ಮಹಾತ್ಮ ಗಾಂಧಿ-ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ; ಇಬ್ಬರೂ ನಾಯಕರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೂ ಕೂಡ ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧಿಯವರಿಗೆ ನಮನ ಸಲ್ಲಿಸಿದ್ದಾರೆ.
ಇಂದು ಮಹಾತ್ಮ ಗಾಂಧಿ (Mahatma Gandhi) ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ (Lal Bahadur Shastri) ಜನ್ಮ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ನಾಯಕರಿಗೆ ಗೌರವ ನಮನ ಸಲ್ಲಿಸಿದರು. ಮೊದಲು ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧಿಯವರಿಗೆ ಪುಷ್ಪನಮನ ಸಲ್ಲಿಸಿದ ಮೋದಿ, ನಂತರ ವಿಜಯ್ ಘಾಟ್ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಗೌರವ ಸಲ್ಲಿಸಿದರು. ಅದಕ್ಕೂ ಮೊದಲು ಈ ಇಬ್ಬರೂ ನಾಯಕರ ಕುರಿತಾಗಿ ಟ್ವೀಟ್ ಮಾಡಿದ್ದರು.
ಮಹಾತ್ಮ ಗಾಂಧಿಯವರ ಬಗ್ಗೆ ಟ್ವೀಟ್ ಮಾಡಿದ ಪಿಎಂ ಮೋದಿ, ಗಾಂಧಿ ಜಯಂತಿಯಂದು ನಾನು ಬಾಪು ಅವರಿಗೆ ತಲೆ ಬಾಗುತ್ತೇನೆ. ಅವರ ಶಾಂತಿಯ ತತ್ವಗಳು ಜಾಗತಿಕವಾಗಿ ಈಗಲೂ ಪ್ರಸ್ತುತವಾಗಿವೆ. ಹಾಗೇ, ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತಿವೆ ಎಂದು ಹೇಳಿದ್ದಾರೆ. ಹಾಗೇ, ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಟ್ವೀಟ್ ಮೂಲಕ ಸ್ಮರಿಸಿರುವ ಅವರು, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದಂದು ಅವರಿಗೆ ನಮನಗಳು. ಮೌಲ್ಯಗಳು ಮತ್ತು ತತ್ವಗಳನ್ನು ಒಳಗೊಂಡಿದ್ದ ಅವರ ಜೀವನವು ಈ ದೇಶ ವಾಸಿಗಳಿಗೆ ಸದಾಕಾಲಕ್ಕೂ ಸ್ಫೂರ್ತಿಯ ಮೂಲವಾಗಿ ಉಳಿಯುತ್ತದೆ ಎಂದು ಹೇಳಿದ್ದಾರೆ.
राष्ट्रपिता महात्मा गांधी को उनकी जन्म-जयंती पर विनम्र श्रद्धांजलि। पूज्य बापू का जीवन और आदर्श देश की हर पीढ़ी को कर्तव्य पथ पर चलने के लिए प्रेरित करता रहेगा।
I bow to respected Bapu on Gandhi Jayanti. His noble principles are globally relevant and give strength to millions.
— Narendra Modi (@narendramodi) October 2, 2021
#WATCH Prime Minister Narendra Modi pays floral tributes to Mahatma Gandhi at Rajghat on #GandhiJayanti pic.twitter.com/GE63jP2Nhe
— ANI (@ANI) October 2, 2021
Delhi | PM Narendra Modi pays tribute to former PM Lal Bahadur Shastri at Vijay Ghat on his birth anniversary pic.twitter.com/Izl0U3ppt7
— ANI (@ANI) October 2, 2021
ಇನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೂ ಕೂಡ ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧಿಯವರಿಗೆ ನಮನ ಸಲ್ಲಿಸಿದ್ದಾರೆ. ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿ ಎಲ್ಲ ರಾಜಕೀಯ ಗಣ್ಯರೂ ಇಬ್ಬರೂ ಮಹಾನ್ ನಾಯಕರಿಗೆ ಗೌರವ ಸಲ್ಲಿಸಿದ್ದಾರೆ. ಇಂದು ರಾಜನಾಥ್ ಸಿಂಗ್ ಲಕ್ಷದ್ವೀಪದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಹಾಗೇ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಲ ಜೀವನ್ ಮಿಷನ್ ಬಗ್ಗೆ ಗ್ರಾಮ ಪಂಚಾಯತ್ ಮತ್ತು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
ಇದನ್ನೂ ಓದಿ: ಅಂಜನಾದ್ರಿ ಪರ್ವತದಲ್ಲಿ ಅನ್ಯ ಧರ್ಮಿಯರ ಅಂಗಡಿಗಳು ಇರಬಾರದು ಎಂದಿದ್ದ ಮಧುಗಿರಿ ಮೋದಿ ವಿರುದ್ಧ ಕೇಸ್ ದಾಖಲು
ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನ; ಬಗೆಹರಿದಿಲ್ಲ ಮಾಜಿ ಪ್ರಧಾನಿಯ ಸಾವಿನ ಸುತ್ತ ಇರುವ ಈ ನಾಲ್ಕು ರಹಸ್ಯಗಳು..
Published On - 9:14 am, Sat, 2 October 21