Video: 1000 ಕೆಜಿ ತೂಕದ ಖಾದಿ ತ್ರಿವರ್ಣಧ್ವಜ ಲೇಹ್ನಲ್ಲಿ ಅನಾವರಣ; ವಿಶ್ವದಲ್ಲೇ ಅತ್ಯಂತ ದೊಡ್ಡ ರಾಷ್ಟ್ರಧ್ವಜವಿದು
Gandhi Jayanti 2021: ರಾಷ್ಟ್ರಧ್ವಜವನ್ನು ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ಆರ್.ಕೆ.ಮಾಥುರ್ ಅನಾವರಣಗೊಳಿಸಿದ್ದಾರೆ. ಹಾಗೇ, ಸೇನಾ ಮುಖ್ಯಸ್ಥ ಎಂ.ಎಂ.ನರವಾನೆ ಕೂಡ ಉಪಸ್ಥಿತರಿದ್ದರು.
ಇಂದು ದೇಶಾದ್ಯಂತ ಮಹಾತ್ಮ ಗಾಂಧಿ (Mahatma Gandhi) 152ನೇ ಜನ್ಮದಿನ ಆಚರಣೆ ಮಾಡಲಾಗುತ್ತಿದ್ದು, ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಕೇಂದ್ರ ಸಚಿವರಾದಿಯಾಗಿ ಅನೇಕರು ಗಾಂಧಿಗೆ ನಮನ ಸಲ್ಲಿಸಿದ್ದಾರೆ. ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಾಗೇ, ಇಂದು ಕೇಂದ್ರಾಡಳಿತ ಪ್ರದೇಶ ಲಡಾಖ್ನ ಲೇಹ್ (Leh Of Ladakh)ನಲ್ಲಿ ಗಾಂಧಿ ಜಯಂತಿ ನಿಮಿತ್ತ, ಅತ್ಯಂತ ದೊಡ್ಡದಾದ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಲೇಹ್ನ ಝಾನ್ಸ್ಕರ್ ಕಣಿವೆಯಲ್ಲಿ ಹಾರಿಸಾಲದ ಈ ಖಾದಿ ರಾಷ್ಟ್ರಧ್ವಜ 225 ಅಡಿ ಉದ್ದವಿದ್ದು, 125 ಅಡಿ ಅಗಲವಿದೆ. ಹಾಗೇ, 1000 ಕೆಜಿಗಳಷ್ಟು ತೂಗುತ್ತದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ರಾಷ್ಟ್ರಧ್ವಜ ಎನ್ನಿಸಿದ್ದು, ಮುಂಬೈನ ಮುದ್ರಣಕಂಪನಿಯೊಂದರ ಸಹಯೋಗದೊಂದಿಗೆ ಧ್ವಜ ತಯಾರಾಗಿದೆ.
ಈ ರಾಷ್ಟ್ರಧ್ವಜವನ್ನು ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ಆರ್.ಕೆ.ಮಾಥುರ್ ಅನಾವರಣಗೊಳಿಸಿದ್ದಾರೆ. ಹಾಗೇ, ಸೇನಾ ಮುಖ್ಯಸ್ಥ ಎಂ.ಎಂ.ನರವಾನೆ ಕೂಡ ಉಪಸ್ಥಿತರಿದ್ದರು. ಇಂದು ಇಲ್ಲಿ ಹಾರಿಸಲಾದ ಅತ್ಯಂತ ದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಅಕ್ಟೋಬರ್ 8ರಂದು ಏರ್ಫೋರ್ಸ್ ದಿನಾಚರಣೆ ನಿಮಿತ್ತ ಹಿಂಡನ್ನಲ್ಲಿ ಹಾರಿಸಲಾಗುವುದು. ಅಂದಹಾಗೆ ಈ ಝಾನ್ಸ್ಕರ್ ವ್ಯಾಲಿ ಲಡಾಖ್ನ ಕಾರ್ಗಿಲ್ ಜಿಲ್ಲೆಯಲ್ಲಿದೆ. ಕಾರ್ಗಿಲ್ನ ರಾಷ್ಟ್ರೀಯ ಹೆದ್ದಾರಿಯಿಂದ 250 ಕಿಮೀ ದೂರದಲ್ಲಿದೆ.
Worlds biggest #Khadi #NationalFlag hoisted in #Leh. This flag is 225 feet long and 150 feet wide. Weight 1000 kg#GandhiJayanti #MahatmaGandhi pic.twitter.com/5ep3tyVYiD
— DD News (@DDNewslive) October 2, 2021
ಭೌಗೋಳಿಕವಾಗಿ ಈ ಝಾನ್ಸ್ಕರ್ ಶ್ರೇಣಿ ಟೆಥಿಸ್ ಹಿಮಾಲಯ ಶ್ರೇಣಿಗಳ ಭಾಗವಾಗಿದೆ. ಇದು ಸರಾಸರಿ 6000 ಮೀಟರ್ (19,700 ಅಡಿ) ಎತ್ತರವಾಗಿದೆ. ಝಾನ್ಸ್ಕರ್ ಶ್ರೇಣಿಯ ಪೂರ್ವಭಾಗವನ್ನು ರೂಪ್ಶು ಎಂದು ಕರೆಯಲಾಗುತ್ತದೆ. ಈ ಝಾನ್ಸ್ಕರ್ ಪ್ರದೆಶವನ್ನು ಜಿಲ್ಲೆಯಾಗಿ ಪರಿವರ್ತಿಸಬೇಕು ಎಂಬ ಆಗ್ರಹವೂ ಬಹುದಿನಗಳಿಂದ ಇದೆ. ಝಾನ್ಸ್ಕರ್ ಕಣಿವೆಯಂತೂ ಹಿಮಾಚ್ಛಾದಿತವಾಗಿದ್ದು, ಶುದ್ಧ ನದಿಗಳ ಹರಿವನ್ನು ಹೊಂದಿದೆ. ಬೌದ್ಧಧರ್ಮದ ಕೇಂದ್ರವೂ ಹೌದು.
ಇದನ್ನೂ ಓದಿ: ಯಲಹಂಕ: ಶಿವರಾಮ ಕಾರಂತ ಬಡಾವಣೆ ಭೂಸ್ವಾಧೀನಕ್ಕೆ ರೈತರ ವಿರೋಧ; ಪ್ರತಿಭಟಿಸುತ್ತಿದ್ದ ರೈತರು ಪೊಲೀಸರ ವಶಕ್ಕೆ
Youtube inspiration: ಯುಟ್ಯೂಬ್ನಲ್ಲಿ ವೆಬ್ ಸಿರೀಸ್ ನೋಡಿ ಬೈಕ್ ಕದಿಯುತ್ತಿದ್ದ ಗ್ಯಾಂಗ್ ಬಂಧನ
Published On - 11:11 am, Sat, 2 October 21