ವಿವಾದದಲ್ಲಿ ಅರ್ಜುನ್ ಸರ್ಜಾ ಸಿನಿಮಾ; ತಿರುಗೇಟು ಕೊಟ್ಟ ವಿಶ್ವಕ್ ಸೇನ್; ಹೊಸ ಹೀರೋಗೆ ಮಣೆ?

ವಿಶ್ವಕ್ ಸೇನ್ ಅವರನ್ನು ಹೊಸ ಸಿನಿಮಾದಿಂದ ಕೈ ಬಿಡಲಾಗಿದೆ. ಇದಕ್ಕೆ ಸಂಬಂಧಿಸಿ ಅರ್ಜುನ್ ಸರ್ಜಾ ಅವರು ಸುದ್ದಿಗೋಷ್ಠಿ ಕರೆದಿದ್ದರು. ಅಷ್ಟೇ ಅಲ್ಲ, ವಿಶ್ವಕ್ ಸೇನ್​ಗೆ ಬದ್ಧತೆ ಇಲ್ಲ ಎಂದು ಆರೋಪ ಮಾಡಿದ್ದರು.

ವಿವಾದದಲ್ಲಿ ಅರ್ಜುನ್ ಸರ್ಜಾ ಸಿನಿಮಾ; ತಿರುಗೇಟು ಕೊಟ್ಟ ವಿಶ್ವಕ್ ಸೇನ್; ಹೊಸ ಹೀರೋಗೆ ಮಣೆ?
ಅರ್ಜುನ್ ಸರ್ಜಾ-ಐಶ್ವರ್ಯಾ ಸರ್ಜಾ
Follow us
| Updated By: ರಾಜೇಶ್ ದುಗ್ಗುಮನೆ

Updated on:Nov 09, 2022 | 8:22 PM

ಅರ್ಜುನ್ ಸರ್ಜಾ(Arjun Sarja) ಅವರು ತೆಲುಗಿನಲ್ಲಿ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಮಗಳು ಐಶ್ವರ್ಯಾ ಅರ್ಜುನ್ ನಾಯಕಿ ಆಗಿ ನಟಿಸುತ್ತಿದ್ದಾರೆ. ವಿಶ್ವಕ್ ಸೇನ್ (Vishwak Sen) ಅವರು ಈ ಚಿತ್ರಕ್ಕೆ ಹೀರೋ ಆಗಿ ಆಯ್ಕೆ ಆಗಿದ್ದರು. ಅವರು ಕೈಬಿಟ್ಟ ನಂತರದಲ್ಲಿ ಈ ಸಿನಿಮಾ ವಿವಾದದ ಕೇಂದ್ರ ಬಿಂದು ಆಗಿದೆ. ಅರ್ಜುನ್ ಸರ್ಜಾ ಅವರು ವಿಶ್ವಕ್ ವಿರುದ್ಧ ಆರೋಪ ಮಾಡಿದ್ದಾರೆ. ಇದಕ್ಕೆ ವಿಶ್ವಕ್ ಅವರು ಪ್ರತ್ಯುತ್ತರ ನೀಡಿದ್ದಾರೆ.

ಅರ್ಜುನ್ ಸರ್ಜಾ ಹೇಳಿದ್ದೇನು?

ವಿಶ್ವಕ್ ಸೇನ್ ಅವರನ್ನು ಹೊಸ ಸಿನಿಮಾದಿಂದ ಕೈ ಬಿಡಲಾಗಿದೆ. ಇದಕ್ಕೆ ಸಂಬಂಧಿಸಿ ಅರ್ಜುನ್ ಸರ್ಜಾ ಅವರು ಸುದ್ದಿಗೋಷ್ಠಿ ಕರೆದಿದ್ದರು. ಅಷ್ಟೇ ಅಲ್ಲ, ವಿಶ್ವಕ್ ಸೇನ್​ಗೆ ಬದ್ಧತೆ ಇಲ್ಲ ಎಂದು ಆರೋಪ ಮಾಡಿದ್ದರು. ಅಲ್ಲದೆ, ತಮ್ಮ ಚಿತ್ರದಿಂದ ಅವರನ್ನು ಕೈ ಬಿಡುವ ಬಗ್ಗೆ ಘೋಷಣೆ ಮಾಡಿದ್ದರು.

ಆರೋಪ ಅಲ್ಲ ಗಳೆದ ವಿಶ್ವಕ್

ವಿಶ್ವಕ್ ಸೇನ್ ಅವರು ಅರ್ಜುನ್ ಸರ್ಜಾ ಮಾಡಿರುವ ಆರೋಪವನ್ನು ಅಲ್ಲ ಗಳೆದಿದ್ದಾರೆ. ‘ನನಗೆ ಬದ್ಧತೆ ಇಲ್ಲ ಎಂದು ಯಾರಾದರೂ ಹೇಳಿದರೆ ನಾನು ಈಗಲೇ ಚಿತ್ರರಂಗ ತೊರೆಯುತ್ತೇನೆ. ನಾನು ಹಲವರ ಜತೆ ಕೆಲಸ ಮಾಡಿದ್ದೇನೆ. ಅವರ ಜತೆ ಕೆಲಸ ಮಾಡಲು ಯಾವುದೇ ಸಮಸ್ಯೆ ಉಂಟಾಗಿಲ್ಲ. ನಾನು ಪರಿಶ್ರಮದಿಂದ ಕೆಲಸ ಮಾಡುವುದನ್ನು ನಂಬಿದ್ದೇನೆ. ಫಲಿತಾಂಶ ಪ್ರೇಕ್ಷಕರ ಕೈಯಲ್ಲಿ ಇರುತ್ತದೆ’ ಎಂದಿದ್ದಾರೆ ವಿಶ್ವಕ್ ಸೇನ್.

ಅರ್ಜುನ್ ಸರ್ಜಾ ಮುಂದಿನ ನಡೆ ಏನು?

ವಿಶ್ವಕ್ ಸೇನ್ ಅವರನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳುವ ಆಲೋಚನೆಯಲ್ಲಿ ಅರ್ಜುನ್ ಸರ್ಜಾ ಇಲ್ಲ. ಅದೇ ರೀತಿ ಈ ಚಿತ್ರದ ಕೆಲಸವನ್ನು ಮುಂಡಲೂ ಅವರು ರೆಡಿ ಇಲ್ಲ. ಈ ಕಾರಣಕ್ಕೆ ಶರ್ವಾನಂದ್​ ಅವರನ್ನು ಮಗಳ ಸಿನಿಮಾಗೆ ಹೀರೋ ಆಗಿ ಆಯ್ಕೆ ಮಾಡುವ ಆಲೋಚನೆಯಲ್ಲಿ ಅರ್ಜುನ್ ಸರ್ಜಾ ಇದ್ದಾರೆ. ‘ಒಕೆ ಒಕ ಜೀವಿತಂ’ ಚಿತ್ರದಲ್ಲಿ ಶರ್ವಾನಂದ್ ನಟಿಸಿದ್ದರು. ಈ ಸಿನಿಮಾ ಹಿಟ್ ಆಗಿತ್ತು. ಹೀಗಾಗಿ, ಅರ್ಜುನ್ ಸರ್ಜಾ ಅವರು ಶರ್ವಾನಂದ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದಾರೆ.

Published On - 8:13 pm, Wed, 9 November 22

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ