AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tarak Ponnappa: ಜೂ. ಎನ್​ಟಿಆರ್ ‘ದೇವರ’ ಚಿತ್ರದಲ್ಲಿ ‘ಕೆಜಿಎಫ್​’ ಕಲಾವಿದ ತಾರಕ್ ಪೊನ್ನಪ್ಪ; ಪ್ರಮುಖ ಪಾತ್ರದಲ್ಲಿ ಕನ್ನಡಿಗ

‘ದೇವರ’ ಚಿತ್ರಕ್ಕೆ ಈಗಾಗಲೇ ಒಂದು ವಾರಗಳ ಕಾಲ ಶೂಟಿಂಗ್ ನಡೆದಿದ್ದು, ಅದರಲ್ಲಿ ತಾರಕ್ ಭಾಗಿ ಆಗಿದ್ದರು. ಹೈದರಾಬಾದ್​ನಲ್ಲಿ ಶೂಟಿಂಗ್ ನಡೆದಿದೆ.

Tarak Ponnappa: ಜೂ. ಎನ್​ಟಿಆರ್ ‘ದೇವರ’ ಚಿತ್ರದಲ್ಲಿ ‘ಕೆಜಿಎಫ್​’ ಕಲಾವಿದ ತಾರಕ್ ಪೊನ್ನಪ್ಪ; ಪ್ರಮುಖ ಪಾತ್ರದಲ್ಲಿ ಕನ್ನಡಿಗ
ತಾರಕ್ ಪೊನ್ನಪ್ಪ-ಜೂನಿಯರ್ ಎನ್​ಟಿಆರ್
TV9 Web
| Edited By: |

Updated on: May 27, 2023 | 10:34 AM

Share

‘ಕೆಜಿಎಫ್’ ಸಿನಿಮಾದಿಂದ (KGF Movie) ಹಲವು ಕಲಾವಿದರಿಗೆ ಅವಕಾಶ ಹರಿದು ಬಂದಿದೆ. ಇದು ಪ್ಯಾನ್​ ಇಂಡಿಯಾ ಸಿನಿಮಾ ಆಗಿರೋದರಿಂದ ಕನ್ನಡ ಕಲಾವಿದರಿಗೆ ಪರಭಾಷೆಯಿಂದಲೂ ಆಫರ್​ಗಳು ಹರಿದು ಬರುತ್ತಿವೆ. ‘ಕೆಜಿಎಫ್​’ ಚಿತ್ರದಲ್ಲಿ ದಯಾ ಪಾತ್ರ ಮಾಡಿದ್ದ ತಾರಕ್ ಪೊನ್ನಪ್ಪ ಅವರಿಗೆ ಈಗ ಜೂನಿಯರ್ ಎನ್​ಟಿಆರ್ ಚಿತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿದೆ. ‘ದೇವರ’ ಸಿನಿಮಾದಲ್ಲಿ (Devara Movie) ತಾರಕ್ ಪೊನ್ನಪ್ಪ ಪ್ರಮುಖ ಪಾತ್ರ ಒಂದನ್ನು ಮಾಡುತ್ತಿದ್ದಾರೆ. ಈ ವಿಚಾರವನ್ನು ಅವರು ರಿವೀಲ್ ಮಾಡಿದ್ದಾರೆ.

ವಿಶೇಷ ಎಂದರೆ ಈಗಾಗಲೇ ಒಂದು ವಾರಗಳ ಕಾಲ ಶೂಟಿಂಗ್ ನಡೆದಿದ್ದು, ಅದರಲ್ಲಿ ತಾರಕ್ ಭಾಗಿ ಆಗಿದ್ದರು. ಹೈದರಾಬಾದ್​ನಲ್ಲಿ ಶೂಟಿಂಗ್ ನಡೆದಿದೆ. ಮುಂದಿನ ಹಂತದ ಶೂಟಿಂಗ್​ ಶೀಘ್ರವೇ ಆರಂಭ ಆಗಲಿದ್ದು, ಅದರಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ. ಇ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ತಾರಕ್ ಪೊನ್ನಪ್ಪ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ.

‘ನಾನು ದೇವರ ಚಿತ್ರಕ್ಕೆ ಆಡಿಷನ್ ಕೊಟ್ಟೆ. ನನ್ನದು ಪ್ರಮುಖ ಪಾತ್ರ. ಸಿನಿಮಾದ ಸೆಟ್​ಗಳು ಅದ್ಭುತವಾಗಿವೆ. ಪ್ರೀ-ಪ್ರೊಡಕ್ಷನ್ ಕೆಲಸಕ್ಕೆ ಅವರು ಹೆಚ್ಚು ಸಮಯ ಮೀಸಲಿಟ್ಟಿದ್ದಾರೆ. ಸೆಟ್​ಗಳ ನಿರ್ಮಾಣಕ್ಕೆ ಸಾಕಷ್ಟು ಶ್ರಮ ಹಾಕಲಾಗಿದೆ’ ಎಂದು ತಾರಕ್ ಪೊನ್ನಪ್ಪ ಹೇಳಿದ್ದಾರೆ.

‘ದೇವರ’ ಸಿನಿಮಾ ಸೆಟ್​ನಲ್ಲಿ ಜೂನಿಯರ್ ಎನ್​ಟಿಆರ್ ಹಾಗೂ ಚಿತ್ರದ ವಿಲನ್ ಸೈಫ್ ಅಲಿ ಖಾನ್​ನ ಭೇಟಿ ಮಾಡೋ ಅವಕಾಶ ತಾರಕ್​ಗೆ ಸಿಕ್ಕಿದೆ. ‘ಕೆಜಿಎಫ್​’ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ‘ದೇವರ’ ಸೆಟ್​ಗೆ ಭೇಟಿ ನೀಡಿದ್ದರು. ಅವರನ್ನು ಭೇಟಿ ಮಾಡಿ ತಾರಕ್​ಗೆ ಖುಷಿ ಆಗಿದೆ.

ಇದನ್ನೂ ಓದಿ: NTR 30: ಜೂನಿಯರ್​ ಎನ್​ಟಿಆರ್​ 30ನೇ ಚಿತ್ರಕ್ಕೆ ಮುಹೂರ್ತ; ಇಲ್ಲಿದೆ ಫೋಟೋ ಗ್ಯಾಲರಿ

‘ದೇವರ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಕೊರಟಾಲ ಶಿವ ಅವರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸೈಫ್ ಅಲಿ ಖಾನ್ ಚಿತ್ರದ ವಿಲನ್ ಆದರೆ, ಜಾನ್ವಿ ಕಪೂರ್ ಅವರು ಚಿತ್ರಕ್ಕೆ ನಾಯಕಿ. ‘ಆರ್​ಆರ್​ಆರ್​’ ರಿಲೀಸ್ ಆದ ಬಳಿಕ ಜೂನಿಯರ್ ಎನ್​ಟಿಆರ್ ಅವರು ಒಂದು ವರ್ಷ ಬ್ರೇಕ್ ತೆಗೆದುಕೊಂಡಿದ್ದರು. ಈಗ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ