IPL 2023: ಶ್ರೇಯಸ್ ಔಟ್! ಯಾರಿಗೆ ಸಿಗಲಿದೆ ಕೆಕೆಆರ್ ನಾಯಕತ್ವ? ರೇಸ್​ನಲ್ಲಿ 3 ಆಟಗಾರರು

IPL 2023: ಶ್ರೇಯಸ್ ಅಯ್ಯರ್ ಇಂಜುರಿಗೊಂಡಿದ್ದು, ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಕೆಕೆಆರ್ ಅಭಿಮಾನಿಗಳ ಮನದಲ್ಲಿ ಮೂಡಿದೆ.

ಪೃಥ್ವಿಶಂಕರ
|

Updated on:Mar 23, 2023 | 2:28 PM

16ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಇನ್ನು 8 ದಿನಗಳು ಮಾತ್ರ ಉಳಿದಿವೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ಕೋಲ್ಕತ್ತಾ ನೈಟ್ ರೈಡರ್ಸ್ ಭಾರಿ ಹಿನ್ನಡೆ ಅನುಭವಿಸಿದೆ. ವಾಸ್ತವವಾಗಿ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಗಾಯದಿಂದಾಗಿ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ವೈದ್ಯರು ಶ್ರೇಯಸ್​ಗೆ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದು, ಮುಂದಿನ 5 ತಿಂಗಳ ಕಾಲ ಶ್ರೇಯಸ್ ಕ್ರಿಕೆಟ್​ನಿಂದ ದೂರ ಉಳಿಯಲಿದ್ದಾರೆ ಎಂದು ವರದಿಯಾಗಿದೆ.

1 / 6
ಕಳೆದ ಆವೃತ್ತಿಯ ದಾಖಲೆ ಮೊತ್ತಕ್ಕೆ ಕೆಕೆಆರ್​ ತಂಡವನ್ನು ಸೇರಿಕೊಂಡಿದ್ದ ಶ್ರೇಯಸ್ ಅವರನ್ನು ಕೆಕೆಆರ್ ಫ್ರಾಂಚೈಸ್ ನಾಯಕನನ್ನಾಗಿ ಮಾಡಿತ್ತು. ಆದರೆ ಇದೀಗ ಶ್ರೇಯಸ್ ಅಯ್ಯರ್ ಇಂಜುರಿಗೊಂಡಿದ್ದು, ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಕೆಕೆಆರ್ ಅಭಿಮಾನಿಗಳ ಮನದಲ್ಲಿ ಮೂಡಿದೆ. ಇದೀಗ ಫ್ರಾಂಚೈಸ್ ಕೂಡ ನೂತನ ನಾಯಕನ ಹುಡುಕಾಟದಲ್ಲಿದ್ದು, ಪ್ರಮುಖವಾಗಿ 3 ಆಟಗಾರರು ರೇಸ್​ನಲ್ಲಿದ್ದಾರೆ. ಆ ಮೂವರು ಆಟಗಾರರು ಯಾರು ಎಂಬುದರ ವಿವರ ಇಲ್ಲಿದೆ.

2 / 6
ಸುನಿಲ್ ನರೈನ್: ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ಮತ್ತು ಕೆಕೆಆರ್ ಅನುಭವಿ ಆಲ್‌ರೌಂಡರ್ ಸುನಿಲ್ ನರೈನ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡುವ ಸಾಧ್ಯತೆಗಳಿವೆ. ಇತ್ತೀಚೆಗೆ ನಡೆದ ILT20 ಲೀಗ್‌ನಲ್ಲಿ ಅಬುಧಾಬಿ ನೈಟ್ ರೈಡರ್ಸ್ ತಂಡವನ್ನು ನರೈನ್ ಮುನ್ನಡೆಸಿದ್ದರು. ಈ ತಂಡ ಕೆಕೆಆರ್​ ಒಡೆತನದ ಮತ್ತೊಂದು ತಂಡವಾಗಿರುವುದರಿಂದ ನರೈನ್​ಗೆ ನಾಯಕತ್ವ ಸಿಗುವ ಸಾಧ್ಯತೆಗಳಿವೆ. ಅಲ್ಲದೆ ಸುನಿಲ್ ನರೈನ್ ಅವರಿಗೆ ಟಿ20ಯಲ್ಲಿ ಸಾಕಷ್ಟು ಅನುಭವವಿದ್ದು ಹಲವು ವರ್ಷಗಳಿಂದ ಕೆಕೆಆರ್‌ ತಂಡದ ಭಾಗವಾಗಿದ್ದಾರೆ. ಐಪಿಎಲ್‌ನಲ್ಲಿ 148 ಪಂದ್ಯಗಳನ್ನಾಡಿರುವ ಸುನಿಲ್ ನರೈನ್, ಬ್ಯಾಟಿಂಗ್​ನಲ್ಲಿ 1025 ರನ್ ಮತ್ತು ಬೌಲಿಂಗ್​ನಲ್ಲಿ 152 ವಿಕೆಟ್ ಪಡೆದಿದ್ದಾರೆ.

3 / 6
ಟಿಮ್ ಸೌಥಿ: ನ್ಯೂಜಿಲೆಂಡ್ ವೇಗದ ಬೌಲರ್ ಟಿಮ್ ಸೌಥಿಯನ್ನು ತಂಡದ ನಾಯಕನನ್ನಾಗಿ ನೋಡಲಾಗುತ್ತಿದೆ. ಸೌಥಿ ಕೂಡ ಸಾಕಷ್ಟು ನಾಯಕತ್ವದ ಅನುಭವವನ್ನು ಹೊಂದಿದ್ದು, ಅವರು ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದಾರೆ. ಸೌದಿ ಇದುವರೆಗೆ 52 ಐಪಿಎಲ್ ಪಂದ್ಯಗಳಲ್ಲಿ 45 ವಿಕೆಟ್ ಪಡೆದಿದ್ದಾರೆ.

4 / 6
ನಿತೀಶ್ ರಾಣಾ: ಕೆಕೆಆರ್ ನಾಯಕರಾಗುವ ಪಟ್ಟಿಯಲ್ಲಿ 29 ವರ್ಷದ ನಿತೀಶ್ ರಾಣಾ ಕೂಡ ಸೇರಿದ್ದಾರೆ. ಬಹಳ ಸಮಯದಿಂದ ಕೆಕೆಆರ್‌ ತಂಡದ ಭಾಗವಾಗಿರುವ ರಾಣಾ, ಹಲವು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ 91 ಪಂದ್ಯಗಳನ್ನಾಡಿರುವ ನಿತೀಶ್ ರಾಣಾ, 2181 ರನ್ ಬಾರಿಸಿದ್ದು, ಬೌಲಿಂಗ್​ನಲ್ಲಿ 7 ವಿಕೆಟ್​ ಕೂಡ ಪಡೆದಿದ್ದಾರೆ.

5 / 6
ಕೆಕೆಆರ್ ತಂಡ: ಶ್ರೇಯಸ್ ಅಯ್ಯರ್ (ಪ್ರಸ್ತುತ ನಾಯಕ), ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕೂಲ್ ರಾಯ್, ರಿಂಕು ಸಿಂಗ್, ನಾರಾಯಣನ್ ಜಗದೀಸನ್, ವೈಭವ್ ಅರೋರಾ, ಸುಯಶ್ ಶರ್ಮಾ, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಮಂದೀಪ್ ಸಿಂಗ್, ಲಿಟನ್ ದಾಸ್, ಶಕೀಬ್ ಅಲ್ ಹಸನ್.

6 / 6

Published On - 2:28 pm, Thu, 23 March 23

Follow us
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ

ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ

ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್