ಮೇಘಾಲಯ: ಮೇಘಾಲಯದ ಪಶ್ಚಿಮ ಖಾಸಿ ಬೆಟ್ಟಗಳಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಲಘು ಭೂಕಂಪನ (Earthquake) ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 3.6ರಷ್ಟು ಕಂಪನದ ತೀವ್ರತೆ ದಾಖಲು ಆಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ದಿಂದ 10 ಕಿ.ಮೀ ದೂರದಲ್ಲಿ ಭೂಕಂಪನ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯ ಇದುವರೆಗೂ ಯಾವುದೇ ಪ್ರಾಣ ಹಾನಿ ಬಗ್ಗೆ ವರದಿಯಾಗಿಲ್ಲ. ಮೇ 22 ರಂದು ನೆರೆಯ ದೇಶ ಮ್ಯಾನ್ಮಾರ್ನಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲಾಗಿತ್ತು.
ಮ್ಯಾನ್ಮಾರ್ನಲ್ಲಿ ಬೆಳಿಗ್ಗೆ 8:15 ರ ಸುಮಾರಿಗೆ ಭೂಕಂಪ ಸಂಭವಿಸಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ ಮಾಡಿತ್ತು. ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿರಲಿಲ್ಲ.
Meghalaya: Earthquake of magnitude 3.6 jolts West Khasi Hills
Read @ANI Story | https://t.co/aboIJ2UrV8#Meghalaya #Earthquake #WestKhasiHills pic.twitter.com/YJIJLqqVoz
— ANI Digital (@ani_digital) May 28, 2023
ಇದನ್ನೂ ಓದಿ: Jammu and Kashmir Earthquake: ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪ, 4.9 ತೀವ್ರತೆ ದಾಖಲು
ಭಾನುವಾರ ಬೆಳಗ್ಗೆ 10.19ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 4.9ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಅಫ್ಘಾನಿಸ್ತಾನದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ಹಾಗೆಯೇ ದೆಹಲಿ, ಎನ್ಸಿಆರ್ ಹಾಗೂ ಪಂಜಾಬ್ ಹರ್ಯಾಣ ಭಾಗಗಳಲ್ಲೂ ಭೂಮಿ ಕಂಪಿಸಿದೆ. ಭೂಕಂಪದ ಕೇಂದ್ರ ಬಿಂದು ಅಫ್ಘಾನಿಸ್ತಾನದ ತಜಿಖಿಸ್ತಾನದ ಗಡಿಯಲ್ಲಿದೆ.
ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಕ್ರಮವಾಗಿ ಸಂಜೆ 5:15 ಮತ್ತು 5:28 ಕ್ಕೆ ರಿಕ್ಟರ್ ಮಾಪಕದಲ್ಲಿ 3.5 ಮತ್ತು 3.3 ರ ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿವೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಹೇಳಿದೆ.ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಹೊರತಾಗಿ, ಪಾಲ್ಘರ್ ಜಿಲ್ಲಾಧಿಕಾರಿಗಳ ಕಚೇರಿ ಕೂಡಾ ಭೂಕಂಪ ವರದಿಯನ್ನು ದೃಢಪಡಿಸಿದೆ. ಇದುವರೆಗೆ ಯಾವುದೇ ಹಾನಿ ವರದಿಯಾಗಿಲ್ಲ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:40 pm, Sun, 28 May 23