‘ನನ್ನಿಂದ ಅವರು ಗೆದ್ರು ಎಂದು ಯಾವಾಗಲೂ ಹೇಳಲ್ಲ’; ನೇರವಾಗಿ ಉತ್ತರಿಸಿದ ಶಿವಣ್ಣ
ಬಾಮೈದ ಮಧು ಬಂಗಾರಪ್ಪಗೆ ಸಚಿವ ಸ್ಥಾನ ಸಿಕ್ಕಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಅವರು ಸಚಿವರಾಗಿ ಸೇವೆ ಸಲ್ಲಿಸಲಿದ್ದಾರೆ. ಈ ವಿಚಾರ ಶಿವರಾಜ್ಕುಮಾರ್ಗೆ ಖುಷಿ ನೀಡಿದೆ.
ಶಿವರಾಜ್ಕುಮಾರ್ (Shivarajkumar) ಅವರು ಸಾಕಷ್ಟು ಖುಷಿಯಲ್ಲಿದ್ದಾರೆ. ಅವರ ಸಂಬಂಧಿಗಳಾದ ಮಧು ಬಂಗಾರಪ್ಪ ಹಾಗೂ ಭೀಮಣ್ಣ ನಾಯ್ಕ್ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ಈ ಪೈಕಿ ಬಾಮೈದ ಮಧು ಬಂಗಾರಪ್ಪಗೆ ಸಚಿವ ಸ್ಥಾನ ಸಿಕ್ಕಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಅವರು ಸಚಿವರಾಗಿ ಸೇವೆ ಸಲ್ಲಿಸಲಿದ್ದಾರೆ. ಈ ವಿಚಾರ ಶಿವರಾಜ್ಕುಮಾರ್ಗೆ ಖುಷಿ ನೀಡಿದೆ. ಈ ಬಗ್ಗೆ ಮಧು ಬಂಗಾರಪ್ಪ (Madhu Bangarappa), ಶಿವಣ್ಣ ಹಾಗೂ ಗೀತಕ್ಕ ಒಟ್ಟಾಗಿ ಬಂದು ಟಿವಿ9 ಕನ್ನಡದ ಜೊತೆ ಖುಷಿ ಹಂಚಿಕೊಂಡರು.
‘ಹಾರ್ಡ್ ವರ್ಕ್ಗೆ ಪ್ರತಿಫಲ ಸಿಕ್ಕಿದೆ. ತುಂಬಾನೇ ಖುಷಿ ಆಗುತ್ತಿದೆ’ ಎಂದರು ಶಿವರಾಜ್ಕುಮಾರ್. ಇದೇ ವೇಳೆ ಮಾತನಾಡಿದ ಗೀತಾ ಶಿರವಾಜ್ಕುಮಾರ್ ಅವರು, ‘ತೋರಿಸಿಕೊಳ್ಳಲು ಆಗದೇ ಇರುವಷ್ಟು ಖುಷಿ ಆಗಿದೆ. ಮಧು ತುಂಬಾನೇ ಕಷ್ಟಪಟ್ಟಿದ್ದಾನೆ. ಹೇಳಿಕೊಳ್ಳೋಕೆ ಆಗಲ್ಲ’ ಎಂದರು.
ಇವರ ಜೊತೆ ಇದ್ದ ಮಧು ಬಂಗಾರಪ್ಪ ಕೂಡ ಖುಷಿ ಹೊರಹಾಕಿದರು. ‘ಯಾವ ಸಚಿವ ಸ್ಥಾನ ಕೊಟ್ಟರೂ ಖುಷಿ ಇದೆ. ನನಗೆ ಅವಕಾಶ ನೀಡಿದ ಕರ್ನಾಟಕದ ಜನತೆಗೆ ಧನ್ಯವಾದ. ಅನೇಕರು ಗೆಲ್ಲೋಕೆ ಶಿವಣ್ಣ ಕಾರಣ. ಅವರಿಗೆ ತುಂಬು ಹೃದಯದ ಧನ್ಯವಾದ’ ಎಂದರು. ಈ ಮಾತನ್ನು ಕೇಳುತ್ತಿದ್ದಂತೆ ಶಿವಣ್ಣ ತಮ್ಮ ಅಭಿಪ್ರಾಯ ಹೊರಹಾಕಿದರು.
ಇದನ್ನೂ ಓದಿ: ಕಾರ್ ಡ್ರೈವ್ ಮಾಡಿ ತೆರಳಿದ ಶಿವರಾಜ್ಕುಮಾರ್; ಅವರು ಇಷ್ಟೆಲ್ಲ ಮಾಡಿದ್ದು ಯಾರಿಗೆ?
‘ಅವರವರ ಕೆಲಸವನ್ನು ಅವರು ಮಾಡಿದ್ದಾರೆ. ನನ್ನಿಂದ ಗೆದ್ದಿದ್ದಾರೆ ಅಂತಲ್ಲ. ನಾನು ಹೋಗಿ ಅಳಿಲು ಸೇವೆ ಮಾಡಿದ್ದೇನೆ ಅಷ್ಟೆ. ನನ್ನಿಂದಲೇ ಅವರು ಗೆದ್ದರು ಅನ್ನೋದು ಸರಿ ಅಲ್ಲ. ಮಧು ಬಂಗಾರಪ್ಪ ಅವರಿಗೆ ಅಧಿಕಾರ ಇಲ್ಲದೇ ಇರುವಾಗಲೇ ಕೆಲಸ ಮಾಡಿದ್ದರು. ಹೀಗಿರುವಾಗ ಅಧಿಕಾರ ಸಿಕ್ಕರೆ ಅವರು ಖಂಡಿತ ಕೆಲಸ ಮಾಡುತ್ತಾರೆ. ಅವರಿಗೆ ಸಹಾಯ ಮಾಡುವ ಮನೋಭಾವನೆ ಇದೆ. ಆ ಭಾವನೆ ಇದ್ರೆ ಮಾತ್ರ ಕೆಲಸ ಮಾಡೋಕೆ ಆಗೋದು’ ಎಂದರು ಶಿವಣ್ಣ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ