AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India’s next match schedule: ಭಾರತದ ಮುಂದಿನ ಎದುರಾಳಿ ಕೂಡ ಆಸ್ಟ್ರೇಲಿಯಾ: ಇಲ್ಲಿದೆ ವೇಳಾಪಟ್ಟಿ

India's next match schedule 2023: ಮಾರ್ಚ್ 31 ರಿಂದ ಐಪಿಎಲ್ ಶುರುವಾಗಲಿದ್ದು, ಮೇ ಅಂತ್ಯಕ್ಕೆ ಟೂರ್ನಿ ಮುಗಿಯಲಿದೆ. ಅಂದರೆ ಮುಂದಿನ 2 ತಿಂಗಳುಗಳ ಕಾಲ ಟೀಮ್ ಇಂಡಿಯಾ ಯಾವುದೇ ಸರಣಿ ಆಡುತ್ತಿಲ್ಲ.

TV9 Web
| Edited By: |

Updated on: Mar 23, 2023 | 7:10 PM

Share
ಭಾರತ-ಅಸ್ಟ್ರೇಲಿಯಾ ನಡುವಣ ಸರಣಿ ಮುಕ್ತಾಯಗೊಂಡಿದೆ. 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 2-1 ಅಂತದಿಂದ ಜಯಿಸಿದರೆ, 3 ಪಂದ್ಯಗಳ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ 2-1 ಅಂತರದಿಂದ ಗೆದ್ದುಕೊಂಡಿದೆ. ಇದೀಗ ಟೀಮ್ ಇಂಡಿಯಾ ಆಟಗಾರರು ಐಪಿಎಲ್​ಗಾಗಿ ಸಜ್ಜಾಗುತ್ತಿದ್ದಾರೆ.

1 / 8
ಮಾರ್ಚ್ 31 ರಿಂದ ಐಪಿಎಲ್ ಶುರುವಾಗಲಿದ್ದು, ಮೇ ಅಂತ್ಯಕ್ಕೆ ಟೂರ್ನಿ ಮುಗಿಯಲಿದೆ. ಅಂದರೆ ಮುಂದಿನ 2 ತಿಂಗಳುಗಳ ಕಾಲ ಟೀಮ್ ಇಂಡಿಯಾ ಯಾವುದೇ ಸರಣಿ ಆಡುತ್ತಿಲ್ಲ. ಆದರೆ ಐಪಿಎಲ್​ ಮುಕ್ತಾಯದ ಬೆನ್ನಲ್ಲೇ ಭಾರತ ತಂಡವು ಫೈನಲ್​ ಫೈಟ್​ಗೆ ಸಜ್ಜಾಗಬೇಕಿದೆ.

2 / 8
ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್​ ಪಂದ್ಯವು ಜೂ.7 ರಿಂದ ಶುರುವಾಗಲಿದೆ. ಇಂಗ್ಲೆಂಡ್​ನ ಓವಲ್​ ಮೈದಾನದಲ್ಲಿ ನಡೆಯಲಿರುವ ಟೆಸ್ಟ್ ಕ್ರಿಕೆಟ್​ನ ಫೈನಲ್ ಫೈಟ್​ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಅಂದರೆ ಟೀಮ್ ಇಂಡಿಯಾದ ಮುಂದಿನ ಎದುರಾಳಿ ಕೂಡ ಆಸ್ಟ್ರೇಲಿಯಾ ತಂಡ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಕಠಿಣ ಪೈಪೋಟಿ ಎದುರಿಸುವುದು ಖಚಿತ.

3 / 8
ಇದಾದ ಬಳಿಕವಷ್ಟೇ ಟೀಮ್ ಇಂಡಿಯಾ ಮುಂದಿನ ಸರಣಿಗಳನ್ನು ಆಡಲಿದೆ. ಭಾರತ ಕ್ರಿಕೆಟ್​ ತಂಡದ ವಾರ್ಷಿಕ ವೇಳಾಪಟ್ಟಿ ಪ್ರಕಾರ, ಜುಲೈನಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್​ ವಿರುದ್ಧ ಸರಣಿ ಆಡಲಿದೆ. ವೇಳಾಪಟ್ಟಿ ನಿಗದಿಯಾಗದ ಈ ಸರಣಿಯಲ್ಲಿ 2 ಟೆಸ್ಟ್, ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಾಗುತ್ತದೆ.

4 / 8
ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಮುಂದೆ ಏಷ್ಯಾಕಪ್ ಸವಾಲು ಎದುರಾಗಲಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಲಿರುವ ಏಷ್ಯಾಕಪ್​ ವೇಳಾಪಟ್ಟಿ ಕೂಡ ನಿಗದಿಯಾಗಿಲ್ಲ. ಆದರೆ ಸೆಪ್ಟೆಂಬರ್​ನಲ್ಲಿ ಏಷ್ಯಾಕಪ್ ನಡೆಯುವುದು ಬಹುತೇಕ ಖಚಿತವಾಗಿದೆ.

5 / 8
ಆ ಬಳಿಕ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಮತ್ತೊಮ್ಮೆ ಆಗಮಿಸಲಿದೆ. ಈ ಸರಣಿಯಲ್ಲಿ ಉಭಯ ತಂಡಗಳು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.

6 / 8
ಇನ್ನು ಅಕ್ಟೋಬರ್-ನವೆಂಬರ್​ನಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಜರುಗಲಿದ್ದು, 2 ತಿಂಗಳುಗಳ ಕಾಲ 10 ತಂಡಗಳ ನಡುವೆ ಕ್ರಿಕೆಟ್ ಕದನ ನಡೆಯಲಿದೆ.

7 / 8
ಇದಾದ ಬಳಿಕ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದರ ನಂತರ ಟೀಮ್ ಇಂಡಿಯಾ ಡಿಸೆಂಬರ್​ನಲ್ಲಿ ಸೌತ್ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಅಂದರೆ ಮುಂದಿನ ಆರೇಳು ತಿಂಗಳಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧವೇ ಹೆಚ್ಚಿನ ಪಂದ್ಯಗಳನ್ನು ಆಡುತ್ತಿರುವುದು ವಿಶೇಷ.

8 / 8
Follow Us
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ

ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ

ಈ ಸರ್ಕಾರದ ಲೂಟಿ ನೋಡಿಯೇ ಕೆಂಪಣ್ಣ ಸತ್ಹೋಗ್ಬಿಟ್ಟ: ಪ್ರತಾಪಸಿಂಹ

ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ

ಮೈಮೇಲೆ ಹರಿದು ಕಾರು, ಕೆಲವೇ ಕ್ಷಣಗಳಲ್ಲಿ ಪವಾಡವೆಂಬಂತೆ ಎದ್ದು ನಿಂತ ಬಾಲಕ

‘ರಾಶಿಕಾಗಿಂತ ನನಗೆ ಅವರೇ ಹೆಚ್ಚು ಇಷ್ಟ’; ಓಪನ್ ಆಗಿ ಹೇಳಿದ ಸೂರಜ್ 

ಮೈ ರೋಮಾಂಚನಗೊಳಿಸುವ ಕುಮಾರ - ಸಿರಿ ಭೇಟಿ
ಮೈ ರೋಮಾಂಚನಗೊಳಿಸುವ ಕುಮಾರ - ಸಿರಿ ಭೇಟಿ
ಅಯೋಧ್ಯೆಯಲ್ಲಿ ಬಂದೂಕು ತೋರಿಸಿ ಆಭರಣದಂಗಡಿ ದೋಚಿದ ಬುರ್ಖಾಧಾರಿ ಮಹಿಳೆ

ಆನೇಕಲ್: ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ನೈಟ್ ರೌಂಡ್ಸ್! ವಿಡಿಯೋ ವೈರಲ್

ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಯತ್ನಾಳ್