟುಮಸ್ತಾದ ಹೋರಿಗಳು ಭಾಗಿಯಾಗಿದ್ವು. ಅಖಾಡದಲ್ಲಿ ಹಲಗೆ ಬಾರಿಸುವ ಶಬ್ದಕ್ಕೆ ಹಾಗೂ ಜನರ ಕೂಗಾಟ ಕೇಕೆಗಳಿಗೆ ಹೆದರಿ ಹುಚ್ಚೆದ್ದು ಕಟ್ಟು ಮಸ್ತಾದ ಹೋರಿಗಳು ಓಡುತ್ತಿದ್ರೆ, ಅವುಗಳನ್ನು ಹಿಡಿಯಲು ಯುವಕರು ಹರಸಾಹಸ ಪಡುತ್ತಿದ್ರು.
ಈ ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚು ಬಹುಮಾನಗಳನ್ನು ಇಡಲಾಗಿತ್ತು. ಮೊದಲ ಬಹುಮಾನ 40 ಸಾವಿರ ನೀಡಲಾಯ್ತು. ಇನ್ನು ಹೋರಿಗಳನ್ನ ಹಿಡಿಯಲು ಹೋದ ಯುವಕರಿಗೆ ಹೋರಿಗಳು ಗುದಿದ್ದರಿಂದ 10ಕ್ಕೂ ಹೆಚ್ಚು ಯುವಕರು ಗಾಯಗೊಂಡ್ರು. ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯ್ತು.
ಒಟ್ನಲ್ಲಿ ಮೈಲಾರ ಹಬ್ಬದ ಹೆಸರಲ್ಲಿನ ಈ ಜಲ್ಲಿಕಟ್ಟು ಸ್ಪರ್ಧೆ ಏರ್ಪಡಿಸಲಾಗಿತ್ತು. ಆದ್ರೆ, ಇದಕ್ಕೆ ಪೊಲೀಸರ ಅನುಮತಿ ಇರಲಿಲ್ಲ ಎನ್ನಲಾಗಿದೆ. ಆದ್ರೆ ಭಾರಿ ಪ್ರಮಾಣದಲ್ಲಿ ಜನ ಸೇರದ್ದ ಜನ ಸ್ವರ್ಧೆ ನೋಡಿ ಸಖತ್ ಎಂಜಾಯ್ ಮಾಡಿದ್ರು.
Published On - 7:37 am, Mon, 23 December 19