ಒಂದೇ ಆಸ್ಪತ್ರೆಯಿಂದ 10 ಕೊರೊನಾ ಸೋಂಕಿತರು ಪರಾರಿ! ಎಲ್ಲಿ?
ಹೈದರಾಬಾದ್: ಕೊರೊನಾ ಸೋಂಕು ಜನರನ್ನ ಹೆದರಿಸಿ ಹಿಪ್ಪೆ ಮಾಡಿದೆ. ಇದರ ಜೊತೆಗೆಯೇ ಇನ್ನೊಂದಷ್ಟು ಜನ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯಲೂ ಸಹ ಹೆದರುತ್ತಿದ್ದಾರೆ. ಆಸ್ಪತ್ರೆಗಳಿಂದ ಪರಾರಿಯಾಗುತ್ತಿದ್ದಾರೆ. 10 ಕೊರೊನಾ ಸೋಂಕಿತರು ಪರಾರಿಯಾಗಿರುವ ಘಟನೆ ತೆಲಂಗಾಣದ ಅದಿಲಾಬಾದ್ನ ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ರಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 10 ಸೋಂಕಿತರು ಆಸ್ಪತ್ರೆ ಸಿಬ್ಬಂದಿಯನ್ನು ಯಾಮಾರಿಸಿ ಎಸ್ಕೇಪ್ ಆಗಿದ್ದಾರೆ. 10 ಸೋಂಕಿತರ ಪೈಕಿ ಅಧಿಕಾರಿಗಳು ಮೂವರನ್ನು ಗುರುತಿಸಿದ್ದು, ಇಬ್ಬರನ್ನು ವಶಕ್ಕೆ ಪಡೆದು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಓರ್ವನನ್ನು […]
ಹೈದರಾಬಾದ್: ಕೊರೊನಾ ಸೋಂಕು ಜನರನ್ನ ಹೆದರಿಸಿ ಹಿಪ್ಪೆ ಮಾಡಿದೆ. ಇದರ ಜೊತೆಗೆಯೇ ಇನ್ನೊಂದಷ್ಟು ಜನ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯಲೂ ಸಹ ಹೆದರುತ್ತಿದ್ದಾರೆ. ಆಸ್ಪತ್ರೆಗಳಿಂದ ಪರಾರಿಯಾಗುತ್ತಿದ್ದಾರೆ.
10 ಕೊರೊನಾ ಸೋಂಕಿತರು ಪರಾರಿಯಾಗಿರುವ ಘಟನೆ ತೆಲಂಗಾಣದ ಅದಿಲಾಬಾದ್ನ ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ರಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 10 ಸೋಂಕಿತರು ಆಸ್ಪತ್ರೆ ಸಿಬ್ಬಂದಿಯನ್ನು ಯಾಮಾರಿಸಿ ಎಸ್ಕೇಪ್ ಆಗಿದ್ದಾರೆ.
10 ಸೋಂಕಿತರ ಪೈಕಿ ಅಧಿಕಾರಿಗಳು ಮೂವರನ್ನು ಗುರುತಿಸಿದ್ದು, ಇಬ್ಬರನ್ನು ವಶಕ್ಕೆ ಪಡೆದು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಓರ್ವನನ್ನು ಇಂದ್ರಪಲ್ಲಿಯಲ್ಲಿ ಹೋಮ್ ಐಸೋಲೇಷನ್ ಮಾಡಲಾಗಿದೆ. ಹಾಗೂ ಪರಾರಿಯಾದ ಇನ್ನುಳಿದ 7ಸೋಂಕಿತ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.