AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ನಾಯಕ ಅಮರ್ ಸಿಂಗ್ ವಿಧಿವಶ, ಅವರ ಕುರಿತಾದ ಒಂದು ವರದಿ ಇಲ್ಲಿದೆ..

ದೆಹಲಿ: ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ನಿನ್ನೆ ವಿಧಿವಶರಾಗಿದ್ದಾರೆ. ಹಲವು ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ರಾಜ್ಯಸಭಾ ಸದಸ್ಯ ಅಮರ್‌ ಸಿಂಗ್‌, ದೀರ್ಘ ಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹಾಗಾದರೆ ಹೇಗಿತ್ತು ಅಮರ್ ಸಿಂಗ್ ಸ್ನೇಹ ಹಾಗೂ ರಾಜಕೀಯ ಜೀವನ? ಈ ಕುರತಾದ ಒಂದು ವರದಿ ಇಲ್ಲಿದೆ. ರಾಷ್ಟ್ರ ರಾಜಕಾರಣದಲ್ಲಿ ಅಮರ್ ಸಿಂಗ್ ಚಿರಪರಿಚಿತ ಹೆಸರು. ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಮುಲಾಯಂ ಸಿಂಗ್ ಯಾದವ್ ಹಾಗೂ ಹೆಚ್​ಡಿಡಿ ನಡುವೆ ಸಂವಹನದ ಕೊಂಡಿಯಾಗಿದ್ದ ಅಮರ್ ಸಿಂಗ್, ಕ್ಯಾತಿ ಪಡೆದಷ್ಟೇ ಬೇಗ […]

ಮಾಜಿ ನಾಯಕ ಅಮರ್ ಸಿಂಗ್ ವಿಧಿವಶ, ಅವರ ಕುರಿತಾದ ಒಂದು ವರದಿ ಇಲ್ಲಿದೆ..
Follow us
ಆಯೇಷಾ ಬಾನು
|

Updated on: Aug 02, 2020 | 8:27 AM

ದೆಹಲಿ: ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ನಿನ್ನೆ ವಿಧಿವಶರಾಗಿದ್ದಾರೆ. ಹಲವು ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ರಾಜ್ಯಸಭಾ ಸದಸ್ಯ ಅಮರ್‌ ಸಿಂಗ್‌, ದೀರ್ಘ ಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹಾಗಾದರೆ ಹೇಗಿತ್ತು ಅಮರ್ ಸಿಂಗ್ ಸ್ನೇಹ ಹಾಗೂ ರಾಜಕೀಯ ಜೀವನ? ಈ ಕುರತಾದ ಒಂದು ವರದಿ ಇಲ್ಲಿದೆ.

ರಾಷ್ಟ್ರ ರಾಜಕಾರಣದಲ್ಲಿ ಅಮರ್ ಸಿಂಗ್ ಚಿರಪರಿಚಿತ ಹೆಸರು. ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಮುಲಾಯಂ ಸಿಂಗ್ ಯಾದವ್ ಹಾಗೂ ಹೆಚ್​ಡಿಡಿ ನಡುವೆ ಸಂವಹನದ ಕೊಂಡಿಯಾಗಿದ್ದ ಅಮರ್ ಸಿಂಗ್, ಕ್ಯಾತಿ ಪಡೆದಷ್ಟೇ ಬೇಗ ಹಲವು ವಿವಾದಗಳಿಗೂ ಗುರಿಯಾಗಿದ್ದರು. ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ, ವಕ್ತಾರ ಸೇರಿದಂತೆ ಪ್ರಮುಖ ಹುದ್ದೆಗಳನ್ನೆಲ್ಲ ಯಶಸ್ವಿಯಾಗಿ ನಿಭಾಯಿಸಿದ್ದ ಅಮರ್ ಸ್ವಂತ ಪಕ್ಷ ಕಟ್ಟಿ ವಿಫಲರಾಗಿದ್ದೂ ನಿಜ. ಹೀಗೆ ರಾಷ್ಟ್ರರಾಜಕಾರಣದಲ್ಲಿ ಛಾಪು ಮೂಡಿಸಿದ್ದ ಅಮರ್ ಸಿಂಗ್ ದೀರ್ಘ ಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಎರಡೂ ಕಿಡ್ನಿ ಕಸಿ ಮಾಡಿಸಿದ್ದ ಅಮರ್ ಸಿಂಗ್ V-2: ಅಂದಹಾಗೆ ಹಲವಾರು ವರ್ಷಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅಮರ್‌ ಸಿಂಗ್‌, ಎರಡೂ ಕಿಡ್ನಿಗಳ ಕಸಿ ಮಾಡಿಸಿಕೊಂಡಿದ್ದರು. ಆದರೆ ಇದರಿಂದಾಗಿ ತೀವ್ರ ಅಸ್ವಸ್ಥಗೊಂಡಿದ್ದರು. 7 ತಿಂಗಳಿಂದ ಸಿಂಗಾಪುರದ ಮೌಂಟ್‌ ಎಲಿಜಬೆತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಮರ್ ಸಿಂಗ್, ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.

‘ವೋಟಿಗಾಗಿ ನೋಟು’ ಕೊಟ್ಟಿತ್ತು ಪೆಟ್ಟು! ಮುಲಾಯಂ ಸಿಂಗ್​ರ ಬಲಗೈ ಬಂಟ ಎಂದೇ ಗುರುತಿಸಿಕೊಂಡಿದ್ದ ಅಮರ್ ಸಿಂಗ್, ಅಮಿತಾಬ್ ಬಚ್ಚನ್​ರ ಕುಟುಂಬಕ್ಕೂ ಅತ್ಯಾಪ್ತರಾಗಿದ್ದರು. ಆದರೆ 2019ರ ಜುಲೈನಲ್ಲಿ ವಿವಾದಾತ್ಮಕವಾಗಿ ಟ್ವಿಟ್ ವಿಡಿಯೊ ಹಂಚಿಕೊಂಡಿದ್ದ ಅವರು, ಜಯಾ ಬಚ್ಚನ್ ಅವರನ್ನು ತೆಗಳಿದ್ದರು. ಅಲ್ಲದೆ ಅಮಿತಾಬ್‌ ಮತ್ತು ಐಶ್ವರ್ಯಾ ರೈ ಬಚ್ಚನ್‌ ಸಿನಿಮಾಗಳಲ್ಲಿ ಅಸಭ್ಯ ಪಾತ್ರ ಮಾಡಿದ್ದಾರೆ ಎಂದಿದ್ದರು. ಬಳಿಕ ಕ್ಷಮೆ ಕೋರಿದ್ದರು. ಹೀಗೆ ಬಿಗ್ ಬಿ ಕುಟುಂಬದ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರೂ ವಿವಾದ ತಲೆ ಮೇಲೆ ಎಳೆದುಕೊಂಡಿದ್ದರು ಅಮರ್ ಸಿಂಗ್. ಅಲ್ಲದೆ ಯುಪಿಎ ಸರ್ಕಾರದ ಅವಧಿಯಲ್ಲಿ ಸರ್ಕಾರ ಉಳಿಸಲು ಹೋಗಿ, ವೋಟಿಗಾಗಿ ನೋಟು ಆರೋಪ ಹೊತ್ತಿದ್ದರು. ಇದು ಅಮರ್ ಸಿಂಗ್​ರ ರಾಜಕೀಯ ಬದುಕಿಗೆ ದೊಡ್ಡ ಕಪ್ಪುಚುಕ್ಕೆಯಾಗಿ ಉಳಿದಿತ್ತು.

ಒಟ್ನಲ್ಲಿ ಕ್ಯಾತರಾದಷ್ಟೇ ಹಲವು ವಿವಾದ ಮಾಡಿಕೊಂಡಿದ್ದ ಅಮರ್ ಸಿಂಗ್ ಎಲ್ಲರನ್ನೂ ತ್ಯಜಿಸಿ ಬರುದೂರಕ್ಕೆ ಸಾಗಿದ್ದಾರೆ. ಅಮರ್ ಸಿಂಗ್ ಅವರ ಅಗಲಿಕೆಗೆ ರಾಷ್ಟ್ರದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದಾರೆ.

ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ