AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದಲ್ಲಿ ಯಡಿಯೂರಪ್ಪ ಮೇಲೆ ಹಲ್ಲೆಗೆ ಭಾರಿ ಯತ್ನ, ಬಿಎಸ್​ವೈ ಸ್ವಲ್ಪದರಲ್ಲಿ ಬಚಾವ್

ತಿರುವನಂತಪುರಂ: ಕೇರಳ ಪ್ರವಾಸದಲ್ಲಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ 2ನೇ ಬಾರಿಗೆ ಪ್ರತಿಭಟನೆ ನಡೆಸಿದ್ದಾರೆ. ಬಿಎಸ್​ವೈ ಕಣ್ಣೂರಿನಲ್ಲಿ ದೇವಸ್ಥಾನಕ್ಕೆ ತೆರಳುವ ವೇಳೆ ಸಿಎಎ ಮತ್ತು ಮಂಗಳೂರಿನಲ್ಲಿ ಪೊಲೀಸರ ಫೈರಿಂಗ್​ ವಿರೋಧಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಬ್ಯಾಕ್​ ಗೋಬ್ಯಾಕ್​ ಎಂದು ಘೋಷಣೆ ಕೂಗಿ ಸಿಎಂ ಬಿಎಸ್​ವೈಗೆ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಕಣ್ಣೂರಿನಲ್ಲಿ ಕಾರು ಅಡ್ಡಗಟ್ಟಿ ಸಿಎಂ ಬಿಎಸ್​ವೈ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಸಿಪಿಐ(ಎಂ)ಯೂತ್​ ವಿಂಗ್​ನ ಗುಂಪಿನವರು ಈ ಕೃತ್ಯ ನಡೆಸಿದ್ದಾರೆ. ಕಾರು ಚಾಲಕನ ಚಾಣಾಕ್ಷತನದಿಂದ ಯಡಿಯೂರಪ್ಪ ಬಚಾವ್​ ಆಗಿದ್ದಾರೆ. ಇಲ್ಲವಾದಲ್ಲಿ […]

ಕೇರಳದಲ್ಲಿ ಯಡಿಯೂರಪ್ಪ ಮೇಲೆ ಹಲ್ಲೆಗೆ ಭಾರಿ ಯತ್ನ, ಬಿಎಸ್​ವೈ ಸ್ವಲ್ಪದರಲ್ಲಿ ಬಚಾವ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Dec 25, 2019 | 3:48 PM

Share

ತಿರುವನಂತಪುರಂ: ಕೇರಳ ಪ್ರವಾಸದಲ್ಲಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ 2ನೇ ಬಾರಿಗೆ ಪ್ರತಿಭಟನೆ ನಡೆಸಿದ್ದಾರೆ. ಬಿಎಸ್​ವೈ ಕಣ್ಣೂರಿನಲ್ಲಿ ದೇವಸ್ಥಾನಕ್ಕೆ ತೆರಳುವ ವೇಳೆ ಸಿಎಎ ಮತ್ತು ಮಂಗಳೂರಿನಲ್ಲಿ ಪೊಲೀಸರ ಫೈರಿಂಗ್​ ವಿರೋಧಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಬ್ಯಾಕ್​ ಗೋಬ್ಯಾಕ್​ ಎಂದು ಘೋಷಣೆ ಕೂಗಿ ಸಿಎಂ ಬಿಎಸ್​ವೈಗೆ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.

ಕಣ್ಣೂರಿನಲ್ಲಿ ಕಾರು ಅಡ್ಡಗಟ್ಟಿ ಸಿಎಂ ಬಿಎಸ್​ವೈ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಸಿಪಿಐ(ಎಂ)ಯೂತ್​ ವಿಂಗ್​ನ ಗುಂಪಿನವರು ಈ ಕೃತ್ಯ ನಡೆಸಿದ್ದಾರೆ. ಕಾರು ಚಾಲಕನ ಚಾಣಾಕ್ಷತನದಿಂದ ಯಡಿಯೂರಪ್ಪ ಬಚಾವ್​ ಆಗಿದ್ದಾರೆ. ಇಲ್ಲವಾದಲ್ಲಿ ಹೆಚ್ಚಿನ ರೀತಿಯಲ್ಲಿ ಅನಾಹುತ ಉಂಟಾಗುತ್ತಿತ್ತು. ಆದರೆ ಈವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟ್ವಿಟ್ಟರ್​ನಲ್ಲಿ ಕೇರಳ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದೇ ಮಂಗಳೂರಿಗೆ ಆಗಮಿಸಲಿರುವ ಬಿಎಸ್​ವೈ: ಕಣ್ಣೂರಿನಲ್ಲಿ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇರಳ ಪ್ರವಾಸ ಮೊಟಕುಗೊಳಿಸಿ ಇಂದೇ ಕಣ್ಣೂರಿನಿಂದ ಮಂಗಳೂರಿಗೆ ಸಿಎಂ ಬಿಎಸ್​ವೈ ವಾಪಸ್ ಬರಲಿದ್ದಾರೆ. ಪೂರ್ವನಿಗದಿತ ವೇಳಾಪಟ್ಟಿ ಪ್ರಕಾರ ನಾಳೆ ಮಂಗಳೂರಿಗೆ ಹಿಂದಿರುಗಬೇಕಿತ್ತು. ಆದ್ರೆ ಕೇರಳದಲ್ಲಿ ವ್ಯಾಪಕವಾದ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ರಾತ್ರಿಯೇ ಮಂಗಳೂರಿಗೆ ಹಿಂದಿರುಗಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.

Published On - 3:28 pm, Tue, 24 December 19

Follow Us
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಬೆಂಗಳೂರಿನಲ್ಲಿ ಬೆಳಗಿನಿಂದಲೇ ಜಿಟಿ ಜಿಟಿ ಮಳೆ
ಬೆಂಗಳೂರಿನಲ್ಲಿ ಬೆಳಗಿನಿಂದಲೇ ಜಿಟಿ ಜಿಟಿ ಮಳೆ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ