ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಲಘು ಭೂಕಂಪ: 3.4 ತೀವ್ರತೆ ದಾಖಲು

Kolhapur Earthquake: ಮಹರಾಷ್ಟ್ರದ ಕೊಲ್ಹಾಪುರದಲ್ಲಿ ಲಘು ಭೂಕಂಪ ಸಂಭವಿಸಿದ್ದು, 3.4 ತೀವ್ರತೆ ದಾಖಲಾಗಿದೆ. ಕೊಲ್ಹಾಪುರದಲ್ಲಿ ಬೆಳಗ್ಗೆ 06.45ಕ್ಕೆ ಭೂಕಂಪ ಸಂಭವಿಸಿದೆ.

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಲಘು ಭೂಕಂಪ: 3.4 ತೀವ್ರತೆ ದಾಖಲು
ಭೂಕಂಪ
Image Credit source: Hindustan Times

Updated on: Aug 16, 2023 | 9:17 AM

ಮಹರಾಷ್ಟ್ರದ ಕೊಲ್ಹಾಪುರದಲ್ಲಿ ಲಘು ಭೂಕಂಪ ಸಂಭವಿಸಿದ್ದು, 3.4 ತೀವ್ರತೆ ದಾಖಲಾಗಿದೆ. ಕೊಲ್ಹಾಪುರದಲ್ಲಿ ಬೆಳಗ್ಗೆ 06.45ಕ್ಕೆ ಭೂಕಂಪ ಸಂಭವಿಸಿದೆ. 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ತಕ್ಷಣದ ವರದಿಗಳಿಲ್ಲ. ಕೊಲ್ಹಾಪುರವು ಪಶ್ಚಿಮ ಮಹಾರಾಷ್ಟ್ರದಲ್ಲಿದೆ, ಮುಂಬೈನಿಂದ ಸುಮಾರು 375 ಕಿಮೀ ದೂರದಲ್ಲಿದೆ.
ಈ ನಡುವೆ ಸತಾರಾ ಜಿಲ್ಲೆಯ ಪಟಾನ್ ನಗರ ಸೇರಿದಂತೆ ಸಮೀಪದ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ. ಬೆಳಗ್ಗೆ 6.40ಕ್ಕೆ ಭೂಕಂಪ ಸಂಭವಿಸಿದೆ.

ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು. ಕೊಯ್ನಾ ಅಣೆಕಟ್ಟಿನಿಂದ 20 ಕಿ.ಮೀ ದೂರದಲ್ಲಿ ಭೂಕಂಪನದ ಅನುಭವವಾಗಿದ್ದು, ಅಣೆಕಟ್ಟು ಸುರಕ್ಷಿತವಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮತ್ತಷ್ಟು ಓದಿ: New Zealand Earthquake: ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ 6.1 ತೀವ್ರತೆಯ ಭೂಕಂಪ

ಮೂರು ತಿಂಗಳ ಹಿಂದೆ ಪಾಲ್ಘರ್‌ನಲ್ಲಿ ಭೂಕಂಪ ಸಂಭವಿಸಿತ್ತು , ಮೇ 27ರಂದು ಶನಿವಾರದಂದು ಮಹಾರಾಷ್ಟ್ರದ ಪಾಲ್ಘಡ ಜಿಲ್ಲೆಯಲ್ಲಿ 3.3 ಮತ್ತು 3.5 ತೀವ್ರತೆಯ ಲಘು ಕಂಪನಗಳು ಸಂಭವಿಸಿದವು. 3.3 ರ ತೀವ್ರತೆಯೊಂದಿಗೆ ಆರಂಭಿಕ ಕಂಪನವು ಸಂಜೆ 5:15 ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ, ನಂತರ 15 ನಿಮಿಷಗಳ ನಂತರ 5.28 ಕ್ಕೆ 3.5 ರ ತೀವ್ರತೆಯೊಂದಿಗೆ ಎರಡನೇ ಭೂಕಂಪ ಸಂಭವಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:06 am, Wed, 16 August 23