Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೃದ್ಧಾಶ್ರಮದ ಮೇಲೆ ದಾಳಿ ಮಾಡಿದ ಸಚಿವ, ಮಹಿಳಾ ಆಯೋಗದ ಅಧ್ಯಕ್ಷೆಗೆ ಶಾಕ್​!

ದೆಹಲಿ: ನಿನ್ನೆ ರಾತ್ರಿ ಖಚಿತ ಮಾಹಿತಿ ಮೇರೆಗೆ ದೆಹಲಿಯ ನಾಂಗ್ಲೋಯಿನ ವೃದ್ಧಾಶ್ರಮವೊಂದರ ಮೇಲೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್​ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ರಾಜ್ರೇಂದ್ರ ಗೌತಮ್​ಗೆ ದಾಳಿ ಮಾಡಿದರು. ಈ ವೇಳೆ 19 ಹಿರಿಯ ವಿಶೇಷಚೇತನ ವೃದ್ಧರು ವಾಸಿಸುತ್ತಿದ್ದ ದಾರುಣ ಸ್ಥಿತಿಯನ್ನ ಕಂಡು ಒಂದು ಕ್ಷಣ ದಂಗಾಗಿ ಬಿಟ್ಟರು. ಸಾಮಾಜಿಕ ಅಂತರವಿರಬೇಕಾದ ಇಂದಿನ ಪರಿಸ್ಥಿತಿಯಲ್ಲಿ ವೃದ್ಧರನ್ನ ಸರಿಯಾದ ಗಾಳಿ ಬೆಳಕಿಲ್ಲದ ಸಣ್ಣ ಕೋಣೆಯೊಂದರಲ್ಲಿ ಕೂಡಿಹಾಕಲಾಗಿತ್ತು. ಸರ್ಕಾರೇತರ ಸಂಸ್ಥೆಯೊಂದು ನಿರ್ವಹಿಸುತ್ತಿದ್ದ ಈ […]

ವೃದ್ಧಾಶ್ರಮದ ಮೇಲೆ ದಾಳಿ ಮಾಡಿದ ಸಚಿವ, ಮಹಿಳಾ ಆಯೋಗದ ಅಧ್ಯಕ್ಷೆಗೆ ಶಾಕ್​!
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Aug 01, 2020 | 5:21 PM

ದೆಹಲಿ: ನಿನ್ನೆ ರಾತ್ರಿ ಖಚಿತ ಮಾಹಿತಿ ಮೇರೆಗೆ ದೆಹಲಿಯ ನಾಂಗ್ಲೋಯಿನ ವೃದ್ಧಾಶ್ರಮವೊಂದರ ಮೇಲೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್​ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ರಾಜ್ರೇಂದ್ರ ಗೌತಮ್​ಗೆ ದಾಳಿ ಮಾಡಿದರು. ಈ ವೇಳೆ 19 ಹಿರಿಯ ವಿಶೇಷಚೇತನ ವೃದ್ಧರು ವಾಸಿಸುತ್ತಿದ್ದ ದಾರುಣ ಸ್ಥಿತಿಯನ್ನ ಕಂಡು ಒಂದು ಕ್ಷಣ ದಂಗಾಗಿ ಬಿಟ್ಟರು.

ಸಾಮಾಜಿಕ ಅಂತರವಿರಬೇಕಾದ ಇಂದಿನ ಪರಿಸ್ಥಿತಿಯಲ್ಲಿ ವೃದ್ಧರನ್ನ ಸರಿಯಾದ ಗಾಳಿ ಬೆಳಕಿಲ್ಲದ ಸಣ್ಣ ಕೋಣೆಯೊಂದರಲ್ಲಿ ಕೂಡಿಹಾಕಲಾಗಿತ್ತು. ಸರ್ಕಾರೇತರ ಸಂಸ್ಥೆಯೊಂದು ನಿರ್ವಹಿಸುತ್ತಿದ್ದ ಈ ವೃದ್ಧಾಶ್ರಮದ ನಿವಾಸಿಗಳಿಗೆ ಸರಿಯಾದ ಊಟ ಹಾಗೂ ಶೌಚಾಲಯದ ವ್ಯವಸ್ಥೆ ಸಹ ಇರಲಿಲ್ಲವಂತೆ.

ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೋಣೆಗಳಿಲ್ಲದೆ ಶೌಚಾಲಯದ ದುರ್ವಾಸನೆ ತುಂಬಿಕೊಂಡಿದ್ದ ಒಂದೇ ಕೋಣೆಯಲ್ಲಿ ವಾಸವಿರಬೇಕಿತ್ತು. ಕೆಲವೊಮ್ಮೆ ದುರ್ನಾಥ ತಡೆಯೋಕಾಗದೆ ವಿಶೇಷಚೇತನ ವೃದ್ಧರು ತಾವೇ ಪ್ರಯಾಸಪಟ್ಟು ಶೌಚಾಲಯ ಮತ್ತು ಹೊಲಸು ಮಾಡಿಕೊಂಡ ಇತರರ ಹಾಸಿಗೆಯನ್ನ ಶುಚಿಗೊಳಿಸುತ್ತಿದ್ದರಂತೆ.

ದಿನದಲ್ಲಿ ನಾಲ್ಕೈದು ಗಂಟೆ ಕರೆಂಟ್​ ಕಟ್​ ಇಷ್ಟೇ ಅಲ್ಲ, ಸಂಸ್ಥೆಯು ವಿದ್ಯುತ್​ ಬಿಲ್ ಉಳಿಸಲು ದಿನದಲ್ಲಿ ನಾಲ್ಕೈದು ಗಂಟೆಗಳ ಕರೆಂಟ್​ ಸಹ ಆಫ್​ ಮಾಡುತ್ತಿದ್ದರಂತೆ. ವೃದ್ಧರಿಗೆ ಫ್ಯಾನ್ ಏಕೆ ಎಂದ ನೆಪವೊಡ್ಡಿ ಅದೂ ಸಹ ಕಸಿದುಕೊಂಡಿದ್ದರು. ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಹಿರಿಯರಿಗೆ ಅನ್ನ ಮತ್ತು ಸಾರು ಮಾತ್ರ ನೀಡುತ್ತಿದ್ದರಂತೆ. ಇದನ್ನು ಪ್ರಶ್ನಿಸಿದ್ದಕ್ಕೆ ಸಂಸ್ಥೆಯ ಸಿಬ್ಬಂದಿ ಕೆಲ ಹಿರಿಯರಿಗೆ ಥಳಿಸಿಯೂ ಇದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಗೌತಮ್ ತನಿಖೆ ನಡೆಸಲು ಸೂಚಿಸಿದ್ದಾರೆ. ಜೊತೆಗೆ, ವೃದ್ಧಾಶ್ರಮ ನಡೆಸುತ್ತಿದ್ದ ಮಾಲೀಕ ಮತ್ತು ಸರ್ಕಾರೇತರ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಜರುಗಿಸಲು ಅಧ್ಯಕ್ಷೆ ಸ್ವಾತಿ ಮಲಿವಾಲ್​ ಆಗ್ರಹಿಸಿದ್ದಾರೆ.

Published On - 5:19 pm, Sat, 1 August 20

ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ