AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Modi Mann Ki Baat: ಭಾರತದ ಶಕ್ತಿ ವಿವಿಧತೆಯಲ್ಲಿದೆ, ಯುವ ಸಂಗಮದ ಮಹತ್ವ ತಿಳಿಸಿದ ಪ್ರಧಾನಿ ಮೋದಿ

ಭಾರತದ ಶಕ್ತಿ ವಿವಿಧತೆಯಲ್ಲಿದೆ, ನಮ್ಮ ದೇಶದಲ್ಲಿ ನೋಡಬಹುದಾದ ಪ್ರದೇಶಗಳು, ಕಲಿಯಬಹುದಾದ ಸಂಸ್ಕೃತಿ, ಸಂಸ್ಕಾರ ತುಂಬಾ ಇದೆ.

Modi Mann Ki Baat: ಭಾರತದ ಶಕ್ತಿ ವಿವಿಧತೆಯಲ್ಲಿದೆ, ಯುವ ಸಂಗಮದ ಮಹತ್ವ ತಿಳಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
ನಯನಾ ರಾಜೀವ್
|

Updated on: May 28, 2023 | 11:38 AM

Share

ಭಾರತದ ಶಕ್ತಿ ವಿವಿಧತೆಯಲ್ಲಿದೆ, ನಮ್ಮ ದೇಶದಲ್ಲಿ ನೋಡಬಹುದಾದ ಪ್ರದೇಶಗಳು, ಕಲಿಯಬಹುದಾದ ಸಂಸ್ಕೃತಿ, ಸಂಸ್ಕಾರ ತುಂಬಾ ಇದೆ. ಶಿಕ್ಷಣ ಸಚಿವಾಲಯವು ಆರಂಭಿಸಿರುವ ಯುವ ಸಂಗಮ ಕಾರ್ಯಕ್ರಮದಿಂದ ದೇಶದ ವಿವಿಧ ಭಾಗಗಳಲ್ಲಿರುವ ಯುವಕರು ಒಟ್ಟಿಗೆ ಸೇರಿ ತಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ವಿನಿಯಮ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಮನ್​ ಕಿ ಬಾತ್(Mann Ki Baat)​ನ 101ನೇ ಸಂಚಿಕೆಯಲ್ಲಿ ಮಾತನಾಡಿದರು.

ಯುವ ಸಂಗಮ ಕಾರ್ಯಕ್ರಮದಲ್ಲಿ ಯುವಕರು ತಮ್ಮ ರಾಜ್ಯವನ್ನು ಬಿಟ್ಟು ಬೇರೆ ರಾಜ್ಯಗಳಿಗೆ ಭೇಟಿ ನೀಡಲು ಅಲ್ಲಿಯ ಸಂಸ್ಕೃತಿ, ಆಹಾರ ಸೇರಿದಂತೆ ವಿವಿಧತೆಯನ್ನು ನೋಡಲು ಅವಕಾಶ ಮಾಡಿಕೊಡಲಾಯಿತು ಇದನ್ನು ಯುವಕರು ಜೀವನ ಪರ್ಯಂತ ಮರೆಯುವುದಿಲ್ಲ.

ತಮ್ಮ ಜಪಾನ್ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಕೆಲವು ದಿನಗಳ ಹಿಂದೆ ನಾನು ಜಪಾನ್‌ಗೆ ಹೋಗಿದ್ದೆ, ಅಲ್ಲಿ ಹಿರೋಷಿಮಾ ಶಾಂತಿ ಸ್ಮಾರಕಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಅದೊಂದು ಭಾವನಾತ್ಮಕ ಕ್ಷಣ. ನಾವು ಇತಿಹಾಸದ ನೆನಪುಗಳನ್ನು ಉಳಿಸಿಕೊಂಡಾಗ, ಅದು ಮುಂದಿನ ಪೀಳಿಗೆಗೆ ಬಹಳಷ್ಟು ಸಹಾಯ ಮಾಡುತ್ತದೆ ಎಂದರು.

ಪ್ರಧಾನಿ ಮೋದಿ ಯುವ ಸಂಗಮ ಬಗ್ಗೆ ಪ್ರಸ್ತಾಪಿಸಿ, ಏಕ ಭಾರತ, ಶ್ರೇಷ್ಠ ಭಾರತ ಎಂಬ ಮನೋಭಾವಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ದೇಶದಲ್ಲಿ ಇಂತಹದೊಂದು ವಿಶಿಷ್ಟ ಪ್ರಯತ್ನ ನಡೆದಿದೆ ಎಂದರು.

ಪ್ರಧಾನಮಂತ್ರಿಯವರು ಅರುಣಾಚಲ ಪ್ರದೇಶದ ಗ್ಯಾಮರ್ ನ್ಯೋಕುಮ್ ಜಿ ಅವರೊಂದಿಗೆ ಸಂವಾದ ನಡೆಸಿದರು. ಯುವ ಸಂಗಮದಲ್ಲಿ ನಿಮ್ಮ ಅನುಭವದ ಬಗ್ಗೆ ಬ್ಲಾಗ್ ಬರೆಯಿರಿ ಎಂದು ಪ್ರಧಾನಿ ಮೋದಿ ಹೇಳಿದರು.

ಇದರಿಂದ ದೇಶದ ಇತರ ಯುವ ಸ್ನೇಹಿತರಿಗೆ ಏಕ್ ಭಾರತ್ ಶ್ರೇಷ್ಠ ಭಾರತ್ ಯೋಜನೆ ಏನೆಂದು ತಿಳಿಯುತ್ತದೆ. ಯುವ ಸಂಗಮಕ್ಕೆ ಸಂಬಂಧಿಸಿದಂತೆ ಬಿಹಾರದ ವಿಶಾಖಾ ಸಿಂಗ್ ಅವರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ತನ್ನ ಅನುಭವದ ಬಗ್ಗೆ ಬ್ಲಾಗ್ ಬರೆಯಲು ವಿಶಾಖಾಳನ್ನು ಕೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ
ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ
104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಮ್ಯಾಕ್ಸ್​ವೆಲ್
104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಮ್ಯಾಕ್ಸ್​ವೆಲ್