ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ; ತಾಯಿ, ಇಬ್ಬರು ಮಕ್ಕಳು ಮೃತ
ವರ್ಷದ ಹಿಂದೆಯಷ್ಟೇ ವಸಂತಾ ಅವರ ಪತಿ ಮೃತಪಟ್ಟಿದ್ದರು. ಅಂದಿನಿಂದ ಕುಟುಂಬ ಮಾನಸಿಕವಾಗಿ ನೊಂದಿತ್ತು ಎಂದು ಹೇಳಲಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ದೌಡಾಯಿಸಿದ್ದು ತನಿಖೆ ಆರಂಭಿಸಿದ್ದಾರೆ.
ಬೆಂಗಳೂರು: ಒಂದೇ ಕುಟುಂಬದ ಮೂವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಷಾದಕರ ಘಟನೆ ಬೆಂಗಳೂರು ಉತ್ತರ ತಾಲೂಕಿನ ಪ್ರಕೃತಿ ಬಡಾವಣೆಯ ಮನೆಯೊಂದರಲ್ಲಿ ನಡೆದಿದೆ. ತಾಯಿ ಸೇರಿದಂತೆ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡವರು. ವಸಂತಾ(40), ಯಶ್ವಂತ್(15), ನಿಶ್ಚಿತಾ(6) ಆತ್ಮಹತ್ಯೆ ಮಾಡಿಕೊಂಡವರು. ತಾಯಿ ಮಗಳು ರೂಂ ಒಂದರಲ್ಲಿ ಒಂದೇ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮತ್ತೊಂದು ಕಡೆ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವರ್ಷದ ಹಿಂದೆಯಷ್ಟೇ ವಸಂತಾ ಅವರ ಪತಿ ಮೃತಪಟ್ಟಿದ್ದರು. ಅಂದಿನಿಂದ ಕುಟುಂಬ ಮಾನಸಿಕವಾಗಿ ನೊಂದಿತ್ತು ಎಂದು ಹೇಳಲಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ದೌಡಾಯಿಸಿದ್ದು ತನಿಖೆ ಆರಂಭಿಸಿದ್ದಾರೆ.
ಮಗು ಸಾಯಿಸಿ, ನಾಲ್ವರು ಆತ್ಮಹತ್ಯೆ ಪ್ರಕರಣ: ಪೊಲೀಸರಿಂದ ಮೂವರ ಬಂಧನ ಮಗುವನ್ನು ಸಾಯಿಸಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಹಲ್ಲೆಗೆರೆ ಶಂಕರ್, ಅಳಿಯಂದಿರಾದ ಪ್ರವೀಣ್ ಹಾಗೂ ಶ್ರೀಕಾಂತ್ ಬಂಧಿತರು. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 306ರ (ಆತ್ಮಹತ್ಯೆ ಪ್ರಚೋದನೆ) ಅಡಿಯಲ್ಲಿ ಆರೋಪಪಟ್ಟಿ ದಾಖಲಿಸಲಾಗಿದೆ.
ಲ್ಯಾಪ್ಟ್ಯಾಪ್ನಲ್ಲಿ ಬರೆದಿಟ್ಟಿದ್ದ ಡೆತ್ನೋಟ್ನಲ್ಲಿ ತಂದೆ ಶಂಕರ್ ಹಾಗೂ ಅಳಿಯಂದಿರ ವಿರುದ್ಧ ಮೃತರು ಆರೋಪ ಮಾಡಿದ್ದರು. ಸಿಂಧೂರಾಣಿ, ಸಿಂಚನಾ ತಮ್ಮ ಪತಿಯಂದಿರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಹಲ್ಲೆಯ ಆರೋಪ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಲ್ಯಾಪ್ಟ್ಯಾಪ್, ನಾಲ್ಕು ಮೊಬೈಲ್ ಫೋನ್ ಹಾಗೂ 3 ಡೆತ್ನೋಟ್ ಪೊಲೀಸರು ವಶಪಡಿಸಿಕೊಂಡಿದ್ದರು. ಮನೆ ಮಾಲೀಕ ಹಲ್ಲೆಗೆರೆ ಶಂಕರ್, ಪುತ್ರಿ ಸಿಂಚನಾರ ಪತಿ ಪ್ರವೀಣ್, ಸಿಂಧುರಾಣಿಯ ಪತಿ ಶ್ರೀಕಾಂತ್ ಬಂಧಿತರು.
ಇದನ್ನೂ ಓದಿ:
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಜಾರಿಗಾಗಿ ಮತ್ತೊಮ್ಮೆ ಪಾದಯಾತ್ರೆಗೆ ಬಾಗಲಕೋಟೆ ಸಜ್ಜು
ಸಿಂದಗಿ ಪಟ್ಟಣದಲ್ಲಿ ಭೂಕಂಪನವಾದದ್ದು ನಿಜ; ರಿಕ್ಟರ್ ಮಾಪಕದಲ್ಲಿ 2.5ರಷ್ಟು ತೀವ್ರತೆ ದಾಖಲು