New Parliament Building: ಭಾರತ ಮುಂದೆ ಸಾಗಿದರೆ ವಿಶ್ವವೂ ಮುಂದೆ ಹೋಗುವುದು, ಭಾರತ ಪ್ರಜಾತಂತ್ರ ರಾಷ್ಟ್ರ ಮಾತ್ರವಲ್ಲ ಪ್ರಜಾತಂತ್ರದ ಜನನಿ ಕೂಡ: ಮೋದಿ

ಭಾರತವು ಮುಂದೆ ಸಾಗಿದರೆ ವಿಶ್ವವೂ ಮುಂದೆ ಹೋಗುತ್ತದೆ, ಸಂಸತ್ ಭವನವು ಭಾರತದ ವಿಕಾಸ ಹಾಗೂ ವಿಶ್ವ ವಿಕಾಸಕ್ಕೆ ಆಹ್ವಾನ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

New Parliament Building: ಭಾರತ ಮುಂದೆ ಸಾಗಿದರೆ ವಿಶ್ವವೂ ಮುಂದೆ ಹೋಗುವುದು, ಭಾರತ ಪ್ರಜಾತಂತ್ರ ರಾಷ್ಟ್ರ ಮಾತ್ರವಲ್ಲ ಪ್ರಜಾತಂತ್ರದ ಜನನಿ ಕೂಡ: ಮೋದಿ
ನರೇಂದ್ರ ಮೋದಿ
Follow us
ನಯನಾ ರಾಜೀವ್
|

Updated on:May 28, 2023 | 1:38 PM

ಭಾರತವು ಮುಂದೆ ಸಾಗಿದರೆ ವಿಶ್ವವೂ ಮುಂದೆ ಹೋಗುತ್ತದೆ, ಸಂಸತ್ ಭವನ(Parliament Building)ವು ಭಾರತದ ವಿಕಾಸ ಹಾಗೂ ವಿಶ್ವ ವಿಕಾಸಕ್ಕೆ ಆಹ್ವಾನ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಹೊಸ ಮಾರ್ಗಗಳನ್ನು ಅನುಸರಿಸುವುದರಿಂದ ಮಾತ್ರ ಹೊಸ ದಾಖಲೆಗಳು ಸೃಷ್ಟಿಯಾಗುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು. ಹೊಸ ಉತ್ಸಾಹವಿದೆ, ಹೊಸ ಪ್ರಯಾಣವಿದೆ, ಹೊಸ ಚಿಂತನೆ, ಹೊಸ ದಿಕ್ಕು, ಹೊಸ ದೃಷ್ಟಿ. ನಿರ್ಣಯ ಹೊಸದು, ನಂಬಿಕೆ ಹೊಸದು. ಈ ಕಟ್ಟಡ ಕೇವಲ ಕಟ್ಟಡವಲ್ಲ ಇದು ಭಾರತದ ಪ್ರಜಾಪ್ರಭುತ್ವದ ಪ್ರತೀಕ ಎಂದರು. ಈ ಹೊಸ ಕಟ್ಟಡ ಸ್ವಾವಲಂಬಿ ಭಾರತದ ಸೂರ್ಯೋದಯಕ್ಕೆ ಸಾಕ್ಷಿಯಾಗಲಿದೆ.

ಹಳೆಯ ಸಂಸತ್ತಿನಲ್ಲಿ ಸಮಸ್ಯೆಗಳಿದ್ದವು, ಮುಂಬರುವ ದಿನಗಳಲ್ಲಿ ಸಂಸದರ ಸಂಖ್ಯೆ ಹೆಚ್ಚಾಗಲಿದೆ. ಅದಕ್ಕಾಗಿಯೇ ಸಂಸತ್ತಿನ ಹೊಸ ಕಟ್ಟಡವನ್ನು ನಿರ್ಮಿಸುವುದು ಇಂದಿನ ಅಗತ್ಯವಾಗಿತ್ತು. ನಮ್ಮ ಪ್ರಜಾಪ್ರಭುತ್ವವೇ ನಮಗೆ ಸ್ಫೂರ್ತಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಮ್ಮ ಸಂವಿಧಾನವೇ ನಮ್ಮ ನಿರ್ಣಯ ಎಂದು ಹೇಳಿದರು.

ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕು, ಗುರಿ ದೊಡ್ಡದು ದಾರಿಯೂ ಸುಲಭವಲ್ಲ, ಪ್ರತಿಯೊಬ್ಬ ಪ್ರಜೆಯೂ ಇದಕ್ಕಾಗಿ ಶ್ರಮಿಸಬೇಕಾಗಿದೆ. ಹೊಸ ನಿರ್ಣಯಗಳನ್ನು ತೆಗೆದುಕೊಳ್ಳಬೇಕು, ಹೊಸ ವೇಗವನ್ನು ತೆಗೆದುಕೊಳ್ಳಬೇಕು. ಭಾರತೀಯರ ನಂಬಿಕೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ ಎಂಬುದಕ್ಕೆ ಇತಿಹಾಸವೇ ಸಾಕ್ಷ ಎಂದಿರುವ ಅವರು ವೇದದ ಜತೆಗೆ ಬಸವೇಶ್ವರರ ಅನುಭವ ಮಂಟಪವನ್ನೂ ಸ್ಮರಿಸಿದ್ದಾರೆ.

ಮತ್ತಷ್ಟು ಓದಿ: New Parliament Building Inauguration: ನೂತನ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ

ಸ್ವಾತಂತ್ರ್ಯ ಹೋರಾಟ ಅನೇಕ ದೇಶಗಳಲ್ಲಿ ಹೊಸ ಪ್ರಜ್ಞೆಯನ್ನು ಜಾಗೃತಗೊಳಿಸಿತು. ಇಂದು ಪ್ರತಿಯೊಬ್ಬ ಭಾರತೀಯನೂ ಹೊಸ ಸಂಸತ್ತನ್ನು ನೋಡಿ ಹೆಮ್ಮೆ ಪಡುತ್ತಾನೆ. ಈ ಕಟ್ಟಡದಲ್ಲಿ ಕಲೆಯ ಜೊತೆಗೆ ಕೌಶಲ್ಯವೂ ಇದೆ. ಅದರಲ್ಲಿ ಸಂವಿಧಾನದ ಧ್ವನಿಯ ಜೊತೆಗೆ ಸಂಸ್ಕೃತಿಯೂ ಇದೆ. ಲೋಕಸಭೆಯ ಒಳಭಾಗವು ರಾಷ್ಟ್ರೀಯ ಪಕ್ಷಿ ನವಿಲನ್ನು ಆಧರಿಸಿದೆ.

ರಾಷ್ಟ್ರೀಯ ಪುಷ್ಪ ಕಮಲವನ್ನು ಆಧರಿಸಿದ ರಾಜ್ಯಸಭೆಯ ಒಳಭಾಗ. ಸಂಸತ್ತಿನ ಆವರಣದಲ್ಲಿ ರಾಷ್ಟ್ರೀಯ ಆಲದ ಮರವೂ ಇದೆ. ಈ ಕಟ್ಟಡದಲ್ಲಿ ನಮ್ಮ ದೇಶದ ವೈವಿಧ್ಯತೆಯನ್ನು ಸೇರಿಸಲಾಗಿದೆ. ಯುಪಿಯ ಕುಶಲಕರ್ಮಿಗಳು ರತ್ನಗಂಬಳಿಗಳನ್ನು ನೇಯ್ದಿದ್ದಾರೆ. ಈ ಕಟ್ಟಡದ ಪ್ರತಿಯೊಂದು ಕಣವೂ ಏಕ ಭಾರತ, ಶ್ರೇಷ್ಠ ಭಾರತ ಎಂಬ ಕನಸನ್ನು ಹೊಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:24 pm, Sun, 28 May 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ