Earthquake: ದೆಹಲಿ, NCR ಸುತ್ತಮುತ್ತ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 6.1ರಷ್ಟು ತೀವ್ರತೆ ದಾಖಲು

Delhi Earthquake: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ NCR ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದಲ್ಲದೆ, ಜಮ್ಮು-ಕಾಶ್ಮೀರ, ಲೇಹ್‌, ಅಮೃತಸರದಲ್ಲೂ ಭೂಕಂಪನದ ಅನುಭವವಾಗಿದೆ. ಹರಿಯಾಣ, ರಾಜಸ್ಥಾನದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.

Earthquake: ದೆಹಲಿ, NCR ಸುತ್ತಮುತ್ತ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 6.1ರಷ್ಟು ತೀವ್ರತೆ ದಾಖಲು
ಪ್ರಾತಿನಿಧಿಕ ಚಿತ್ರ
Edited By:

Updated on: Feb 12, 2021 | 11:02 PM

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ NCR ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದಲ್ಲದೆ, ಜಮ್ಮು-ಕಾಶ್ಮೀರ, ಲೇಹ್‌, ಅಮೃತಸರದಲ್ಲೂ ಭೂಕಂಪನದ ಅನುಭವವಾಗಿದೆ. ಹರಿಯಾಣ, ರಾಜಸ್ಥಾನದಲ್ಲೂ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದಲ್ಲದೆ, ಉತ್ತರಾಖಂಡ್‌, ನೋಯ್ಡಾದಲ್ಲೂ ಕಂಪನದ ಅನುಭವವಾಗಿದೆ.

ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.1ರಷ್ಟು ದಾಖಲಾಗಿದೆ. ಮಧ್ಯ ಏಷ್ಯಾದಲ್ಲಿರುವ ತಜಕಿಸ್ತಾನ್ ರಾಷ್ಟ್ರ‌ ಭೂಕಂಪನದ ಕೇಂದ್ರ ಬಿಂದುವಾಗಿದೆ ಎಂಬ ಮಾಹಿತಿ ಸಿಕ್ಕಿದೆ. ರಾತ್ರಿ ಸುಮಾರು 10.34ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ.

ಇದನ್ನೂ ಓದಿ: Basanagouda patil Yatnal ಬರೀ ಕುಟುಂಬಸ್ಥರಿಗೆ ಟಿಕೆಟ್​ ಕೊಟ್ರೆ.. ಕಾರ್ಯಕರ್ತರೇನು ಹಮಾಲಿ ಕೆಲಸ ಮಾಡೋಕೆ ಇರೋದಾ? -ಯತ್ನಾಳ್​ ಸವಾಲ್​

Published On - 10:49 pm, Fri, 12 February 21