Jammu and Kashmir Earthquake: ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪ, 4.9 ತೀವ್ರತೆ ದಾಖಲು

ಜಮ್ಮು ಮತ್ತು ಕಾಶ್ಮೀರದಲ್ಲಿ 4.9ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಅಫ್ಘಾನಿಸ್ತಾನದಲ್ಲಿ ಬೆಳಗ್ಗೆ 10.19ಕ್ಕೆ 5.9 ತೀವ್ರತೆಯ ಭೂಕಂಪ(Earthquake)  ಸಂಭವಿಸಿದ್ದು, ಜಮ್ಮು ಮತ್ತು ಕಾಶ್ಮೀರ(Jammu and Kashmir) ದಲ್ಲೂ ಭೂಮಿ ನಡುಗಿದ ಅನುಭವವಾಗಿದೆ.

Jammu and Kashmir Earthquake: ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪ, 4.9 ತೀವ್ರತೆ ದಾಖಲು
ಭೂಕಂಪ
Follow us
ನಯನಾ ರಾಜೀವ್
|

Updated on:May 28, 2023 | 12:18 PM

ಜಮ್ಮು ಮತ್ತು ಕಾಶ್ಮೀರದಲ್ಲಿ 4.9ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಅಫ್ಘಾನಿಸ್ತಾನದಲ್ಲಿ ಬೆಳಗ್ಗೆ 10.19ಕ್ಕೆ 5.9 ತೀವ್ರತೆಯ ಭೂಕಂಪ(Earthquake)  ಸಂಭವಿಸಿದ್ದು, ಜಮ್ಮು ಮತ್ತು ಕಾಶ್ಮೀರ(Jammu and Kashmir) ದಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ಹಾಗೆಯೇ ದೆಹಲಿ, ಎನ್​ಸಿಆರ್​ ಹಾಗೂ ಪಂಜಾಬ್​ ಹರ್ಯಾಣ ಭಾಗಗಳಲ್ಲೂ ಭೂಮಿ ಕಂಪಿಸಿದೆ. ಭೂಕಂಪದ ಕೇಂದ್ರ ಬಿಂದು ಅಫ್ಘಾನಿಸ್ತಾನದ ತಜಿಖಿಸ್ತಾನದ ಗಡಿಯಲ್ಲಿದೆ.

ಟರ್ಕಿಯಲ್ಲೇ ಹೆಚ್ಚು ಭೂಕಂಪ ಧರೆಗುಡುಳಿದ ಕಟ್ಟಡಗಳು ಒಂದೆಡೆ ಅವಶೇಷಗಳಡಿ ಸಿಲುಕಿರುವ ಸಾವಿರಾರು ಜೀವಗಳ ಚೀತ್ಕಾರ. ಮತ್ತೊಂದೆಡೆ ತನ್ನವರನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಜನರು. ಅವಶೇಷಗಳಡಿ ಸಮಾಧಿಯಾದ ಜೀವಗಳು. ಸೂರು ಕಳೆದುಕೊಂಡು ಬೀದಿಪಾಲಾದ ಬದುಕು. ಹೆತ್ತವರ ಕಳೆದುಕೊಂಡು ಅನಾಥರಾದ ಮಕ್ಕಳ ಆಕ್ರಂದನ.. ಈ ಕರುಣಾಜನಕ ದೃಶ್ಯ ಕಣ್ಣೀರು ತರಿಸದೇ ಇರದು.

1939ರಲ್ಲಿ ಟರ್ಕಿಯಲ್ಲೇ ಎರ್ಜಿಂಕನ್‌ನಲ್ಲಿ ಪ್ರಬಲ ಭೂಕಂಪ ಉಂಟಾಗಿತ್ತು. ಆ ವೇಳೆ 33,000 ಮಂದಿ ಬಲಿಯಾಗಿದ್ದರು. ಅದಾದ ದಶಕಗಳ ಬಳಿಕ ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪ ಇದಾಗಿದೆ. ಫೆ.6 ರಂದು ದಕ್ಷಿಣ ಟರ್ಕಿ ಪ್ರಾಂತ್ಯದ ಒಸ್ಮಾನಿಯೆದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತು. ಮತ್ತೆ 2ನೇ ಭೂಕಂಪವು ಮಧ್ಯಾಹ್ನದ ವೇಳೆಗೆ ಸಂಭವಿಸಿತು.

ಮತ್ತಷ್ಟು ಓದಿ:Maharashtra Earthquake: ಮಹಾರಾಷ್ಟ್ರದ ಪಾಲ್ಘಾರ್‌ನಲ್ಲಿ ಎರಡು ಸಲ ಕಂಪಿಸಿದ ಭೂಮಿ

ಆಗ ತೀವ್ರತೆ 7.5 ರಷ್ಟು ದಾಖಲಾಯಿತು. ಪುನಃ ಸಂಜೆ ವೇಳೆಗೆ 6.0 ತೀವ್ರತೆಯ ಮತ್ತೊಂದು ಭೂಕಂಪ ಉಂಟಾಯಿತು. ಇದೇ ವೇಳೆ ಸಿರಿಯಾದಲ್ಲೂ ಭೂಕಂಪ ಸಂಭವಿಸಿತು. ಕೇವಲ 11 ಗಂಟೆಗಳ ಅವಧಿಯಲ್ಲಿ ಒಂದರ ಹಿಂದೆ ಒಂದರಂತೆ ಭೂಕಂಪವಾಗಿ ಅಪಾರ ಪ್ರಮಾಣದ ಜೀವ, ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಯಿತು.

ವಿಶ್ವದ ಅತ್ಯಂತ ಸಕ್ರಿಯ ಭೂಕಂಪನ ರಾಷ್ಟ್ರಗಳಲ್ಲಿ ಟರ್ಕಿ ಪ್ರಮುಖವಾದದ್ದು. ಕಾರಣ, ಟರ್ಕಿ ಹಲವಾರು ಭೂದೋಷ ಇರುವಂತಹ ರೇಖೆಗಳ ಮೇಲೆ ಕುಳಿತಿದೆ. ಭೂಮಿಯ ಅಡಿಯಲ್ಲಿ ಹಲವಾರು ಪದರಗಳಿದ್ದು, ಇವನ್ನು ಟೆಕ್ಟಾನಿಕ್‌ ಪ್ಲೇಟ್‌ಗಳು ಎನ್ನುತ್ತಾರೆ.

ಇವುಗಳ ಚಲನೆಯಿಂದ ಭೂಕಂಪಗಳು ಸಂಭವಿಸುತ್ತವೆ. ಟರ್ಕಿಯ ಹೆಚ್ಚು ಭೂಪ್ರದೇಶವು ಅನಾಟೋಲಿಯನ್‌ ಟೆಕ್ಟಾನಿಕ್‌ ಫಲಕದಲ್ಲಿದೆ. ಇದು ಯುರೇಷಿಯನ್‌ ಮತ್ತು ಆಫ್ರಿಕನ್‌ ಎಂಬ 2 ಪ್ರಮುಖ ಪ್ಲೇಟ್‌ಗಳು ಹಾಗೂ ಅರೇಬಿಯನ್‌ ಪ್ಲೇಟ್‌ಗಳ ನಡುವೆ ಇದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:13 pm, Sun, 28 May 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್