Basanagouda patil Yatnal ಬರೀ ಕುಟುಂಬಸ್ಥರಿಗೆ ಟಿಕೆಟ್​ ಕೊಟ್ರೆ.. ಕಾರ್ಯಕರ್ತರೇನು ಹಮಾಲಿ ಕೆಲಸ ಮಾಡೋಕೆ ಇರೋದಾ? -ಯತ್ನಾಳ್​ ಸವಾಲ್​

ನಾನು ಕುಟುಂಬ ರಾಜಕಾರಣದ ಹೊರತಾಗಿ ಮಾತಾಡಿದ್ದೇನೆ. ಪಕ್ಷದ ಸೈದ್ಧಾಂತಿಕ ನಿಲುವು ಪರ ನಾನು ಮಾತಾಡಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೇಳಿದರು.

Basanagouda patil Yatnal ಬರೀ ಕುಟುಂಬಸ್ಥರಿಗೆ ಟಿಕೆಟ್​ ಕೊಟ್ರೆ.. ಕಾರ್ಯಕರ್ತರೇನು ಹಮಾಲಿ ಕೆಲಸ ಮಾಡೋಕೆ ಇರೋದಾ? -ಯತ್ನಾಳ್​ ಸವಾಲ್​
ಬಸನಗೌಡ ಪಾಟೀಲ್​ ಯತ್ನಾಳ್
Follow us
KUSHAL V
|

Updated on:Feb 12, 2021 | 9:46 PM

ಬೆಂಗಳೂರು: ನಾನು ಕುಟುಂಬ ರಾಜಕಾರಣದ ಹೊರತಾಗಿ ಮಾತಾಡಿದ್ದೇನೆ. ಪಕ್ಷದ ಸೈದ್ಧಾಂತಿಕ ನಿಲುವು ಪರ ನಾನು ಮಾತಾಡಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೇಳಿದರು. ಜೊತೆಗೆ, ಪ್ರಧಾನಿ ಕುಟುಂಬದಲ್ಲೇ ಕಾರ್ಪೊರೇಷನ್​ ಸೀಟ್​ ಕೊಟ್ಟಿಲ್ಲ. ವಡೋದರದಲ್ಲಿ ಕುಟುಂಬದಲ್ಲಿ ಯಾರಿಗೂ ಟಿಕೆಟ್ ಕೊಟ್ಟಿಲ್ಲ ಎಂದು ಹೇಳಿದರು.

ಒಂದು ಕುಟುಂಬದಲ್ಲಿ ಒಬ್ಬರೇ ರಾಜಕಾರಣದಲ್ಲಿ ಇರಬೇಕು. ಬರೀ ಕುಟುಂಬಸ್ಥರಿಗೆ ಟಿಕೆಟ್​ ಕೊಟ್ರೆ ಉಳಿದವರು ಹಮಾಲಿ ಕೆಲಸ ಮಾಡ್ಬೇಕಾ? ಕಾರ್ಯಕರ್ತರೇನು ಹಮಾಲಿ ಕೆಲಸ ಮಾಡೋಕೆ ಇರೋದಾ? ಎಂದು ಖಾರವಾಗಿ ಪ್ರಶ್ನಿಸಿದರು. ಕೊಡ್ರಿ ಕಾರ್ಯಕರ್ತರಿಗೆ ಟಿಕೆಟ್​ ಎಂದು ಶಾಸಕ ಯತ್ನಾಳ್​ ಗುಡುಗಿದರು. ಕೇವಲ ಮನೆ ಮಕ್ಕಳಿಗೆಲ್ಲಾ ಯಾಕೆ ಟಿಕೆಟ್​ ಕೊಡಬೇಕು? ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ್​ ಯತ್ನಾಳ್​ ಪರೋಕ್ಷ ವಾಗ್ದಾಳಿ ನಡೆಸಿದರು.

‘ಮೂವರು CDಮ್ಯಾನ್​ಗಳು ಸಂಪುಟದಲ್ಲಿದ್ದಾರೆ’ ಯಡಿಯೂರಪ್ಪನವರ ಸಂಪುಟದಲ್ಲಿ ಮೂವರು CDಮ್ಯಾನ್​ಗಳಿದ್ದಾರೆ. ಮೂವರು CD ಮ್ಯಾನ್​ಗಳು ಒಳಗಿದ್ದಾರೆ. ಸಮಯ ನೋಡಿ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ.

‘ಯತ್ನಾಳ್​ಗೆ ನೀಡಿರುವ ನೋಟಿಸ್​ ವಾಪಸ್​ಗೆ ಆಗ್ರಹಿಸುವೆ’ ಇನ್ನು, ಯತ್ನಾಳ್​ಗೆ ನೋಟಿಸ್ ನೀಡಿರುವುದಕ್ಕೆ ತುಮಕೂರಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ. ಹೋರಾಟದಲ್ಲಿ ಪಾಲ್ಗೊಂಡ ಜನಪ್ರತಿನಿಧಿಗಳನ್ನು ಪ್ರತ್ಯಕ್ಷ, ಪರೋಕ್ಷವಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಶಾಸಕ ಯತ್ನಾಳ್​ ಹೋರಾಟಕ್ಕೆ ಚಾಲನೆ ನೀಡಿದ್ದರು. ವಿಧಾನಸಭೆಯಲ್ಲಿ ಮೊದಲ ಬಾರಿಗೆ ಯತ್ನಾಳ್ ಗುಡುಗಿದ್ದರು. ಪಂಚಮಸಾಲಿ, ಹಾಲುಮತ, ವಾಲ್ಮೀಕಿ ಸಮಾಜದ ಹೋರಾಟದ ಬಗ್ಗೆ ಸದನದಲ್ಲಿ ಗುಡುಗಿದ್ದರು ಎಂದು ಶ್ರೀಗಳು ಹೇಳಿದರು.

ಬಿಜೆಪಿ ವರಿಷ್ಠರು ಕೂಡಲೇ ಪರಿಶೀಲಿಸಲು ಮನವಿ ಮಾಡುವೆ. ಯತ್ನಾಳ್​ಗೆ ನೀಡಿರುವ ನೋಟಿಸ್​ ವಾಪಸ್​ಗೆ ಆಗ್ರಹಿಸುವೆ. ಬಿಜೆಪಿಯ ಕೆಲವು ಮುಖಂಡರಿಂದ ಒಳಸಂಚು ನಡೆಯುತ್ತಿದೆ. ನಮ್ಮ ಸಮುದಾಯದ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಯತ್ನಾಳ್, ಕಾಶಪ್ಪನವರ್​​ ಹತ್ತಿಕ್ಕಿದ್ರೆ ಹೋರಾಟ ನಿಲ್ಲುವ ಭ್ರಮೆಯಿದೆ. ಆದರೆ, ಯಾರು ಏನೇ ಮಾಡಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಬೇರೆಯವರ ಮೂಲಕ ಹೇಳಿಕೆ ಕೊಡಿಸುವ ಕೆಲಸ ನಡೀತಿದೆ. ನಮ್ಮ ಹೋರಾಟದ ದಿಕ್ಕು ತಪ್ಪಿಸಲು ಪ್ರಯತ್ನ ನಡೆಯುತ್ತಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಂಚಮಸಾಲಿ ಸಮುದಾಯ ಶಾಸಕ ಯತ್ನಾಳ್​ ಜೊತೆ ಇದೆ. ಅನೇಕ ಸಮುದಾಯದ ಹೋರಾಟದಲ್ಲಿ ಸಚಿವರು ಭಾಗಿಯಾಗಿದ್ದಾರೆ. ಭಾಗಿಯಾಗಿದ್ದವರಿಗೆ ಯಾಕೆ ನೋಟಿಸ್​ ನೀಡಿಲ್ಲವೆಂದು ತುಮಕೂರಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರಶ್ನಿಸಿದರು.

‘ನೋಟಿಸ್ ಹಿಂದೆ ಬಿಜೆಪಿ ಮುಖಂಡರ ಪುತ್ರನ ಕೈವಾಡವಿದೆ’ ನೋಟಿಸ್ ಹಿಂದೆ ಬಿಜೆಪಿ ಮುಖಂಡರ ಪುತ್ರನ ಕೈವಾಡವಿದೆ ಎಂದು ತುಮಕೂರಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಕೂಡಲೇ ಯತ್ನಾಳ್​ಗೆ ನೀಡಿರುವ ನೋಟಿಸ್​ ಹಿಂಪಡೆಯಿರಿ. ನಿಮ್ಮ ಮಾತಿಗೆ ಬೆಲೆ ಕೊಟ್ಟು ಮುತ್ತಿಗೆ ಪ್ರಯತ್ನ ಕೈಬಿಟ್ಟಿದ್ದೇವೆ. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ. ಸಮಾವೇಶದ ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಸಿದ್ಧಗಂಗಾ ಮಠದಲ್ಲಿ ಬಸವ ಜಯಮೃತ್ಯುಂಜಯಶ್ರೀ ಎಚ್ಚರಿಕೆ ಕೊಟ್ಟರು.

ಇದನ್ನೂ ಓದಿ: Basanagouda Patil Yatnal ನಾನು ಬಹಳ ನೋಟಿಸ್​ ನೋಡಿದ್ದೇನೆ, ಇದು ಹೊಸದೇನು ಅಲ್ಲ.. ಅದಕ್ಕೆ ಬೇಕಾದ ಉತ್ತರವನ್ನ ಕೊಡ್ತೇನೆ -ನೋಟಿಸ್​ಗೆ ಯತ್ನಾಳ ಪ್ರತ್ಯುತ್ತರ

Published On - 8:50 pm, Fri, 12 February 21

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್