ಅಂಜನಾದ್ರಿ ಪರ್ವತದಲ್ಲಿ ಅನ್ಯ ಧರ್ಮಿಯರ ಅಂಗಡಿಗಳು ಇರಬಾರದು ಎಂದಿದ್ದ ಮಧುಗಿರಿ ಮೋದಿ ವಿರುದ್ಧ ಕೇಸ್ ದಾಖಲು
ಮಧುಗಿರಿ ಮೋದಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿ ಅನ್ಯ ಧರ್ಮಿಯರು ದುಖಾನ್ ಎತ್ತುಕೊಂಡು ಹೋಗ್ತಾ ಇರಬೇಕೆಂದು ಎಚ್ಚರಿಕೆ ನೀಡಿದ್ದರು.
ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿಮಾನಿ ಮಧುಗಿರಿ ಮೋದಿಯ ವಿರುದ್ಧ ಕೇಸ್ ದಾಖಲಾಗಿದೆ. ಜಿಲ್ಲೆಯ ಅಂಜನಾದ್ರಿ ಪರ್ವತದಲ್ಲಿ ಅನ್ಯ ಧರ್ಮಿಯರ ಅಂಗಡಿಗಳು ಇರಬಾರದು ಎಂದಿದ್ದ ಮಧುಗಿರಿ ಮೋದಿ ವಿರುದ್ಧ ಪ್ರಕರಣ ದಾಖಲಾಗಿದೆ. ಹಿಂದೂ ಕಾರ್ಯಕರ್ತ ಆತುಲ್ ಕುಮಾರ್ ಸಬರಲಾಲ್ ಅಲಿಯಾಸ್ ಮಧುಗಿರಿ ಮೋದಿ ವಿರುದ್ಧ ಗಂಗಾವತಿ ತಹಶೀಲ್ದಾರ್ ಎಫ್ಐಆರ್ ದಾಖಲಿಸಿದ್ದಾರೆ. ಆಂಜನೇಯ ಜನ್ಮಸ್ಥಳ ಎಂದು ಪ್ರಸಿದ್ಧಿ ಪಡೆದಿರುವ ಅಂಜನಾದ್ರಿ ಪರ್ವತದಲ್ಲಿ ಅನ್ಯ ಧರ್ಮಿಯರ ಅಂಗಡಿಗಳು ಇರಬಾರದು ಎಂದು ಮಧುಗಿರಿ ಮೋದಿ ಹೇಳಿಕೆ ನೀಡಿದ್ದರು. ಹೀಗಾಗಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಮಧುಗಿರಿ ಮೋದಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿ ಅನ್ಯ ಧರ್ಮಿಯರು ದುಖಾನ್ ಎತ್ತುಕೊಂಡು ಹೋಗ್ತಾ ಇರಬೇಕೆಂದು ಎಚ್ಚರಿಕೆ ನೀಡಿದ್ದರು. ಹಿಂದೂಗಳು ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅರ್ಹರಾಗಿದ್ದಾರೆ. ದೇವಸ್ಥಾನದ ಎದುರಿಗೆ ಅಂಗಡಿ ಇಟ್ಟವರು ತಾಕತ್ತಿದ್ದರೆ ಜೈ ಶ್ರೀರಾಮ್ ಎಂದು ಹೇಳಿ ಅಂಗಡಿ ಇಟ್ಟುಕೊಟ್ಟಿ. ಆಂಜನೇಯನ ಫೋಟೋ ಹಾಕಿಕೊಂಡು ಅಂಗಡಿ ಇಟ್ಟುಕೊಳ್ಳಿ ಅಂತ ಮಧುಗಿರಿ ಮೋದಿ ಹೇಳಿಕೆ ನೀಡಿದ್ದರು. ಹೀಗಾಗಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ್ದಾರೆ ಅಂತ 153 (A), 505(2), 506 ಅಡಿ ತಹಶೀಲ್ದಾರ್ ಪ್ರಕರಣ ದಾಖಲಿಸಿದ್ದಾರೆ.
ಅನ್ಯ ಧರ್ಮಿಯರು ದುಖಾನ್ ಎತ್ತುಕೊಂಡು ಹೋಗ್ತಾ ಇರಬೇಕೆಂದು ಎಚ್ಚರಿಕೆ ನೀಡಿದ್ದ ಮಧುಗಿರಿ ಮೋದಿ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಸದ್ಯ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ
Anti Conversion Law: ಮತಾಂತರ ವಿರೋಧಿ ಕಾನೂನು ತರುವ ರೀತಿ ಇದಲ್ಲ; ಕಾರಣ ಇಲ್ಲಿದೆ ನೋಡಿ
ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ; ತಾಯಿ, ಇಬ್ಬರು ಮಕ್ಕಳು ಮೃತ
Published On - 9:00 am, Sat, 2 October 21