ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಜಾರಿಗಾಗಿ ಮತ್ತೊಮ್ಮೆ ಪಾದಯಾತ್ರೆಗೆ ಬಾಗಲಕೋಟೆ ಸಜ್ಜು

ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನಕ್ಕೆ 20 ಗ್ರಾಮಗಳ ಸ್ಥಳಾಂತರ ಆಗಬೇಕು. 1 ಲಕ್ಷ 30 ಸಾವಿರ ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಬೇಕು. ಜಮೀನು ಕಳೆದುಕೊಳ್ಳುವ ರೈತರಿಗೆ ಏಕರೂಪದ ಬೆಲೆ ನಿರ್ಧಾರ ಆಗಬೇಕು. ಯೋಜನೆ ಪೂರ್ಣವಾಗಲು 65 ಸಾವಿರ ಕೋಟಿ ಅನುದಾನ ಬೇಕಿದೆ.‌

ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಜಾರಿಗಾಗಿ ಮತ್ತೊಮ್ಮೆ ಪಾದಯಾತ್ರೆಗೆ ಬಾಗಲಕೋಟೆ ಸಜ್ಜು
ಸಾಂಕೇತಿಕ ಚಿತ್ರ
Follow us
TV9 Web
| Updated By: guruganesh bhat

Updated on: Oct 01, 2021 | 10:43 PM

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತ ನೆನೆಗುದಿಗೆ ಬಿದ್ದು ದಶಕವೇ ಗತಿಸಿದೆ. ಯುಕೆಪಿ ಮೂರನೇ ಹಂತಕ್ಕೆ ಗೆಜೆಟ್ ನೊಟಿಫಿಕೇಶನ್ ಹೊರಡಿಸಬೇಕಾದ ಕೇಂದ್ರ ಸರ್ಕಾರ ಇದುವರೆಗೂ ಹೊರಡಿಸಿಲ್ಲ.‌ ಕಳೆದ ಒಂದು ದಶಕದಿಂದ ಎಲ್ಲ ಸರ್ಕಾರಗಳಿಗೆ ಬರೀ ಭರವಸೆಯಲ್ಲೇ ಕಾಲ‌ ಕಳೆಯುತ್ತ ಬಂದಿವೆ.‌ ಇದಕ್ಕಾಗಿ ಹಲವು ಹೋರಾಟಗಳು ನಡೆದು ಹೋಗಿವೆ.‌ ಇದೀಗ ಮತ್ತೊಂದು ಹೋರಾಟಕ್ಕೆ ಮುಳುಗಡೆ ನಾಡು ಅಂತ ಕರೆಸಿಕೊಳ್ಳುವ ಬಾಗಲಕೋಟೆ ಸಜ್ಜಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತ ನೆನೆಗುದಿಗೆ ಬಿದ್ದು ದಶಕವೇ ಕಳೆದಿದೆ. ಕಳೆದ‌ ಒಂದು ದಶಕದಿಂದ ಎಲ್ಲ ಸರ್ಕಾರಗಳು ಬರೀ ಭರವಸೆಯಲ್ಲಿಯೇ ಕಾಲ‌ಕಳೆಯುತ್ತ ಬಂದಿವೆ. ಅದೆಷ್ಟೋ ಹೋರಾಟಗಳು ನಡೆದ್ರೂ ಏನೂ ಪ್ರಯೋಜನ ಆಗಿಲ್ಲ. ಇದೀಗ ಮತ್ತೊಂದು ಹೋರಾಟಕ್ಕೆ ಮುಳುಗಡೆ ನಾಡು ಅಂತ ಕರೆಸಿಕೊಳ್ಳುವ ಬಾಗಲಕೋಟೆ ಸಿದ್ಧವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3 ಕ್ಕಾಗಿ ಮತ್ತೊಂದೆ ಪಾದಯಾತ್ರೆಗೆ ಕೋಟೆನಾಡು ಸಜ್ಜಾಗಿದೆ. ನಾಳೆ ಗಾಂಧಿ ಜಯಂತಿಯಂದು ಪಾದಯಾತ್ರೆಗೆ ನಿರ್ಧಾರ ಮಾಡಿದ್ದು, ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ನಿರ್ಣಾಯಕ ನಡಿಗೆ ಎನ್ನುವ ಘೋಷವಾಕ್ಯದೊಂದಿಗೆ ಸರ್ಕಾರದ ಮೇಲೆ ಒತ್ತಡ ಹಾಕಲು ತೀರ್ಮಾನಿಸಲಾಗಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ, ಮಾಜಿ ಸಚಿವರಾದ ಎಚ್ ವೈ ಮೇಟಿ, ಅಜಯಕುಮಾರ ಸರನಾಯಕ, ಮಾಜಿ ಶಾಸಕರಾದ ಜೆ.ಟಿ.ಪಾಟೀಲ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ರೈತ ಮುಖಂಡರು ಭಾಗಿಯಾಗಲಿದ್ದಾರೆ. ಪಕ್ಷಾತೀತ ಹೋರಾಟ ನಡೆಸಲು ಮುಖಂಡರು ನಿರ್ಧಾರ ಮಾಡಿದ್ದಾರೆ.

20 ಕ್ಕೂ ಹೆಚ್ಚು ಮಠಾಧೀಶರ ಸಹಭಾಗಿತ್ವ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನಕ್ಕೆ 20 ಗ್ರಾಮಗಳ ಸ್ಥಳಾಂತರ ಆಗಬೇಕು. 1 ಲಕ್ಷ 30 ಸಾವಿರ ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಬೇಕು. ಜಮೀನು ಕಳೆದುಕೊಳ್ಳುವ ರೈತರಿಗೆ ಏಕರೂಪದ ಬೆಲೆ ನಿರ್ಧಾರ ಆಗಬೇಕು. ಯೋಜನೆ ಪೂರ್ಣವಾಗಲು 65 ಸಾವಿರ ಕೋಟಿ ಅನುದಾನ ಬೇಕಿದೆ.‌ ಭೂಸ್ವಾಧೀನ ಕಾರ್ಯಕ್ಕೆ ಖಾಲಿ ಇರುವ ಅಗತ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜನೆ ಮಾಡಬೇಕಿದೆ. ಕಳೆದ ಒಂದು ದಶಕದಿಂದ ಎಲ್ಲ ಸರ್ಕಾರಗಳು ಬರೀ ಭರವಸೆಯಲ್ಲೆ ಕಾಲ ಕಳೆಯುತ್ತ ಬಂದಿವೆ. ಇದೀಗ ಮತ್ತೊಂದು ಹಂತದ ಹೋರಾಟಕ್ಕೆ ಸಜ್ಜಾಗ್ತಿದಾರೆ. ಅಕ್ಟೋಬರ್ 2 ರಂದು ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಬಾಗಲಕೋಟೆ ತಾಲ್ಲೂಕಿನ ಅನಗವಾಡಿಯ ಘಟಪ್ರಭಾ ನದಿಯಿಂದ ಟಕ್ಕಳಕಿಯ ಕೃಷ್ಣಾ ನದಿ ದಡದವರೆಗೂ ನಡೆಯಲಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಅನಗವಾಡಿಯಿಂದ ಟಕ್ಕಳಕಿವರೆಗೆ 20 ಕಿ.ಮೀ ವರೆಗೆ ಬೃಹತ್ ಪಾದಯಾತ್ರೆ ನಡೆಸಲು ತೀರ್ಮಾನ ಮಾಡಲಾಗಿದೆ. ಪಾದಯಾತ್ರೆ ಮೂಲಕ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಅನುಷ್ಠಾನಕ್ಕೆ ಒತ್ತಾಯಿಸಲಿದ್ದು ಇದು ಪಕ್ಷಾತೀತ ಹೋರಾಟ ಗದಗಿನ ತೋಂಟದಾರ್ಯ ಶ್ರೀಗಳು, ನಿಡಸೋಸಿ ಮಠದ ಸ್ವಾಮೀಜಿಗಳು, ಇಳಕಲ್ ಮಹಾತ ಸ್ವಾಮೀಜಿಗಳು ಸೇರಿದಂತೆ 20 ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಲಿದ್ದಾರೆ.ಹೋರಾಟಕ್ಕೆ ಎಲ್ಲರೂ ಪ್ರೋತ್ಸಾಹಿಸಿ ಭಾಗಿಯಾಗಬೇಕೆಂದು ಪರಿಷತ್ ವಿಪಕ್ಷನಾಯಕ ಕರೆ ನೀಡಿದ್ದಾರೆ.

ಒಟ್ಟಿನಲ್ಲಿ ದಶಕದಿಂದ ನೆನೆಗುದಿಗೆ ಬಿದ್ದಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ  ಹಂತದ ಕಾಮಗಾರಿ ಜಾರಿಗಾಗಿ ಕೃಷ್ಣೆಯ ಮಕ್ಕಳು ಮತ್ತೊಂದು ಹೋರಾಟಕ್ಕೆ ಸಜ್ಜಾಗಿದ್ದಾರೆ. ಆದ್ರೆ ದಶಕದಿಂದ ಭರವಸೆಗಳನ್ನೇ ನೀಡುತ್ತ ಕಾಲ ಕಳೆಯುತ್ತಿರುವ ಸರ್ಕಾರಗಳು ಪಾದಯಾತ್ರೆಯಿಂದಾದರೂ ಎಚ್ಚೆತ್ತುಕೊಂಡು ಯೋಜನೆ ಅನುಷ್ಠಾನ ಮಾಡುತ್ತಾ ಕಾದು ನೋಡಬೇಕಿದೆ.

ವರದಿ: ರವಿ ಮೂಕಿ ಟಿವಿ9 ಬಾಗಲಕೋಟೆ

ಇದನ್ನೂ ಓದಿ: 

ಮೇಕ್ ಇನ್ ಬಾಗಲಕೋಟೆ ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಪುಟ್ಟ ಗ್ಯಾರೇಜಿನಲ್ಲಿ ತಯಾರಾಗಿದೆ ಅಂದರೆ ನಂಬ್ತೀರಾ?

Temple Tour: ಬಾಗಲಕೋಟೆಯಲ್ಲಿ ಶಕ್ತಿ ಸ್ವರೂಪಿಣಿಯಾಗಿ ನೆಲೆ ನಿಂತಿದ್ದಾಳೆ ಬನಶಂಕರಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ