New Parliament Building: ಹೊಸ ಸಂಸತ್ ಕಟ್ಟಡದ ಉದ್ಘಾಟನೆ ಬಳಿಕ ಅಭಿನಂದನೆ ತಿಳಿಸಿದ ಶಾರುಖ್ ಖಾನ್; ನರೇಂದ್ರ ಮೋದಿ ಪ್ರತಿಕ್ರಿಯೆ ಏನು?
Narendra Modi: ಈ ಕಟ್ಟಡದ ವಿಶೇಷತೆ ಮತ್ತು ವೈಭವವನ್ನು ವಿವರಿಸುವ ಒಂದು ವಿಡಿಯೋವನ್ನು ಶಾರುಖ್ ಖಾನ್ ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರದ್ದೇ ಹಿನ್ನೆಲೆ ಧ್ವನಿ ಇದೆ.
ದೆಹಲಿಯಲ್ಲಿ ಇಂದು (ಮೇ 28) ಸಂಸತ್ನ ಹೊಸ ಕಟ್ಟಡ (New Parliament Building) ಉದ್ಘಾಟನೆಗೊಂಡಿದೆ. ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಪುರೋಹಿತರು ಮತ್ತು ಇತರೆ ಗಣ್ಯರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಉದ್ಘಾಟನೆಗೊಂಡ ಈ ಕಟ್ಟಡದ ವಿಶೇಷತೆ ಮತ್ತು ವೈಭವವನ್ನು ವಿವರಿಸುವ ಒಂದು ವಿಡಿಯೋವನ್ನು ಶಾರುಖ್ ಖಾನ್ (Shah Rukh Khan) ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರದ್ದೇ ಹಿನ್ನೆಲೆ ಧ್ವನಿ ಇದೆ. ಟ್ವಿಟರ್ನಲ್ಲಿ ಇದನ್ನು ಶೇರ್ ಮಾಡಿಕೊಂಡಿರುವ ಅವರು ಅಭಿನಂದನೆ ತಿಳಿಸಿದ್ದಾರೆ. ಅದಕ್ಕೆ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ.
‘ಸಂವಿಧಾನವನ್ನು ಎತ್ತಿ ಹಿಡಿಯುವ, ಪ್ರತಿಯೊಬ್ಬ ಪ್ರಜೆಯನ್ನೂ ಪ್ರತಿನಿಧಿಸುವ, ಭಾರತದ ವೈವಿಧ್ಯತೆಯನ್ನು ಕಾಪಾಡುವ ವೈಭವದ ಕಟ್ಟಡ. ಹೊಸ ಭಾರತಕ್ಕೆ ಹೊಸ ಪಾರ್ಲಿಮೆಂಟ್ ಕಟ್ಟಡ’ ಎಂದು ಶಾರುಖ್ ಖಾನ್ ಅವರು ಬಣ್ಣಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮೋದಿ ಅವರು, ‘ಸುಂದರವಾಗಿ ವಿವರಿಸಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ. ‘ಪಾರ್ಲಿಮೆಂಟ್ನ ಈ ಹೊಸ ಕಟ್ಟಡವು ಪ್ರಜಾಪ್ರಭುತ್ವದ ಶಕ್ತಿ ಮತ್ತು ಪ್ರಗತಿಯ ಸಂಕೇತವಾಗಿದೆ. ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಲನ ಇದರಲ್ಲಿ ಆಗಿದೆ’ ಎಂದು ನರೇಂದ್ರ ಮೋದಿ ಪೋಸ್ಟ್ ಮಾಡಿದ್ದಾರೆ.
Beautifully expressed!
The new Parliament building is a symbol of democratic strength and progress. It blends tradition with modernity. #MyParliamentMyPride https://t.co/Z1K1nyjA1X
— Narendra Modi (@narendramodi) May 27, 2023
ಹೊಸ ಸಂಸತ್ ಕಟ್ಟಡದ ಬಗ್ಗೆ ನಟ ಅಕ್ಷಯ್ ಕುಮಾರ್ ಕೂಡ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಸಂಸತ್ತಿನ ಈ ವೈಭವದ ಹೊಸ ಕಟ್ಟಡವನ್ನು ನೋಡಿ ಹೆಮ್ಮೆಪಡುತ್ತೇನೆ. ಇದು ಎಂದೆಂದಿಗೂ ಭಾರತದ ಬೆಳವಣಿಗೆಯ ಕಥೆಯ ಪ್ರತೀಕವಾಗಲಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
You have conveyed your thoughts very well.
Our new Parliament is truly a beacon of our democracy. It reflects the nation’s rich heritage and the vibrant aspirations for the future. #MyParliamentMyPride https://t.co/oHgwsdLLli
— Narendra Modi (@narendramodi) May 27, 2023
ಅಕ್ಷಯ್ ಕುಮಾರ್ ಅವರ ಟ್ವೀಟ್ಗೂ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ‘ನಿಮ್ಮ ಆಲೋಚನೆಯನ್ನು ನೀವು ತುಂಬ ಚೆನ್ನಾಗಿ ಅಭಿವ್ಯಕ್ತಿಸಿದ್ದೀರಿ. ನಮ್ಮ ಹೊಸ ಸಂಸತ್ ಕಟ್ಟಡವು ನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ದಾರಿದೀಪವಾಗಿದೆ. ಇದು ರಾಷ್ಟ್ರದ ಶ್ರೀಮಂತ ಪರಂಪರೆ ಮತ್ತು ಭವಿಷ್ಯದ ರೋಮಾಂಚಕ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ’ ಎಂದು ಮೋದಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:14 pm, Sun, 28 May 23