ಕೊರೊನಾ ಹೆಮ್ಮಾರಿಗೆ ಉತ್ತರ ಪ್ರದೇಶದ ಸಚಿವೆ ಕಮಲಾ ರಾಣಿ ಬಲಿ
ಲಖನೌ: ಉತ್ತರ ಪ್ರದೇಶದ ಕ್ಯಾಬಿನೇಟ್ ದರ್ಜೆ ಸಚಿವೆ ಶ್ರೀಮತಿ ಕಮಲಾ ರಾಣಿ ಕೋವಿಡ್ ನಿಂದಾಗಿ ಕೊನೆಯುಸಿರೆಳೆದಿದ್ದಾರೆ. ಕಮಲಾ ರಾಣಿ ಜುಲೈ 18ರಂದು ಲಖನೌದ ರಾಜಧಾನಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ. ಕಮಲಾರಾಣಿ ಕಾನ್ಪುರ್‌ದ ಘಟಂಪುರ ವಿಧಾನ ಸಭಾ ಕ್ಷೇತ್ರದಿಂದ ಉತ್ತರ ಪ್ರದೇಶ ವಿಧಾನ ಸಭೆಗೆ ಆಯ್ಕೆಯಾಗಿದ್ದರು. ನಂತರ ಸಿಎಂ ಯೋಗಿ ಆದಿತ್ಯನಾಥ್ ಅವರ ಸಚಿವ ಸಂಪುಟದಲ್ಲಿ ತಾಂತ್ರಿಕ ಶಿಕ್ಷಣ ಸಚಿವೆಯಾಗಿದ್ದರು. ಸಚಿವೆಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಯ್ಯೋಧ್ಯೆ ಭೇಟಿಯನ್ನ […]
ಲಖನೌ: ಉತ್ತರ ಪ್ರದೇಶದ ಕ್ಯಾಬಿನೇಟ್ ದರ್ಜೆ ಸಚಿವೆ ಶ್ರೀಮತಿ ಕಮಲಾ ರಾಣಿ ಕೋವಿಡ್ ನಿಂದಾಗಿ ಕೊನೆಯುಸಿರೆಳೆದಿದ್ದಾರೆ.
ಕಮಲಾ ರಾಣಿ ಜುಲೈ 18ರಂದು ಲಖನೌದ ರಾಜಧಾನಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ. ಕಮಲಾರಾಣಿ ಕಾನ್ಪುರ್‌ದ ಘಟಂಪುರ ವಿಧಾನ ಸಭಾ ಕ್ಷೇತ್ರದಿಂದ ಉತ್ತರ ಪ್ರದೇಶ ವಿಧಾನ ಸಭೆಗೆ ಆಯ್ಕೆಯಾಗಿದ್ದರು. ನಂತರ ಸಿಎಂ ಯೋಗಿ ಆದಿತ್ಯನಾಥ್ ಅವರ ಸಚಿವ ಸಂಪುಟದಲ್ಲಿ ತಾಂತ್ರಿಕ ಶಿಕ್ಷಣ ಸಚಿವೆಯಾಗಿದ್ದರು.
ಸಚಿವೆಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಯ್ಯೋಧ್ಯೆ ಭೇಟಿಯನ್ನ ರದ್ದು ಪಡಿಸಿರುವ ಸಿಎಂ ಯೋಗಿ ಆದಿತ್ಯನಾಥ್ , ಕಮಲಾರಾಣಿ ಒಬ್ಬ ದಕ್ಷ ಸಚಿವೆಯಾಗಿದ್ದರು, ಅವರ ನಿಧನದಿಂದ ಒಬ್ಬ ಅತ್ಯುತ್ತಮ ಸಮಾಜ ಸೇವಕಿಯನ್ನ ಕಳೆದುಕೊಂಡಂತಾಗಿದೆ ಎಂದು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
I express my deepest condolences to the family of Cabinet Minister Kamala Rani Varun. She was #COVID19 positive & was receiving treatment at SGPGI Hospital. She was a popular public leader & a social worker. She worked efficiently while being the part of the Cabinet:CM Adityanath pic.twitter.com/s4n5mnVRXq
— ANI UP (@ANINewsUP) August 2, 2020
Published On - 1:37 pm, Sun, 2 August 20