Earthquake: ಅರುಣಾಚಲ ಪ್ರದೇಶದಲ್ಲಿ ಮತ್ತೆ ಕಂಪಿಸಿದ ಭೂಮಿ; 4.1 ತೀವ್ರತೆ ದಾಖಲು

| Updated By: Lakshmi Hegde

Updated on: Oct 02, 2021 | 11:49 AM

Arunachal Pradesh: ಸೆಪ್ಟೆಂಬರ್​ 19ರಂದು ಅರುಣಾಚಲ ಪ್ರದೇಶದ ಚಾಂಗ್ಲಾಂಗ್​ ಪ್ರದೇಶದಲ್ಲಿ 4.4 ತೀವ್ರತೆಯಲ್ಲಿ ಭೂಕಂಪನವಾಗಿತ್ತು.

Earthquake: ಅರುಣಾಚಲ ಪ್ರದೇಶದಲ್ಲಿ ಮತ್ತೆ ಕಂಪಿಸಿದ ಭೂಮಿ; 4.1 ತೀವ್ರತೆ ದಾಖಲು
ಸಾಂಕೇತಿಕ ಚಿತ್ರ
Follow us on

ಇಟಾನಗರ್: ಅರುಣಾಚಲ ಪ್ರದೇಶದ ಬಸಾರ್​ನಲ್ಲಿ ಇಂದು ಬೆಳಗ್ಗೆ 10.15ರ ಹೊತ್ತಿಗೆ ಭೂಮಿ ಕಂಪಿಸಿದೆ. ಭೂಕಂಪದ (Earthquake) ತೀವ್ರತೆ ರಿಕ್ಟರ್ ಮಾಪಕ (Richter scale)ದಲ್ಲಿ 4.1ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದ್ದು, ಬಸಾರ್​​ನಿಂದ ಉತ್ತರ-ವಾಯುವ್ಯಕ್ಕೆ 143 ಕಿಮೀ ದೂರದಲ್ಲಿ, ಭೂಮಿಯಿಂದ 10 ಕಿಮೀ ಆಳದಲ್ಲಿ ಭೂಮಿ ನಡುಗಿದೆ ಎಂದೂ ಮಾಹಿತಿ ನೀಡಿದೆ. ಭೂಕಂಪನದಿಂದ ಯಾವುದೇ ಆಸ್ತಿಪಾಸ್ತಿ, ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಈ ಹಿಂದೆ ಸೆಪ್ಟೆಂಬರ್​ 25ರಂದು ಅರುಣಾಚಲ ಪ್ರದೇಶದಲ್ಲಿ ಭೂಕಂಪವಾಗಿತ್ತು. ಅಂದು ಪ್ಯಾಂಗಿನ್​ನ ಉತ್ತರದಿಂದ ಈಶಾನ್ಯಕ್ಕೆ 237ಕಿಮೀ ದೂರದಲ್ಲಿ ಬೆಳಗ್ಗೆ 10.11ಗಂಟೆಗೆ ಭೂಮಿ ಕಂಪನವಾಗಿತ್ತು. ಅಂದು 4.5ರಷ್ಟು ತೀವ್ರತೆ ದಾಖಲಾಗಿದ್ದಾಗಿ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿತ್ತು. ಅವತ್ತೂ ಸಹ ಯಾವುದೇ ಹಾನಿಯಾಗಿರಲಿಲ್ಲ.  ಅದಕ್ಕೂ ಮೊದಲು ಸೆಪ್ಟೆಂಬರ್​ 19ರಂದು ಅರುಣಾಚಲ ಪ್ರದೇಶದ ಚಾಂಗ್ಲಾಂಗ್​ ಪ್ರದೇಶದಲ್ಲಿ 4.4 ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಅಂದು ಚಾಂಗ್ಲಾಂಗ್​​ನಿಂದ ಉತ್ತರದಿಂದ ಪೂರ್ವಕ್ಕೆ 70 ಕಿಮೀ ದೂರದಲ್ಲಿ, ಮಧ್ಯಾಹ್ನ 3.6ಗಂಟೆಗೆ ಭೂಮಿ ನಡುಗಿತ್ತು. ಹೀಗೆ ಅರುಣಾಚಲ ಪ್ರದೇಶದಲ್ಲಿ ಪದೇಪದೆ ಭೂಕಂಪನವಾಗುತ್ತಿರುವುದು ಸಹಜವಾಗಿಯೇ ಆತಂಕ ಮೂಡಿಸಿದೆ.

ಇದನ್ನೂ ಓದಿ:  Gandhi Jayanti 2021 : ‘ಭಿನ್ನಾಭಿಪ್ರಾಯಗಳು ವಿಷಯಗಳನ್ನು ಕುರಿತು ಇರಬೇಕೇ ಹೊರತು, ವ್ಯಕ್ತಿಗಳ ನಡುವೆ ಇರಬಾರದು‘

Video: 1000 ಕೆಜಿ ತೂಕದ ಖಾದಿ ತ್ರಿವರ್ಣಧ್ವಜ ಲೇಹ್​​ನಲ್ಲಿ ಅನಾವರಣ; ವಿಶ್ವದಲ್ಲೇ ಅತ್ಯಂತ ದೊಡ್ಡ ರಾಷ್ಟ್ರಧ್ವಜವಿದು

Published On - 11:47 am, Sat, 2 October 21