ನಟ ಶರ್ವಾನಂದಗೆ ಅಪಘಾತ, ಮದುವೆ ಕತೆ ಏನು?

Sharwanand: ಕೆಲವೇ ದಿನಗಳಲ್ಲಿ ವಿವಾಹ ಬಂಧಕ್ಕೆ ಒಳಗಾಗಲಿರುವ ನಟ ಶರ್ವಾನಂದರ ಕಾರು ಅಪಘಾತವಾಗಿದೆ.

ನಟ ಶರ್ವಾನಂದಗೆ ಅಪಘಾತ, ಮದುವೆ ಕತೆ ಏನು?
ಶರ್ವಾನಂದ
Follow us
ಮಂಜುನಾಥ ಸಿ.
|

Updated on: May 28, 2023 | 4:03 PM

ತಮಿಳು-ತೆಲುಗಿನ ಜನಪ್ರಿಯ ನಟ ಶರ್ವಾನಂದಗೆ (Sharwanand) ಅಪಘಾತವಾಗಿದೆ. ಮೇ 27 ತಡ ರಾತ್ರಿ ಹೈದರಾಬಾದ್​ನಲ್ಲಿ ಅಪಘಾತವಾಗಿದ್ದು, ಶರ್ವಾನಂದಗೆ ಗಾಯಗಳಾಗಿವೆ ಎನ್ನಲಾಗುತ್ತಿದೆ. ಶರ್ವಾನಂದಗೆ ಮದುವೆ ನಿಶ್ಚಯವಾಗಿದ್ದು, ಇನ್ನು ಮೂರು ದಿನಗಳಲ್ಲಿ ಮದುವೆ ಇದೆ. ಹೀಗಿರುವಾಗ ನಟನಿಗೆ ಅಪಘಾತವಾಗಿದೆ. ಹೈದರಾಬಾದ್​ನ ಫಿಲಂನಗರ್ ಬಳಿ ತಡರಾತ್ರಿ ಈ ಅಪಘಾತ ಸಂಭವಿಸಿದ್ದು ತಮ್ಮ ಲ್ಯಾಂಡ್​ರೋವರ್ ಕಾರ್​ನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಮರಕ್ಕೆ ಢಿಕ್ಕಿ ಹೊಡೆದಿದ್ದಾರೆ.

ಕೂಡಲೇ ಸ್ಥಳೀಯರು ಆಗಮಿಸಿ ನಟನಿಗೆ ಸಹಾಯ ಮಾಡಿದ್ದು ಕಾರನ್ನು ಮತ್ತೆ ರಸ್ತೆಗೆ ತರಲು ಸಹಾಯ ಮಾಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಸಹ ಆಗಮಿಸಿದ್ದು, ಹೆಚ್ಚು ಗಾಯವಾಗಿಲ್ಲದ ಕಾರಣ ಶರ್ವಾನಂದ ಅವರೇ ತಮ್ಮ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಘಟನೆಗೆ ಕುರಿತ ಕೆಲವು ಚಿತ್ರಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಶರ್ವಾನಂದ ಅವರ ಮದುವೆ ನಿಶ್ಚಯವಾಗಿದ್ದು ಇನ್ನು ಮೂರು ದಿನಗಳಲ್ಲಿ ರಕ್ಷಿತಾ ರೆಡ್ಡಿ ಅವರೊಟ್ಟಿಗೆ ಹೈದರಾಬಾದ್​ನಲ್ಲಿಯೇ ಮದುವೆ ನಡೆಯಲಿಕ್ಕಿದೆ. ಘಟನೆ ಬಗ್ಗೆ ಟ್ವೀಟ್ ಮಾಡಿರುವ ನಟ ಶರ್ವಾನಂದ, ”ಇಂದು ಬೆಳಗ್ಗೆ ನನ್ನ ಕಾರು ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅದೊಂದು ತೀರಾ ಚಿಕ್ಕ ಘಟನೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳೊಂದಿಗೆ ನಾನು ಸಂಪೂರ್ಣವಾಗಿ ಸುರಕ್ಷಿತವಾಗಿದ್ದೇನೆ ಮತ್ತು ಮನೆಯಲ್ಲಿಯೇ ಇದ್ದೇನೆ. ಚಿಂತೆ ಮಾಡುವ ಅಗತ್ಯ ಏನೂ ಇಲ್ಲ. ನಿಮ್ಮ ಕಾಳಜಿಗಾಗಿ ಎಲ್ಲರಿಗೂ ಧನ್ಯವಾದಗಳು, ಭಾನುವಾದ ಶುಭದಿನ” ಎಂದಿದ್ದಾರೆ.

ಇದನ್ನೂ ಓದಿ:ವಿವಾದದಲ್ಲಿ ಅರ್ಜುನ್ ಸರ್ಜಾ ಸಿನಿಮಾ; ತಿರುಗೇಟು ಕೊಟ್ಟ ವಿಶ್ವಕ್ ಸೇನ್; ಹೊಸ ಹೀರೋಗೆ ಮಣೆ?

2004 ರಲ್ಲಿ ನಟನೆಗೆ ಕಾಲಿಟ್ಟ ಶರ್ವಾನಂದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಹಾಗೂ ತೆಲುಗು ಎರಡರಲ್ಲೂ ಜನಪ್ರಿಯ ನಟರಾಗಿರುವ ಶರ್ವಾನಂದ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ಸಹ ನೀಡಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಇವರ ವಿವಾಹ ನಿಶ್ಚಯವಾಗಿದೆ. ಈ ನಡುವೆ ಇವರ ವಿವಾಹ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂಬ ಮಾತುಗಳು ಕೇಳಿ ಬಂದಿತ್ತು ಆದರೆ ಅದು ಸುಳ್ಳಾಗಿದ್ದು, ಶರ್ವಾನಂದ ಹಾಗೂ ರಕ್ಷಿತಾ ರೆಡ್ಡಿಯವರ ಮದುವೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್