ಶ್ರೀರಾಮ ಮಂದಿರದ ಭೂಮಿ ಪೂಜೆಗಾಗಿ ತಯಾರಾಗುತ್ತಿವೆ ಲಕ್ಷಾಂತರ ಹಣತೆಗಳು

ಅಯ್ಯೋಧ್ಯಾ: ಆಗಸ್ಟ್‌ 5ರಂದು ನಡೆಯಲಿರುವ ಶ್ರೀರಾಮ ಮಂದಿರದ ಭೂಮಿ ಪೂಜೆಗೆ ಭಾರೀ ಸಿದ್ದತೆಗಳು ನಡೆದಿದ್ದು, ಅಂದು ಅಯ್ಯೋಧ್ಯೆಯನ್ನು ಝಗಮಗಿಸುವಂತೆ ಮಾಡಲು ಲಕ್ಷಾಂತರ ಹಣತೆಗಳನ್ನು ರಾಮಜನ್ಮಭೂಮಿಯಲ್ಲಿ ತಯಾರು ಮಾಡಲಾಗ್ತಿದೆ. ಹೌದು ಆಗಸ್ಟ್‌‌ ಐದರಂದು ಅಯ್ಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರೀರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕಾಗಿ ಅಯ್ಯೋಧ್ಯೆಯನ್ನು ಭಾರೀ ಸಜ್ಜುಗೊಳಿಸಲಾಗುತ್ತಿದೆ. ಶ್ರೀರಾಮ ಮಂದಿರ ಮತ್ತು ಸುತ್ತಮುತ್ತಲಿನ ಪರಿಸರ ಸೇರಿದಂತೆ ಇಡೀ ಅಯ್ಯೋಧ್ಯೆಯನ್ನೇ ಶೃಂಗರಿಸಲಾಗುತ್ತಿದೆ. ಅದ್ರಲ್ಲೂ ವಿಶೇಷವಾಗಿ ಲಕ್ಷಾಂತರ ದೀಪಗಳಿಂದ ಅಲಂಕೃತಗೊಳಿಸಲಾಗುತ್ತಿದ್ದು ಅದಕ್ಕಾಗಿ ಮಣ್ಣಿನಲ್ಲಿ ತಯಾರಿಸಿದ […]

ಶ್ರೀರಾಮ ಮಂದಿರದ ಭೂಮಿ ಪೂಜೆಗಾಗಿ ತಯಾರಾಗುತ್ತಿವೆ ಲಕ್ಷಾಂತರ ಹಣತೆಗಳು

Updated on: Aug 01, 2020 | 7:20 PM

ಅಯ್ಯೋಧ್ಯಾ: ಆಗಸ್ಟ್‌ 5ರಂದು ನಡೆಯಲಿರುವ ಶ್ರೀರಾಮ ಮಂದಿರದ ಭೂಮಿ ಪೂಜೆಗೆ ಭಾರೀ ಸಿದ್ದತೆಗಳು ನಡೆದಿದ್ದು, ಅಂದು ಅಯ್ಯೋಧ್ಯೆಯನ್ನು ಝಗಮಗಿಸುವಂತೆ ಮಾಡಲು ಲಕ್ಷಾಂತರ ಹಣತೆಗಳನ್ನು ರಾಮಜನ್ಮಭೂಮಿಯಲ್ಲಿ ತಯಾರು ಮಾಡಲಾಗ್ತಿದೆ.

ಹೌದು ಆಗಸ್ಟ್‌‌ ಐದರಂದು ಅಯ್ಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರೀರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕಾಗಿ ಅಯ್ಯೋಧ್ಯೆಯನ್ನು ಭಾರೀ ಸಜ್ಜುಗೊಳಿಸಲಾಗುತ್ತಿದೆ. ಶ್ರೀರಾಮ ಮಂದಿರ ಮತ್ತು ಸುತ್ತಮುತ್ತಲಿನ ಪರಿಸರ ಸೇರಿದಂತೆ ಇಡೀ ಅಯ್ಯೋಧ್ಯೆಯನ್ನೇ ಶೃಂಗರಿಸಲಾಗುತ್ತಿದೆ.

ಅದ್ರಲ್ಲೂ ವಿಶೇಷವಾಗಿ ಲಕ್ಷಾಂತರ ದೀಪಗಳಿಂದ ಅಲಂಕೃತಗೊಳಿಸಲಾಗುತ್ತಿದ್ದು ಅದಕ್ಕಾಗಿ ಮಣ್ಣಿನಲ್ಲಿ ತಯಾರಿಸಿದ ಹಣತೆಗಳನ್ನು ಉಪಯೋಗಿಸಲಾಗುತ್ತಿದೆ. ಇದಕ್ಕಾಗಿಯೇ ವಿಶೇಷವಾಗಿ 40ಕ್ಕೂ ಹೆಚ್ಚು ಕುಟುಂಬಗಳು ಹಣತೆಯ ತಯಾರಿಯಲ್ಲಿ ತೊಡಗಿವೆ. ಈ ಎಲ್ಲ ದೀಪಗಳನ್ನು ಆಗಸ್ಟ್‌‌ ಐದರಂದು ಭವ್ಯ ಕಾರ್ಯಕ್ರಮಕ್ಕಾಗಿ ಉಪಯೋಗಿಸಲಾಗುವುದು.

Published On - 7:09 pm, Sat, 1 August 20