Youtube inspiration: ಯುಟ್ಯೂಬ್​ನಲ್ಲಿ ವೆಬ್ ​ಸಿರೀಸ್​ ನೋಡಿ ಬೈಕ್ ಕದಿಯುತ್ತಿದ್ದ ಗ್ಯಾಂಗ್​ ಬಂಧನ

TV9 Digital Desk

| Edited By: ಸಾಧು ಶ್ರೀನಾಥ್​

Updated on:Oct 02, 2021 | 11:05 AM

ಬೈಕ್ ಕಳ್ಳರಾದ ರಾಜು, ಅಪ್ಪು ಸೇರಿದಂತೆ ಮೂವರ ಬಂಧನವಾಗಿದೆ. ಬಂಧಿತರಿಂದ ಒಟ್ಟು 8 ಬೈಕ್ ಹಲಸೂರು ಗೇಟ್​ ಪೊಲೀಸರು ಜಪ್ತಿ ಮಾಡಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Youtube inspiration: ಯುಟ್ಯೂಬ್​ನಲ್ಲಿ ವೆಬ್ ​ಸಿರೀಸ್​ ನೋಡಿ ಬೈಕ್ ಕದಿಯುತ್ತಿದ್ದ ಗ್ಯಾಂಗ್​ ಬಂಧನ
Youtube inspiration: ಯುಟ್ಯೂಬ್​ನಲ್ಲಿ ವೆಬ್​ಸಿರೀಸ್​ ನೋಡಿ ಬೈಕ್ ಕದಿಯುತ್ತಿದ್ದ ಗ್ಯಾಂಗ್​ ಬಂಧನ

Follow us on

ಬೆಂಗಳೂರು: ಯುಟ್ಯೂಬ್​ ನೋಡಿ ಬೈಕ್ ಕದಿಯುತ್ತಿದ್ದ ಗ್ಯಾಂಗ್​ ಅಂದರ್​ ಆಗಿದೆ. ಹಲಸೂರು ಗೇಟ್​ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಯುಟ್ಯೂಬ್​ನಲ್ಲಿ ವೆಬ್​ಸಿರೀಸ್​ ನೋಡಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳನ್ನು ಗ್ಯಾಂಗ್​ ಕದಿಯುತ್ತಿತ್ತು.

ಪಾತಕಿಗಳು ಸುಲಭವಾಗಿ ಬೈಕ್​ ಕದಿಯುವುದು ಹೇಗೆಂದು ವೀಕ್ಷಿಸಿ ಕಳವು ಮಾಡುತ್ತಿದ್ದರು. ಬೈಕ್ ಹ್ಯಾಂಡಲ್​ ಲಾಕ್ ಮುರಿದು ಕ್ಷಣ ಮಾತ್ರದಲ್ಲಿ ಕಳ್ಳತನ ಎಸಗುತ್ತಿದ್ದರು. ಹಲಸೂರು ಗೇಟ್ ಮತ್ತು ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ಇವರು ತಮ್ಮ ಕೈಚಳಕ ತೋರುತ್ತಿದ್ದರು. ಬೈಕ್ ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್ ಕಳ್ಳತನ ಮಾಡುವ ಬಗ್ಗೆ ಆರೋಪಿಗಳು ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದ್ದಾರೆ.

ಬೈಕ್ ಕಳ್ಳರಾದ ರಾಜು, ಅಪ್ಪು ಸೇರಿದಂತೆ ಮೂವರ ಬಂಧನವಾಗಿದೆ. ಬಂಧಿತರಿಂದ ಒಟ್ಟು 8 ಬೈಕ್ ಹಲಸೂರು ಗೇಟ್​ ಪೊಲೀಸರು ಜಪ್ತಿ ಮಾಡಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read: YouTube: ಯುಟ್ಯೂಬ್​ ಚಾನೆಲ್ ಆರಂಭಿಸಿ ಹಣ ಸಂಪಾದಿಸುವುದು ಹೇಗೆ?

Also Read: YouTube: ಯೂಟ್ಯೂಬ್​ನಿಂದ ನಾನು ತಿಂಗಳಿಗೆ 4 ಲಕ್ಷ ರೂಪಾಯಿ ಸಂಪಾದಿಸ್ತೇನೆ – ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada