AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶಾಖಪಟ್ಟಣಂನ ಶಿಪ್ ಯಾರ್ಡ್​ನಲ್ಲಿ ಘೋರ ದುರಂತ, 11 ಮಂದಿ ಸಾವು!

ಹೈದರಾಬಾದ್: ವಿಶಾಖಪಟ್ಟಣಂ ಅಂದ್ರೆ ಸಾಕು ದುರಂತಗಳ ಸರಮಾಲೆಯೇ ಕಣ್ಮುಂದೆ ಬರುತ್ತೆ. ಅನಿಲ ಸೋರಿಕೆ , ಫ್ಯಾಕ್ಟರಿಗಳಲ್ಲಿ ಸ್ಫೋಟದ ಬಳಿಕ ಇದೀಗ ಕ್ರೇನ್ ದುರಂತವೊಂದು ನಡೆದಿದೆ. ಇದ್ರಲ್ಲಿ ಬರೋಬ್ಬರಿ 11 ಮಂದಿ ಕಾರ್ಮಿಕರು ನೋಡನೋಡತ್ತಲೇ ಎಲ್ಲರ ಮುಂದೆ ಪ್ರಾಣ ಬಿಟ್ಟಿದ್ದಾರೆ. ಎಲ್ಲರೂ ತಮ್ಮ ಪಾಡಿಗೆ ತಾವ್ ಕೆಲ್ಸ ಮಾಡ್ತಿದ್ರು… ಟ್ರಯಲ್ ರನ್ ಸರ್ಕಸ್ ನಡೆಸ್ತಿದ್ರು.. ದೊಡ್ಡ ಯಂತ್ರದೊಂದಿಗೆ ಹೆಣಗಾಡ್ತಿದ್ರು. ಜಸ್ಟ್ ಕಣ್ಮುಚ್ಚಿ ಕಣ್ ಬಿಡೋದ್ರೊಳಗೆ ಯಾರು ಊಹೆ ಮಾಡೋಕೆ ಆಗದಿರೋ ದುರಂತವೊಂದು ನಡೆದೇ ಹೋಯ್ತು. ಟ್ರಯಲ್ ರನ್ ವೇಳೆ […]

ವಿಶಾಖಪಟ್ಟಣಂನ ಶಿಪ್ ಯಾರ್ಡ್​ನಲ್ಲಿ ಘೋರ ದುರಂತ, 11 ಮಂದಿ ಸಾವು!
ಆಯೇಷಾ ಬಾನು
|

Updated on: Aug 02, 2020 | 7:12 AM

Share

ಹೈದರಾಬಾದ್: ವಿಶಾಖಪಟ್ಟಣಂ ಅಂದ್ರೆ ಸಾಕು ದುರಂತಗಳ ಸರಮಾಲೆಯೇ ಕಣ್ಮುಂದೆ ಬರುತ್ತೆ. ಅನಿಲ ಸೋರಿಕೆ , ಫ್ಯಾಕ್ಟರಿಗಳಲ್ಲಿ ಸ್ಫೋಟದ ಬಳಿಕ ಇದೀಗ ಕ್ರೇನ್ ದುರಂತವೊಂದು ನಡೆದಿದೆ. ಇದ್ರಲ್ಲಿ ಬರೋಬ್ಬರಿ 11 ಮಂದಿ ಕಾರ್ಮಿಕರು ನೋಡನೋಡತ್ತಲೇ ಎಲ್ಲರ ಮುಂದೆ ಪ್ರಾಣ ಬಿಟ್ಟಿದ್ದಾರೆ.

ಎಲ್ಲರೂ ತಮ್ಮ ಪಾಡಿಗೆ ತಾವ್ ಕೆಲ್ಸ ಮಾಡ್ತಿದ್ರು… ಟ್ರಯಲ್ ರನ್ ಸರ್ಕಸ್ ನಡೆಸ್ತಿದ್ರು.. ದೊಡ್ಡ ಯಂತ್ರದೊಂದಿಗೆ ಹೆಣಗಾಡ್ತಿದ್ರು. ಜಸ್ಟ್ ಕಣ್ಮುಚ್ಚಿ ಕಣ್ ಬಿಡೋದ್ರೊಳಗೆ ಯಾರು ಊಹೆ ಮಾಡೋಕೆ ಆಗದಿರೋ ದುರಂತವೊಂದು ನಡೆದೇ ಹೋಯ್ತು.

ಟ್ರಯಲ್ ರನ್ ವೇಳೆ ಕ್ರೇನ್ ಉರುಳಿ ಬಿದ್ದು 11 ಮಂದಿ ಸಾವು! ಹೌದು, ಈ ದೃಶ್ಯ ನೋಡಿದ್ರೆ ಎದೆ ಝಲ್ ಎನ್ನುತ್ತೆ. ಜೀವ ಬಾಯಿಗೆ ಬಂದಂಗೆ ಆಗುತ್ತೆ. ಎಂಥವರನ್ನೂ ಬೆಚ್ಚಿಬೀಳಿಸುತ್ತೆ. ಆದ್ರೆ ಕ್ಷಣಾರ್ಧದಲ್ಲಿ ಶಿಫ್ ಯಾರ್ಡ್​ನಲ್ಲಿ ರಕ್ತದ ಕೋಡಿಯೇ ಹರಿಯಿತು. ಕೆಲ್ಸ ಮಾಡ್ತಿದ್ದ ಕಾರ್ಮಿಕರ ಉಸಿರು ಚೆಲ್ಲಿ ಬಿದ್ದಿದ್ರು.

ಅಂದ್ಹಾಗೇ, ಈ ದುರಂತ ನಡೆದಿದ್ದು, ಆಂಧ್ರಪ್ರದೇಶದ ವಿಶಾಖಪಟ್ಟಣಂನ ಹಿಂದೂಸ್ತಾನ ಶಿಪ್ ಯಾರ್ಡ್​ನಲ್ಲಿ. ನಿನ್ನೆ 40ಕ್ಕೂ ಹೆಚ್ಚು ಕಾರ್ಮಿಕರು ಕ್ರೇನ್​ನ ಟ್ರಯಲ್ ರನ್ ನಡೆಸ್ತಿದ್ರು. ಈ ವೇಳೆ ಕ್ರೇನ್ ಏಕಾಏಕಿ ಕಾರ್ಮಿಕರ ಮೇಲೆಯೇ ಉರುಳಿ ಬಿದ್ದಿದೆ. ಇದ್ರಿಂದ 11 ಮಂದಿ ಕಾರ್ಮಿಕರು ಸ್ಥಳದಲ್ಲೇ ಜೀವ ಬಿಟ್ಟು ಸಾವಿನ ಮನೆ ಸೇರಿದ್ರು. ಇನ್ನು ವಿಷ್ಯ ತಿಳಿದ ಕೂಡಲೇ ಡಿಸಿ, ಪೊಲೀಸ್ ಅಧಿಕಾರಿಗಳು, ಸಚಿವರು, ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಘಟನೆ ಬಗ್ಗೆ ಮಲ್ಕಾಪುರಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇನ್ನು ಶಿಪ್ ಯಾರ್ಡ್ ಡೈರೆಕ್ಟರ್ ನೇತೃತ್ವದಲ್ಲಿ ಒಂದು ಹಾಗೂ ಆಂಧ್ರ ಯೂನಿವರ್ಸಿಟಿ ಇಂಜಿನಿಯರಿಂಗ್ ವಿಭಾಗದ ನೇತೃತ್ವದಲ್ಲೊಂದು ಕಮಿಟಿ ರಚನೆ ಮಾಡಲಾಗಿದೆ. ಒಂದು ವಾರದೊಳಗೆ ಕಮಿಟಿ ವರದಿ ಒಪ್ಪಿಸಲಿದೆ.

ಒಟ್ನಲ್ಲಿ ಮೇಲ್ನೋಟಕ್ಕೆ ಸೂಕ್ತ ಮುಂಜಾಗ್ರತೆ ಇಲ್ಲದಿರೋದೇ ಘಟನೆಗೆ ಕಾರಣ ಎನ್ನಲಾಗ್ತಿದೆ. ಆದ್ರೆ ತನಿಖೆಯ ಬಳಿಕವಷ್ಟೇ ಅಸಲಿ ಕಾರಣ ಬೆಳಕಿಗೆ ಬರಲಿದೆ.