ಮನ್​ ಕಿ ಬಾತ್​ನಲ್ಲಿ ಎನ್​ಟಿಆರ್ ಹಿರಿಮೆ ನೆನೆದ ಪ್ರಧಾನಿ ನರೇಂದ್ರ ಮೋದಿ

Narendra Modi-NTR: ತೆಲುಗು ಚಿತ್ರರಂಗದ ದಂತಕತೆ, ಮಾಜಿ ಸಿಎಂ ಎನ್​ಟಿಆರ್ ಜನ್ಮ ಶತಮಾನೋತ್ಸವ ಸಂದರ್ಭ, ಮನ್ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ, ಎನ್​ಟಿಆರ್ ಅವರನ್ನು ನೆನಪು ಮಾಡಿಕೊಂಡರು.

ಮನ್​ ಕಿ ಬಾತ್​ನಲ್ಲಿ ಎನ್​ಟಿಆರ್ ಹಿರಿಮೆ ನೆನೆದ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ-ಎನ್​ಟಿಆರ್
Follow us
|

Updated on: May 28, 2023 | 2:59 PM

ಕೆಲವು ನಟರಿದ್ದಾರೆ, ಆ ನಟರನ್ನು ಹೊರತುಪಡಿಸಿದರೆ ಆಯಾ ಭಾಷೆಯ ಚಿತ್ರರಂಗವನ್ನು ಕಲ್ಪಿಸಿಕೊಳ್ಳಲು ಸಹ ಸಾಧ್ಯಾವಾಗುವುದಿಲ್ಲ. ಕನ್ನಡದಲ್ಲಿ ಡಾ ರಾಜ್​ಕುಮಾರ್ (Dr Rajkumar), ತಮಿಳಿನಲ್ಲಿ ಎಂಜಿಆರ್, ಶಿವಾಜಿ ಗಣೇಶನ್, ಹಿಂದಿಯಲ್ಲಿ ರಾಜ್ ಕಪೂರ್ (Raj Kapoor), ದಿಲೀಪ್ ಕುಮಾರ್ ಹಾಗೆಯೇ ತೆಲುಗಿನಲ್ಲಿ ಎನ್​ಟಿಆರ್. ತೆಲುಗಿನಲ್ಲಿ ಸಿನಿಮಾ ಸಂಸ್ಕೃತಿ ಆರಂಭವಾದಾಗಿನಿಂದಲೂ ಎನ್​ಟಿಆರ್ (NTR) ಆ ಚಿತ್ರರಂಗದ ಟಾಪ್ ನಟರಾಗಿದ್ದಾರೆ. ಸಿನಿಮಾ ಮೂಲಕ ತೆಲುಗು ಸಂಸ್ಕೃತಿಗೆ ಅವರ ಕಾಣ್ಕೆ ದೊಡ್ಡದು ಮಾತ್ರವಲ್ಲದೆ, ತೆಲುಗುದೇಸಂ ಪಾರ್ಟಿ (ಟಿಡಿಪಿ) ರಾಜಕೀಯ ಪಕ್ಷ ಸ್ಥಾಪಿಸಿ ರಾಜ್ಯದ ಸಿಎಂ ಆಗಿ ನೆನಪುಳಿವ ಆಡಳಿತವನ್ನು ನೀಡಿದ್ದಾರೆ. ತೆಲುಗು ರಾಜ್ಯಗಳಲ್ಲಿ ‘ಕಾರಣ ಜನ್ಮಡು’ ಎಂದೇ ಕರೆಸಿಕೊಳ್ಳುವ ಎನ್​ಟಿಆರ್ ಅವರ ನೂರನೇ ಜಯಂತಿ ಇಂದು (ಮೇ 28). ಇದೇ ಕಾರಣಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಸಹ ತಮ್ಮ ಮನ್​ ಕಿ ಬಾತ್​ನಲ್ಲಿ ಎನ್​ಟಿಆರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

ಮನ್ ಕಿ ಬಾತ್​ನಲ್ಲಿ ಎನ್​ಟಿಆರ್ ಅನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ”ಮಹಾನ್ ವ್ಯಕ್ತಿತ್ವ ಎನ್.ಟಿ ರಾಮರಾವ್, ಎಲ್ಲರಿಗೂ ಎನ್​ಟಿಆರ್ ಎಂದೇ ಅವರು ಚಿರಪರಿಚಿತರು. ಇಂದು (ಮೇ 28) ಎನ್‌ಟಿಆರ್‌ ಅವರ 100ನೇ ಜನ್ಮದಿನ. ಅವರ ಬಹುಮುಖ ಪ್ರತಿಭೆಯ ಬಲದಿಂದ ಅವರು ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಆಗಿದ್ದಲ್ಲದೆ ಕೋಟ್ಯಂತರ ಜನರ ಹೃದಯವನ್ನೂ ಗೆದ್ದರು. ಅವರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮ್ಮ ನಟನಾ ಜೀವನದಲ್ಲಿ ಅನೇಕ ಐತಿಹಾಸಿಕ ಪಾತ್ರಗಳಲ್ಲಿ ನಟಿಸಿ ಇತಿಹಾಸವನ್ನು ಪುನರುಜ್ಜೀವನಗೊಳಿಸಿದರು. ಭಗವಾನ್ ಕೃಷ್ಣ, ರಾಮ ಮತ್ತು ಇತರ ಅನೇಕ ಪೌರಾಣಿಕ ಪಾತ್ರಗಳಲ್ಲಿ ಎನ್ಟಿಆರ್ ನಟಿಸಿದ್ದರು, ಅವರ ಈ ಪಾತ್ರಗಳನ್ನು ಜನರು ಬಹಳ ಇಷ್ಟಪಟ್ಟಿದ್ದಾರೆ. ಇಂದಿಗೂ ಅದೇ ಪಾತ್ರಗಳ ಮೂಲಕ ಅವರನ್ನು ನೆನಪಿಸಿಕೊಳ್ಳುತ್ತಾರೆ. ಎಂದರು.

ಮುಂದುವರೆದು, ”ಎನ್‌ಟಿಆರ್ ಅವರು ಸಿನಿಮಾ ಪ್ರಪಂಚದಲ್ಲಿ ಹಾಗೂ ರಾಜಕೀಯದಲ್ಲಿ ತಮ್ಮದೇ ಆದ ಗುರುತನ್ನು ರೂಪಿಸಿಕೊಂಡವರು. ಎರಡೂ ಕ್ಷೇತ್ರಗಳಲ್ಲಿ ಜನರಿಂದ ಅಪಾರ ಪ್ರೀತಿ, ಆಶೀರ್ವಾದ ಪಡೆದರು. ದೇಶ ಮತ್ತು ವಿಶ್ವದ ಕೋಟ್ಯಂತರ ಜನರ ಹೃದಯವನ್ನು ಆಳಿದ ಎನ್ ಟಿ ರಾಮರಾವ್ ಅವರಿಗೆ ನನ್ನ ನಮ್ರ ನಮನಗಳನ್ನು ಅರ್ಪಿಸುತ್ತೇನೆ” ಎಂದರು ಮೋದಿ.

ಇಂದು (ಮೇ 28) ಸಾವರ್ಕರ್ ಅವರ ಜನ್ಮಜಯಂತಿಯೂ ಆಗಿದ್ದು, ಮನ್ ಕೀ ಬಾತ್​ನಲ್ಲಿ ಎನ್​ಟಿಆರ್ ಗೂ ಮುನ್ನ ಸಾವರ್ಕರ್ ಬಗ್ಗೆ ನರೇಂದ್ರ ಮೋದಿ ಮಾತನಾಡಿ, ”ಇಂದು ಭಾರತದ ಅತ್ಯುನ್ನತ ಸ್ವಾತಂತ್ರ್ಯ ಸೇನಾನಿಗಳಲ್ಲಿ ಒಬ್ಬರಾಗಿರುವ ವೀರ ಸಾವರ್ಕರ್ ಅವರ ಜಯಂತಿಯೂ ಹೌದು. ಅವರ ತ್ಯಾಗ, ಧೈರ್ಯ ಮತ್ತು ಸಂಕಲ್ಪಕ್ಕೆ ಸಂಬಂಧಿಸಿದ ಕಥೆಗಳು ನಮಗೆಲ್ಲರಿಗೂ ಇಂದಿಗೂ ಸ್ಫೂರ್ತಿ ನೀಡುತ್ತವೆ. ವೀರ್ ಸಾವರ್ಕರ್ ಕಾಲಾಪಾನಿ ಶಿಕ್ಷೆಗೆ ಒಳಗಾದ ಅಂಡಮಾನ್‌ನ ಸೆಲ್‌ಗೆ ಹೋದ ದಿನವನ್ನು ನಾನು ಮರೆಯಲು ಸಾಧ್ಯವಿಲ್ಲ” ಎಂದಿದ್ದಾರೆ ಮೋದಿ.

ಇನ್ನು ಎನ್​ಟಿಆರ್ ಜನ್ಮಶತಮಾನೋತ್ಸವವನ್ನು ಅವರ ಕುಟುಂಬ ಸದಸ್ಯರು, ಅವರ ಅಭಿಮಾನಿಗಳು ಬಹು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ನಂದಮೂರಿ ಕುಟುಂಬದಿಂದ ಈಗಾಗಲೇ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಂಧ್ರ ಹಾಗೂ ತೆಲಂಗಾಣ ಸರ್ಕಾರಗಳು ಸಹ ಎನ್​ಟಿಆರ್ ಜನ್ಮಶತಮಾನೋತ್ಸವ ನಿಮಿತ್ತ ಕಾರ್ಯಕ್ರಮಗಳನ್ನು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಪ್ಪಿದ ಭಾರೀ ದುರಂತ; ಮಾಲ್ವಾ ಎಕ್ಸ್‌ಪ್ರೆಸ್‌ ಕೋಚ್‌ನಲ್ಲಿ ತುಂಬಿದ ಹೊಗೆ
ತಪ್ಪಿದ ಭಾರೀ ದುರಂತ; ಮಾಲ್ವಾ ಎಕ್ಸ್‌ಪ್ರೆಸ್‌ ಕೋಚ್‌ನಲ್ಲಿ ತುಂಬಿದ ಹೊಗೆ
ಮನೆಯೆದುರು ಮೂತ್ರ ಮಾಡಿದವನಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ವೈರಲ್
ಮನೆಯೆದುರು ಮೂತ್ರ ಮಾಡಿದವನಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ವೈರಲ್
ಚದುರಂಗದ ಚತುರರನ್ನ ಭೇಟಿಯಾದ ಪ್ರಧಾನಿ ಮೋದಿ; ವಿಡಿಯೋ ನೋಡಿ
ಚದುರಂಗದ ಚತುರರನ್ನ ಭೇಟಿಯಾದ ಪ್ರಧಾನಿ ಮೋದಿ; ವಿಡಿಯೋ ನೋಡಿ
ಕಾಶ್ಮೀರಿ ಪಂಡಿತರಿಗೆ ಬಾಯ್ತಪ್ಪಿ ಪಿಓಕೆ ನಿರಾಶ್ರಿತರು ಎಂದ ರಾಹುಲ್ ಗಾಂಧಿ
ಕಾಶ್ಮೀರಿ ಪಂಡಿತರಿಗೆ ಬಾಯ್ತಪ್ಪಿ ಪಿಓಕೆ ನಿರಾಶ್ರಿತರು ಎಂದ ರಾಹುಲ್ ಗಾಂಧಿ
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ