NTR 30: ಜೂನಿಯರ್ ಎನ್ಟಿಆರ್ 30ನೇ ಚಿತ್ರಕ್ಕೆ ಮುಹೂರ್ತ; ಇಲ್ಲಿದೆ ಫೋಟೋ ಗ್ಯಾಲರಿ
Jr NTR | Janhvi Kapoor: ‘ಎನ್ಟಿಆರ್ 30’ ಚಿತ್ರದ ಮುಹೂರ್ತಕ್ಕೆ ಅನೇಕ ಗಣ್ಯರು ಆಗಮಿಸಿದ್ದರು. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ.
Updated on: Mar 23, 2023 | 7:10 PM

ನಟ ಜೂನಿಯರ್ ಎನ್ಟಿಆರ್ ಅವರ 30ನೇ ಸಿನಿಮಾ ಸೆಟ್ಟೇರಿದೆ. ಈ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ಮಾಡಲಾಗಿದೆ. ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ‘ಎನ್ಟಿಆರ್ 30’ ಎಂದು ತಾತ್ಕಾಲಿಕವಾಗಿ ಕರೆಯಲಾಗುತ್ತಿದೆ.

‘ಎನ್ಟಿಆರ್ 30’ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಮತ್ತು ಜಾನ್ವಿ ಕಪೂರ್ ಅವರು ಜೋಡಿಯಾಗಿ ನಟಿಸಲಿದ್ದಾರೆ. ಇಬ್ಬರ ಕಾಂಬಿನೇಷನ್ ಹೇಗೆ ಮೂಡಿಬರಲಿದೆ ಎಂಬ ಕೌತುಕ ಅಭಿಮಾನಿಗಳಿಗಿದೆ.

ಜಾನ್ವಿ ಕಪೂರ್ ಅವರಿಗೆ ಇದು ಮೊದಲ ತೆಲುಗು ಸಿನಿಮಾ. ಈ ಮೂಲಕ ಅವರು ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಇಂಥ ಅವಕಾಶ ಸಿಕ್ಕಿದ್ದಕ್ಕೆ ಅವರಿಗೆ ಬಹಳ ಖುಷಿ ಇದೆ. ‘ಇದು ಸಂತಸದ ದಿನ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.

‘ಎನ್ಟಿಆರ್ 30’ ಚಿತ್ರದ ಮುಹೂರ್ತಕ್ಕೆ ಅನೇಕ ಗಣ್ಯರು ಆಗಮಿಸಿದ್ದರು. ಖ್ಯಾತ ನಿರ್ದೇಶಕರಾದ ರಾಜಮೌಳಿ, ಪ್ರಶಾಂತ್ ನೀಲ್ ಮುಂತಾದವರು ಬಂದು ಶುಭ ಕೋರಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ.

‘ಆರ್ಆರ್ಆರ್’ ಸಿನಿಮಾದ ಗೆಲುವಿನ ಬಳಿಕ ಜೂನಿಯರ್ ಎನ್ಟಿಆರ್ ಅವರ ಖ್ಯಾತಿ ಹೆಚ್ಚಾಗಿದೆ. ಅವರು ನಟಿಸಲಿರುವ ಹೊಸ ಸಿನಿಮಾಗಳು ಮೇಲೆ ಹೈಪ್ ಕ್ರಿಯೇಟ್ ಆಗಿದೆ. ‘ಎನ್ಟಿಆರ್ 30’ ಚಿತ್ರಕ್ಕೆ ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ.
























