AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಪ್ರಚಾರಕ್ಕೆ ಪಬ್ಲಿಕ್​ನಲ್ಲಿ ಪ್ರಾಂಕ್ ವಿಡಿಯೋ ಮಾಡಿದ ಹೀರೋ; ಏನೋ ಮಾಡಲು ಹೋಗಿ ಇನ್ನೇನೋ ಆಯ್ತು

ಸಿನಿಮಾ ಪ್ರಚಾರಕ್ಕೆ ತೆಲುಗು ನಟ ವಿಶ್ವಕ್​ ಸೇನ್ ಪ್ರಾಂಕ್ ವಿಡಿಯೋ ಮಾಡಿದ್ದಾರೆ. ಇದರಿಂದ ಅವರು ಸಂಕಷ್ಟ ಎದುರಿಸಿದ್ದಾರೆ.

ಸಿನಿಮಾ ಪ್ರಚಾರಕ್ಕೆ ಪಬ್ಲಿಕ್​ನಲ್ಲಿ ಪ್ರಾಂಕ್ ವಿಡಿಯೋ ಮಾಡಿದ ಹೀರೋ; ಏನೋ ಮಾಡಲು ಹೋಗಿ ಇನ್ನೇನೋ ಆಯ್ತು
ಪ್ರ್ಯಾಂಕ್ ವಿಡಿಯೋ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: May 03, 2022 | 7:52 AM

Share

ಟ್ರಾಫಿಕ್​ನಲ್ಲಿ (Traffic) ವಾಹನಗಳು ಸಾಲಾಗಿ ನಿಂತಿವೆ. ಈ ವಾಹನಗಳ ಮಧ್ಯೆ ಬರುವ ವ್ಯಕ್ತಿಯೋರ್ವ ಮೈಮೇಲೆ ಏನನ್ನೋ ಸುರಿದುಕೊಳ್ಳುತ್ತಾನೆ. ನೋಡಲು ಅದು ಪೆಟ್ರೋಲ್ (Petrol)​ ರೀತಿಯಲ್ಲೇ ಇದೆ. ನಂತರ ಕೈಯಲ್ಲಿರುವ ಬೆಂಕಿ ಪೊಟ್ಟಣವನ್ನು ತೆಗೆದುಕೊಂಡು ಕಡ್ಡಿ ಗೀರಲು ಮುಂದಾಗುತ್ತಾನೆ. ಈ ದೃಶ್ಯವನ್ನು ಸ್ಥಳದಲ್ಲಿದ್ದುಕೊಂಡು ನೀವು ನೋಡುತ್ತಿದ್ದೀರಿ ಎಂದಾದರೆ ಒಮ್ಮೆ ಭಯ ಆಗೋದು ಗ್ಯಾರಂಟಿ. ಈ ರೀತಿ ಮಾಡಲು ಹೋಗಿ ನಟನಿಗೆ (Tollywood Hero)  ಸಂಕಷ್ಟ ಎದುರಾಗಿದೆ. ಸಿನಿಮಾ ಪ್ರಚಾರಕ್ಕೆ ಪ್ರಾಂಕ್ ಮಾಡಿದ ಹೀರೋ ವಿರುದ್ಧ ಕೇಸ್ ದಾಖಲಾಗಿದೆ.

ಜನರು ಹೆಚ್ಚು ಇಂಟರ್​ನೆಟ್ ಬಳಸಲು ಆರಂಭಿಸಿದ ನಂತರ ಯೂಟ್ಯೂಬ್ ನೋಡುಗರ ಸಂಖ್ಯೆ ಕೂಡ ಹೆಚ್ಚಿದೆ. ಈ ಕಾರಣಕ್ಕೆ ವಿಡಿಯೋ ಕ್ರಿಯೇಟ್ ಮಾಡಲು ನಾನಾ ರೀತಿಯ ಕಸರತ್ತಿನ ಮೊರೆ ಹೋಗಲಾಗುತ್ತದೆ. ಇನ್ನೂ ಕೆಲವರು ಪ್ರಾಂಕ್ ವಿಡಿಯೋ ಮಾಡಿ ಪ್ರಚಾರ ಹಾಗೂ ಹಣ ಎರಡನ್ನೂ ಮಾಡಿಕೊಳ್ಳುತ್ತಾರೆ. ಈಗ ಸಿನಿಮಾ ಪ್ರಚಾರಕ್ಕೆ ತೆಲುಗು ನಟ ವಿಶ್ವಕ್​ ಸೇನ್ ಪ್ರಾಂಕ್ ವಿಡಿಯೋ ಮಾಡಿದ್ದಾರೆ. ಇದರಿಂದ ಅವರು ಸಂಕಷ್ಟ ಎದುರಿಸಿದ್ದಾರೆ.

ತೆಲುಗಿನ ‘ಅಶೋಕ ವನಮ್ಲೋ ಅರ್ಜುನ ಕಲ್ಯಾಣಂ’ ಸಿನಿಮಾ ಮೇ 6ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ವಿಶ್ವಕ್​ ಸೇನ್ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಪ್ರಚಾರಕ್ಕೆ ಚಿತ್ರ ತಂಡ ಹೊಸ ಮಾರ್ಗ ತುಳಿಯಲು ಮುಂದಾಗಿತ್ತು. ಆತ್ಮಹತ್ಯೆಯ ಪ್ರಾಂಕ್ ವಿಡಿಯೋ ಮಾಡಿತ್ತು. ಈ ವಿಡಿಯೋ ಶೂಟ್ ಮಾಡುವಾಗ ಸ್ಥಳದಲ್ಲಿದ್ದ ಕೆಲವರು ಆತಂಕಗೊಂಡಿದ್ದರು. ಈ ವಿಡಿಯೋ ಯೂಟ್ಯೂಬ್​ನಲ್ಲಿ ವೈರಲ್ ಆಗಿತ್ತು. ನಟನಿಗೆ ಮೆಚ್ಚುಗೆ ವ್ಯಕ್ತಪಡಿಸುವ ಬದಲು ಛೀಮಾರಿ ಹಾಕಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್​ ವಕೀಲರೊಬ್ಬರು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ. ‘ವಿಶ್ವಕ್ ಸೇನ್ ಮಾಡಿದ ವಿಡಿಯೋದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಈ ವಿಡಿಯೋವನ್ನು ತೆಗೆದು ಹಾಕಬೇಕು. ಈ ರೀತಿಯ ಹಲವು ಪ್ರಾಂಕ್ ವಿಡಿಯೋಗಳು ಯೂಟ್ಯೂಬ್​ನಲ್ಲಿವೆ. ಅದನ್ನು ಡಿಲೀಟ್ ಮಾಡಲು ಸೂಚನೆ ನೀಡಬೇಕು’ ಎಂದು ಆಯೋಗದ ಬಳಿ ಹೈಕೋರ್ಟ್​ ವಕೀಲರು ಮನವಿ ಮಾಡಿಕೊಂಡಿದ್ದಾರೆ.

ನ್ಯೂಸ್​ ಚಾನೆಲ್​ ಆ್ಯಂಕರ್ ಜತೆ ವಿಶ್ವಕ್​ ಸೇನ್ ಜಗಳಕ್ಕೆ ಇಳಿದಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿದೆ. ಇದು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಹೀಗಿರುವಾಗಲೇ ಮತ್ತೊಂದು ಸಂಕಷ್ಟ ವಿಶ್ವಕ್​ ಸೇನ್​ಗೆ ಎದುರಾಗಿದೆ. ಇದೆಲ್ಲವೂ ಸಿನಿಮಾ ಪ್ರಚಾರದ ಗಿಮಿಕ್ ಎಂದು ಕೆಲವರು ದೂರಿದ್ದಾರೆ.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

ಇದನ್ನೂ ಓದಿ:  ‘ಮಗಳ ಪ್ರೊಡಕ್ಷನ್​ನಲ್ಲಿ ನಾನೂ ಒಂದು ವೆಬ್ ಸೀರಿಸ್ ಮಾಡ್ತಾ ಇದೀನಿ’; ಶಿವರಾಜ್​ಕುಮಾರ್ ಅಚ್ಚರಿಯ ಘೋಷಣೆ

Meghana Raj Birthday: ಮೇಘನಾ ರಾಜ್​ಗೆ ಜನ್ಮದಿನದ ಸಂಭ್ರಮ; ಪತಿ ಚಿರು ಜತೆ ವಯಸ್ಸಿನ ಅಂತರ ಎಷ್ಟಿತ್ತು?

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ